More

    ಅಚ್ಚರಿ ಮೂಡಿಸಿದ ಮೂರು ಕಾಲಿನ ಆನೆ; ಈ ಸ್ಟೋರಿ ಓದಿ..

    ದಕ್ಷಿಣ ಆಫ್ರಿಕಾ: ಮೂರು ಕಾಲಿನ ಆನೆಯೊಂದು ದಕ್ಷಿಣ ಆಫ್ರಿಕಾ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಆನೆಯ ಕಥೆಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

    ಈ ಮೂರು ಕಾಲಿನ ಆನೆಯ ಸ್ಪೂರ್ತಿದಾಯಕ ಕಥೆಯನ್ನು ಕಂಟೆಂಟ್ ಕ್ರಿಯೇಟರ್ ಡೈಲನ್ ಪೊನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಸತಾರಾದಲ್ಲಿ ಈ ಮೂರು ಕಾಲಿನ ಆನೆಯನ್ನು ನೋಡಿದ ಅನುಭವವನ್ನು ನೆನಪಿಸಿಕೊಂಡಿದ್ದಾರೆ.

    ಇದನ್ನೂ ಓದಿ: VIDEO| ಮದುವೆ ಶಾಸ್ತ್ರ ನಡೆಯುವಾಗಲೇ ನಿದ್ರೆಗೆ ಜಾರಿದ ವಧು; ವರ ಮಾಡಿದ್ದೇನು ನೋಡಿ..

    ಆನೆಗಳ ಗುಂಪು ನೀರಿನಲ್ಲಿ ಆಟವಾಡುತ್ತಿದ್ದವು. ಈ ಆನೆ ಒಂದು ಕಾಲು ಕಳೆದುಕೊಂಡಿದ್ದು, ಮೊದಲಿಗೆ ತಿಳಿದಿರಲ್ಲಿಲ್ಲ. ತನ್ನ ಆನೆಗಳ ಹಿಂಡಿನೊಂದಿಗೆ  ಸುಂದರ ಜೀವನ ನಡೆಸುತ್ತಿತ್ತು ಈ ಮುದ್ದಾದ ಆನೆ. ದುರದೃಷ್ಟವಶಾತ್ ಆನೆಗಳಿಗೆ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಿಂದಾಗಿ ಈ ಆನೆ ತನ್ನ ಅಂಗವನ್ನು ಕಳೆದುಕೊಂಡಿರಬಹುದು ಅಥವಾ ನರಭಕ್ಷಕ ದಾಳಿಗೆ ಬಲಿಯಾಗಿರಬಹುದು ಎಂಬುದು ತಿಳಿದಿಲ್ಲ. ಆದರೆ ಈ ಆನೆಗೆ ಮೂರು ಕಾಲುಗಳು ಮಾತ್ರ ಇದೆ. ಆನೆ ತನ್ನ ಹಿಂಡುಗಳೊಂದಿಗೆ ಓಡಾಡಿಕೊಂಡು ತನ್ನದೇ ರೀತಿಯಲ್ಲಿ ಜೀವನವನ್ನುನಡೆಸುತ್ತಿದೆ. ಇದು ಹೃದಯಸ್ಪರ್ಶಿಯಾಗಿತ್ತು ಎಂದು ತಮ್ಮ ಅನುಭವವವನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: PUCಯಲ್ಲಿ ಕಡಿಮೆ ಮಾರ್ಕ್ಸ್ ತೆಗೆದ ವಧು; ವಿವಾಹ ಕ್ಯಾನ್ಸಲ್ ಮಾಡಿದ ವರ

    ಇಂತಹ ಯಾವುದೇ ಇತರ ಗಾಯಗೊಂಡ ಪ್ರಾಣಿಗಳನ್ನು ರಸ್ತೆಯ ಸಮೀಪದಲ್ಲಿ ನೋಡಿದರೆ, ನಿಮ್ಮಿಂದ ಆದ ಸಹಾಯ ಮಾಡಿ. ಮಾನವೀಯತೆಯಿಂದ ಅವುಗಳನ್ನು ನೋಡಿ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಇತಿಹಾಸದಲ್ಲಿ ನಂಜೇಗೌಡ, ಉರಿಗೌಡ‌ ಇದ್ದಾರಾ?; ಡಿಕೆಶಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts