More

    ಗೆಲುವಿನ ನಗೆ ಬೀರಿದ 12 ತಂಡಗಳು

    ಕೊಡಗು : ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆಯ ವಿಜಯಲಕ್ಷ್ಮೀ ಮತ್ತು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ 14 ನೇ ದಿನದ ಪಂದ್ಯಾಟದಲ್ಲಿ 12 ತಂಡಗಳು ಗೆಲುವಿನ ನಗೆ ಬೀರಿದವು.
    ಕುಂಡಚಿರ ಮತ್ತು ಕಾನತಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾನತಂಡ ತಂಡ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಕುಂಡಚಿರ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿ 87 ರನ್ ಗಳ ಸೋಲು ಕಂಡಿತು. ಪುಲ್ಲಂಗಡ ಮತ್ತು ಮಲ್ಲಜಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪುಲ್ಲಂಗಡ ತಂಡ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತು. ಮಲ್ಲಜಿರ ತಂಡ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು.


    ಕೀತಿಯಂಡ ಮತ್ತು ಅಪ್ಪುಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಅಪ್ಪುಡ ತಂಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿತು. ಕೀತಿಯಂಡ ತಂಡ 8 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ 25 ರನ್ ಗಳ ಸೋಲು ಕಂಡಿತು. ಬೊಳ್ಳೇರ ಮತ್ತು ಮುಕ್ಕಾಟಿರ (ಪುಲಿಕೋಟ್) ತಂಡದ ಪಂದ್ಯಾಟದಲ್ಲಿ ಬೊಳ್ಳೇರ ತಂಡ ವಾಕ್ ಓವರ್ ಮೂಲಕ ಗೆಲುವು ಸಾಧಿಸಿತು. ಪೋರೇರ ಮತ್ತು ನೆರವಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪೋರೇರ ತಂಡ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ನೆರವಂಡ ತಂಡ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.


    ಚೀಯಣಮಾಡ ಮತ್ತು ಪೆಮ್ಮಣಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೀಯಣಮಾಡ ತಂಡ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ಪೆಮ್ಮಣಮಾಡ ತಂಡ 8 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 69 ರನ್ ಗಳಿಸಿತು. ಮೈದಾನ ಎರಡರಲ್ಲಿ : ಪಾಡಿಯಂಡ ಮತ್ತು ಪೆಬ್ಬಾಟಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪಾಡಿಯಂಡ ತಂಡ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಪೆಬ್ಬಾಟಿರ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿ 100 ರನ್ ಗಳ ಸೋಲು ಕಂಡಿತು.


    ಕೊಪ್ಪೀರ ಮತ್ತು ಚೆನಿಯಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೆನಿಯಪಂಡ ತಂಡ 8 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಕೊಪ್ಪೀರ ತಂಡ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ 22 ರನ್ ಗಳ ಸೋಲು ಕಂಡಿತು. ಕುಂದ್ರಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ ಕುಂದ್ರಂಡ ತಂಡ ವಾಕ ಓವರ್ ಮೂಲಕ ಗೆಲುವು ಸಾಧಿಸಿತು. ಪೆಮ್ಮಣಮಾಡ ಮತ್ತು ಪೊನ್ನಕಚ್ಚೀರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪೆಮ್ಮಣಮಾಡ ತಂಡ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಪೊನ್ನಕಚ್ಚೀರ ತಂಡ 8 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ 16 ರನ್ ಗಳ ಸೋಲು ಕಂಡಿತು.


    ಕೊಡಂದೇರ ಮತ್ತು ಮೇಕೇರಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೇಕೇರಿರ ತಂಡ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತು. ಕೊಡಂದೇರ ತಂಡ 8 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 82 ರನ್ ಗಳಿಸಿತು.
    ಪೊರುಕೊಂಡ ಮತ್ತು ಕಡೇಮಾಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಪೊರುಕೊಂಡ ತಂಡ 8 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು. ಕಡೇಮಾಡ ತಂಡ 4.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts