More

    ರೂ 800 ದಾಟಿದ್ದ ಈ ಷೇರಿನ ಬೆಲೆ ಈಗ ಬರೀ 2 ರೂಪಾಯಿ: ಅನಿಲ್ ಅಂಬಾನಿ ಕಂಪನಿಯ ಆಸ್ತಿ ಮಾರಾಟಕ್ಕೆ ಅನುಮತಿ

    ಮುಂಬೈ: ಮುಂಬೈನಲ್ಲಿನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ) ಗುರುವಾರ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಕಂಪನಿಯ ರಿಯಲ್ ಎಸ್ಟೇಟ್ ಆಸ್ತಿ ಮಾರಾಟಕ್ಕೆ ಅನುಮತಿ ನೀಡಿದೆ. ದಿವಾಳಿತನ ನ್ಯಾಯಮಂಡಳಿಯಾಗಿರುವ ಎನ್‌ಸಿಎಲ್‌ಟಿ ಆದೇಶದ ಪ್ರಕಾರ, ಈ ಕಂಪನಿಯ ಆಸ್ತಿಗಳನ್ನು ಮಾರಾಟ ಮಾಡಬಹುದಾಗಿದೆ.

    ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಅವರು ಹಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ, ಅವರ ಕಂಪನಿಗಳು ಭಾರಿ ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಹಿಂದೆ ಅನಿಲ್ ಅಂಬಾನಿಯವರ ಅತ್ಯಂತ ಲಾಭದಾಯಕ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಕಮ್ಯುನಿಕೇಷನ್ಸ್ ತನ್ನ ಷೇರುದಾರರಿಗೆ ಭಾರಿ ನಷ್ಟವನ್ನುಂಟು ಮಾಡಿದೆ.

    ಟೆಲಿಕಾಂ ಕಂಪನಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿತ್ತು. ಆದರೆ, ನಂತರದಲ್ಲಿ ಹೂಡಿಕೆದಾರರ ಸಂಪತ್ತನ್ನು ನಾಶ ಮಾಡಿತು, ಹಿಂದೊಮ್ಮೆ ಬಿಎಸ್​ಇ ಷೇರು ಮಾರುಕಟ್ಟೆಯಲ್ಲಿ 800 ರೂಪಾಯಿ ಇದ್ದ ಈ ಕಂಪನಿಯ ಷೇರು ಬೆಲೆ ಈಗ 2 ರೂಪಾಯಿಗೆ ಕುಸಿದಿದೆ.

    ಇನ್ನೂ ಗಮನಾರ್ಹ ಸಂಗತಿಯೆಂದರೆ, ಕಂಪನಿಯ ಪ್ರವರ್ತಕರಾಗಿ ರಿಲಯನ್ಸ್ ಕಮ್ಯುನಿಕೇಷನ್ಸ್‌ನಲ್ಲಿ ಅಂಬಾನಿ ಅವರ ಪಾಲಿನ ಮೊತ್ತ ಈಗ ಅರ್ಧ ಕೋಟಿ ರೂಪಾಯಿಗಿಂತಲೂ ಕಡಿಮೆಯಾಗಿದೆ. 2023 ರಲ್ಲಿ ಅನಿಲ್ ಅಂಬಾನಿ ಅವರ ಹಿರಿಯ ಸಹೋದರ ಮತ್ತು ಆರ್‌ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಪ್ರತಿದಿನಕ್ಕೆ ನೀಡಿದ ದೇಣಿಗೆಯ ಅರ್ಧದಷ್ಟು ಮೊತ್ತ ಇದಾಗಿದೆ.

    ಇತ್ತೀಚೆಗೆ ಬಿಡುಗಡೆಯಾದ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿಯ ಪ್ರಕಾರ ಮುಖೇಶ್​ ಅಂಬಾನಿ ಅವರು 2023ರಲ್ಲಿ ಪ್ರತಿದಿನಕ್ಕೆ 1.03 ಕೋಟಿ ರೂಪಾಯಿ ದಾನ ಮಾಡಿದ್ದಾರೆ.

    ರಿಲಯನ್ಸ್ ಕಮ್ಯುನಿಕೇಷನ್ಸ್‌ನಲ್ಲಿ ಅನಿಲ್ ಅಂಬಾನಿ ಅವರ ಪಾಲು ಪ್ರಸ್ತುತ ಕೇವಲ 46 ಲಕ್ಷ ರೂ. ಇದೆ. ಸೆಪ್ಟೆಂಬರ್ 2023 ರ ತ್ರೈಮಾಸಿಕದಲ್ಲಿ, ಅಂಬಾನಿ ರಿಲಯನ್ಸ್ ಕಮ್ಯುನಿಕೇಷನ್ಸ್‌ನ 18,59,171 ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ರೂ 2.49 ರ ಷೇರಿನ ಬೆಲೆಯಲ್ಲಿ, ಅವರ ಒಟ್ಟು ಪಾಲಿನ ಮೊತ್ತ ರೂ 46,29,335 ಆಗಿದೆ.

    ಜನವರಿ 10, 2008ರಂದು ಆರ್‌ಕಾಮ್ ಷೇರು ಬೆಲೆಯು ರೂ 820.80 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು, ಆಗ ಈ ಕಂಪನಿಯಲ್ಲಿ ಅನಿಲ್ ಅಂಬಾನಿ ಅವರ ಪಾಲಿನ ಮೊತ್ತ 152 ಕೋಟಿ ರೂ. ಆಗಿತ್ತು.

    ಕಳೆದ ಎರಡು ವರ್ಷಗಳಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರು ಬೆಲೆ ಶೇಕಡಾ 36.80 ರಷ್ಟು ಕುಸಿದಿದೆ. ಕಳೆದ 5 ವರ್ಷಗಳಲ್ಲಿ ಶೇಕಡಾ 84.21 ಶೇಕಡಾ ಮತ್ತು 10 ವರ್ಷಗಳಲ್ಲಿ, ಶೇಕಡಾ 98.09 ರಷ್ಟು ನಷ್ಟ ಕಂಡಿದೆ.

    ‘ಭಾರತಕ್ಕೆ ಬೇಕು ಬಾಂಬ್’: ಪೊಲೀಸರಿಗೇ ಆತಂಕ ಮೂಡಿಸಿರುವ ಸಂಸತ್​ ಭದ್ರತಾ ಉಲ್ಲಂಘನೆ ಪ್ರಕಣರದ ಮಾಸ್ಟರ್​ಮೈಂಡ್​

    ಗಂಭೀರ ಕಳವಳಕಾರಿ ವಿಷಯ’: ಸಂಸತ್ತಿನ ಭದ್ರತಾ ಲೋಪದ ಕುರಿತು ಸಂಸದರಿಗೆ ಪತ್ರ ಬರೆದ ಸ್ಪೀಕರ್​

    ಮುಂದಿನ ವಾರ ಮಾರುಕಟ್ಟೆಗೆ 11 ಐಪಿಒಗಳು ಲಗ್ಗೆ: ಹೊಸ ಕಂಪನಿಯ ಷೇರು ಖರೀದಿಸುವವರಿಗೆ ಸುಗ್ಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts