More

    ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಜೂನ್ 29ಕ್ಕೆ ಫೈನಲ್: ಈ ಬಾರಿ ಟೂರ್ನಿಯ ಸ್ವರೂಪ ಹೇಗಿದೆ ಗೊತ್ತಾ!

    ಬೆಂಗಳೂರು: ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 9ನೇ ಆವೃತ್ತಿಯ ಚುಟುಕು ಕ್ರಿಕೆಟ್ ವಿಶ್ವ ಸಮರದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಬಿಡುಗಡೆ ಮಾಡಿದೆ. ಜೂನ್ 1ರಂದು ಜಂಟಿ ಆತಿಥೇಯ ಅಮೆರಿಕ ಹಾಗೂ ಕೆನಡ ತಂಡಗಳು ಡಲ್ಲಾಸ್‌ನಲ್ಲಿ ಮುಖಾಮುಖಿ ಆಗುವುದರೊಂದಿಗೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದೆ.

    ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಕಾದಾಟ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಿಗದಿಪಡಿಸಲಾಗಿದೆ. ಅದಕ್ಕೆ ಮುನ್ನ ಜೂನ್ 5ರಂದು ಐರ್ಲೆಂಡ್ ಎದುರು ಟೀಮ್ ಇಂಡಿಯಾ ಕಣಕ್ಕಿಳಿಯಲಿದ್ದು, ದಶಕದ ಐಸಿಸಿ ಪ್ರಶಸ್ತಿ ಬರ ನೀಗಿಸುವ ತನ್ನ ಅಭಿಯಾನ ಆರಂಭಿಸಲಿದೆ.

    ಟೂರ್ನಿಯ ಸ್ವರೂಪ: ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ 20 ತಂಡಗಳು ಕಣಕ್ಕಿಳಿಯಲಿದ್ದು, 2 ಸುತ್ತುಗಳಲ್ಲಿ ಲೀಗ್ ಕಾದಾಟ ನಡೆಯಲಿದೆ. ಮೊದಲ ಸುತ್ತಿನಲ್ಲಿ ತಲಾ 5ರಂತೆ 4 ಗುಂಪುಗಳಾಗಿ ತಂಡಗಳನ್ನು ವಿಭಾಗಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು 2ನೇ ಸುತ್ತು ‘ಸೂಪರ್-8’ಗೆ ಅರ್ಹತೆ ಪಡೆಯಲಿವೆ. ಸೂಪರ್-8ರಲ್ಲೂ 2 ಗುಂಪುಗಳಲ್ಲಿ ತಲಾ 4ರಂತೆ 8 ತಂಡಗಳು ವಿಭಜನೆಗೊಳ್ಳಲಿವೆ. ಇಲ್ಲೂ ರೌಂಡ್ ರಾಬಿನ್ ಲೀಗ್ ನಡೆದ ಬಳಿಕ ಪ್ರತಿ ಗುಂಪಿನಲ್ಲಿ ಅಗ್ರ 2 ತಂಡಗಳು ಸೆಮಿೈನಲ್‌ಗೇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts