More

    ಜ್ಞಾನವಾಪಿ ಮಸೀದಿ ಪ್ರಕರಣ: ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್​, ಗುರುವಾರಕ್ಕೆ ಮತ್ತೆ ವಿಚಾರಣೆ

    ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣ ಸದ್ಯ ಸುಪ್ರೀಂಕೋರ್ಟ್​ ಅಂಗಳದಲ್ಲಿದೆ. ಮಂಗಳವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ನ್ಯಾಯಾಲಯ ಎರಡು ದಿನಗಳ ಕಾಲ ಮುಂದೂಡಿದೆ.

    ಮುಂದಿನ ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್​​ ಶಿವಲಿಂಗ ಪತ್ತೆಯಾದ ನಿಖರ ಜಾಗ ಯಾವುದು ಎಂದು ಕೇಳಿದೆ. ಅಲ್ಲದೇ ಸರ್ವೆ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂದೂ ಕೂಡ ಪ್ರಶ್ನಿಸಿದೆ.

    ಮಸೀದಿಯಲ್ಲಿ ಸರ್ವೆ ಪ್ರಶ್ನಿಸಿ ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಇನ್ನು ಸರ್ವೆದಾರರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಸಂಪೂರ್ಣ ವರದಿ ಸಲ್ಲಿಕೆಗೆ ಎರಡು ದಿನಗಳ ಕಾಲಾವಕಾಶ ನೀಡಿದೆ.

    ಜ್ಞಾನವಾಪಿಯಲ್ಲಿ ಪತ್ತೆಯಾಗಿರುವ ಶಿವಲಿಂಗದ ಜಾಗವನ್ನು ಸೀಲ್​ ಮಾಡಲು ಹಾಗೂ ಭದ್ರತೆಯನ್ನು ಒದಗಿಸಲು ವಾರಾಣಸಿ ಜಿಲ್ಲಾಧಿಕಾರಿಗೆ ಸೂಚಿಸಿದೆ. (ಏಜೆನ್ಸೀಸ್​)

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮುಚ್ಚಿಟ್ಟಿದ್ದು ಹೇಗೆ? ಹಿಂದೂಪರ ವಕೀಲ ಹೇಳಿದ ಬೆಚ್ಚಿ ಬೀಳಿಸುವ ಸತ್ಯ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts