More

    ಥರ್ಮಲ್​ ಸ್ಕ್ರೀನಿಂಗ್​ ವೇಳೆ ಕುಸಿದುಬಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ

    ಚಾಮರಾಜನಗರ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಬರುವ ತವಕದಲ್ಲಿ ಮನೆಯ ಬಳಿ ಬಿದ್ದು ಹಣೆಗೆ ಪೆಟ್ಟಾದರೂ ಲೆಕ್ಕಿಸದೆ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ ಥರ್ಮಲ್ ಸ್ಕ್ರೀನಿಂಗ್​ಗೆ ಒಳಗಾಗುವ ವೇಳೆ ಸ್ಥಳದಲ್ಲೇ ಅಸ್ವಸ್ಥಳಾಗಿ ಕುಸಿದು ಬಿದ್ದಳು.

    ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿನಿ ಬೀಬಿ ಹಾಜೀರ ಇಂದು ಬೆಳಗ್ಗೆ ಮನೆ ಬಳಿಯೇ ಬಿದ್ದು ಗಾಯ ಮಾಡಿಕೊಂಡಿದ್ದಳು. ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪೋಷಕರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾಳೆ. ಥರ್ಮಲ್ ಸ್ಕ್ರೀನಿಂಗ್​ಗೆ ಒಳಾಗುವ ವೇಳೆ ಅಸ್ವಸ್ಥಗೊಂಡ ವಿದ್ಯಾರ್ಥಿನಿಗೆ ಸ್ಥಳದಲ್ಲೇ ಇದ್ದ ಆರೋಗ್ಯ ಸಹಾಯಕಿ ಚಿಕಿತ್ಸೆ ನೀಡಿ ಉಪಚರಿಸಿದರು. ಆದರೂ ಆಕೆ ಪರೀಕ್ಷೆಗೆ ಗೈರು ಆಗಬೇಕಾಯಿತು. ಇದನ್ನೂ ಓದಿರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ ಶಿಕ್ಷಕ ಅಪಘಾತದಲ್ಲಿ ಸಾವು, ಮಗನಿಗೆ ಗಾಯ 

    ವಿದ್ಯಾರ್ಥಿನಿ ಅಸ್ವಸ್ಥಗೊಂಡ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಡಿಸಿ ಮತ್ತು ಎಸ್ಪಿ ಅವರು, ಪರೀಕ್ಷೆ ಬರೆಯಲು ಭಯವಾದರೆ ಬೇಡ. ಇಂದಿನ‌ ಪರೀಕ್ಷೆಯನ್ನ ಪೂರಕ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು. ಚಿಕಿತ್ಸೆಗೆಂದು ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ಕಳುಹಿಸಿದರು.

    ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts