More

    ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನ

    ತರೀಕೆರೆ: ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗಲಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
    ಸೋಮವಾರ ಅಜ್ಜಂಪುರದ ಬುಕ್ಕಾಂಬುದಿಯಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 88ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
    ಸತ್ಯದ ತಳಹದಿ ಮೇಲೆ ಸೈದ್ಧಾಂತಿಕ ನಿಲುವು ಗಟ್ಟಿಗೊಳಿಸಲು ಸಾಕಷ್ಟು ಮಹಾತ್ಮರು ಶ್ರಮಿಸಿದ್ದಾರೆ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನವಾಗಿದೆ. ಬಿತ್ತಿದ ಬೀಜ ಸಲು ಬಂದಂತೆ ನಮ್ಮ ಆಚರಣೆಯಂತೆ ಲ ಪ್ರಾಪ್ತಿಯಾಗಲಿದೆ. ಈ ದಿಸೆಯಲ್ಲಿ ಮನುಷ್ಯನಾದವನು ಜೀವನದಲ್ಲಿ ಕರ್ತವ್ಯ, ಶಿಸ್ತು, ಶ್ರದ್ಧೆ, ಛಲ ಮತ್ತು ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
    ಜ್ಞಾನ ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯವೆಂದು ಅರಿತ ಲಿಂಗೈಕ್ಯ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ತಪೋನುಷ್ಠಾನ ಮತ್ತು ಜ್ಞಾನದ ಮೂಲಕ ಭಕ್ತರ ಬದುಕನ್ನು ಹಸನಗೊಳಿಸಿದರಾದರೂ, ಭೌತಿಕ ಬದುಕು ಶ್ರೀಮಂತಗೊಂಡರೆ ಸಾಲದು ಅದರೊಂದಿಗೆ ಆಂತರಿಕ ಜೀವನ ಪರಿಶುದ್ಧಗೊಳಿಸಲು ಶ್ರಮಿಸಬೇಕು ಎಂದು ಪ್ರತಿಪಾದಿಸಿದರು.
    ಸಿದ್ದರಬೆಟ್ಟ, ಬೀರೂರು, ತಾವರೆಕೆರೆ, ಬಿಳಕಿ, ಮಳಲಿಮಠ, ನಂದಿಪುರ, ಹಾರನಹಳ್ಳಿ, ಕಾರ್ಜುವಳ್ಳಿ, ಹರಪನಹಳ್ಳಿ, ಸಂಗೊಳ್ಳಿ, ಚನ್ನಗಿರಿ ಪಟ್ಟಾಧ್ಯಕ್ಷರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಚಿಕ್ಕಾನಂಗಲ ವಿರೂಪಾಕ್ಷಪ್ಪ, ಕೂಡ್ಲಗೆರೆ ಹಾಲೇಶ, ಶ್ರೀರಂಭಾಪುರಿ ಜಗದ್ಗುರುಳಿಂದ ಗುರುರಕ್ಷೆ ಸ್ವೀಕರಿಸಿದರು.
    ಪ್ರಾತಃಕಾಲ ಲಿಂಗೈಕ್ಯ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಲ ಜರುಗಿತು. ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ, ಉಪನ್ಯಾಸಕ ಡಾ.ಮಮತಾ ಸಾಲಿಮಠ, ಪ್ರಮುಖರಾದ ಎಂ.ಸಿ.ಶಿವಾನಂದಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts