More

    ನಿರ್ಭಯಾ ಹಂತಕರಿಗೆ ನಾಳೆಯೇ ಗಲ್ಲು ಫಿಕ್ಸ್​; ಪವನ್​ ಗುಪ್ತಾ ಕ್ಯುರೇಟಿವ್​ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್​

    ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್​ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್​ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ. ಈ ಮೂಲಕ ನಾಳೆ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಗ್ಯಾರಂಟಿಯಾಗಿದೆ.

    ಪವನ್​ ಗುಪ್ತಾ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇರುವ ಕೊನೆಯ ಮಾರ್ಗವೆನ್ನುವಂತೆ ಸುಪ್ರೀಂ ಕೋರ್ಟ್​ಗೆ ಕ್ಯುರೇಟಿವ್​ ಅರ್ಜಿಯನ್ನು ಸಲ್ಲಿಸಿದ್ದ. ಪ್ರಕರಣ ನಡೆದಾಗ ತನಗೆ 18 ವರ್ಷ ತುಂಬಿರಲಿಲ್ಲ, ಆಗ ನಾನಿನ್ನೂ ಬಾಲಕನಾಗಿದ್ದೆ ಎಂದು ಆತ ಅರ್ಜಿಯಲ್ಲಿ ಹೇಳಿದ್ದ. ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಆತ ಅರ್ಜಿಯಲ್ಲಿ ಕೇಳಿಕೊಂಡಿದ್ದ. ಆದರೆ ಇದೀಗ ಆತನ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತೆಗೆದುಹಾಕಿದೆ.

    ನ್ಯಾಯಮೂರ್ತಿ ಎನ್​.ವಿ.ರಮಣ ಅವರನ್ನೊಳಗೊಂಡ ಆರು ನ್ಯಾಯಮೂರ್ತಿಗಳ ಪೀಠವು ಇಂದು ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿದೆ. “ಮೌಖಿಕ ವಿಚಾರಣೆಯ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಾವು ಕ್ಯುರೇಟಿವ್​ ಅರ್ಜಿ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಅದನ್ನು ವಜಾ ಗೊಳಿಸಿದ್ದೇವೆ” ಎಂದು ನ್ಯಾಯಾಲಯವು ತಿಳಿಸಿದೆ.

    ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ನಾಳೆ ಬೆಳಗ್ಗೆ 5.30ಕ್ಕೆ ನಿಗದಿಯಾಗಿದ್ದು, ಏಳು ವರ್ಷದ ಹಿಂದಿನ ಪ್ರಕರಣಕ್ಕೆ ನಾಳೆ ಅಂತಿಮ ಶಿಕ್ಷೆ ಸಿಗಲಿದೆ. (ಏಜೆನ್ಸೀಸ್​)

    ಎಚ್ಚರ! ಕರೊನಾ ವೈರಸ್ ಸೋಂಕಿ​ಗಿಲ್ಲ ಮನುಷ್ಯರ ವಯಸ್ಸಿನ ಇತಿಮಿತಿ, ಮುಂಜಾಗ್ರತಾ ಕ್ರಮ ಇದ್ದಷ್ಟೂ ಒಳಿತೆನ್ನುತ್ತಾರೆ ಪರಿಣತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts