More

    ಕತ್ತೆ ಹೊತ್ತು ನಡೆಯುತ್ತಿರುವ ಯೋಧ: ವೈರಲ್​​ ಫೋಟೋ ಹಿಂದಿನ ನಿಜವಾದ ಕತೆ ಮನಕಲಕುವಂತಿದೆ!

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಪಿಡುಗನ್ನು ಹೋಗಲಾಡಿಸಲು ಜನರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ಕುರಿತು ಸಾಕಷ್ಟು ಮೀಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ವಿಶೇಷವಾದ ಫೋಟೋವೊಂದು ಸಹ ವೈರಲ್​ ಆಗಿದೆ. ಆ ಫೋಟೋದಲ್ಲಿ ಯೋಧನೊಬ್ಬ ಸಿಡಿಗುಂಡು ಪ್ರದೇಶ ಅಥವಾ ಗಣಿ ಪ್ರದೇಶದಲ್ಲಿ ಕತ್ತೆಯನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಯುತ್ತಿರುವ ದೃಶ್ಯವಿದೆ.

    ಕರೊನಾ ನಿರ್ಲಕ್ಷಿಸುತ್ತಿರುವರನ್ನು ಕತ್ತೆಗೆ ಹೋಲಿಕೆ ಮಾಡಿ ಮೀಮ್ಸ್​ ಹರಿಬಿಡಲಾಗಿದೆ. ಇದೇ ಫೋಟೋವನ್ನು ಬಯೋಕಾನ್​ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಕಿರಣ್​ ಮಜುಂದಾರ್​ ಶಾ ಶೇರ್​ ಮಾಡಿಕೊಂಡ ಬಳಿಕ ಫೋಟೋ ಮತ್ತಷ್ಟು ವೈರಲ್​ ಆಗಿದೆ. ಆದರೆ, ಫೋಟೋದಲ್ಲಿ ಹೇಳಿರುವ ಮಾಹಿತಿ ಮಾತ್ರ ತಪ್ಪು ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

    ಇದನ್ನೂ ಓದಿರಿ: ಮಿಂಚಿದ ಮ್ಯಾಕ್ಸ್‌ವೆಲ್, ಶಾಬಾಜ್ ಅಹ್ಮದ್; ಆರ್‌ಸಿಬಿಗೆ ಸತತ 2ನೇ ಜಯ

    ಹೌದು, ವೈರಲ್​ ಚಿತ್ರವನ್ನು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತೆಗೆದಿರುವುದು ಎಂದು ಹೇಳಲಾಗುತ್ತಿದೆ. ಆದರೆ, ಸ್ನೊಪ್ಸ್​ ಹೆಸರಿನ ಫ್ಯಾಕ್ಟ್​ಚೆಕ್​ ವೆಬ್​ಸೈಟ್​ ಫೋಟೋ ಕುರಿತು ಪರಿಶೀಲಿಸಿದಾಗ ವಿಶ್ವಯುದ್ಧಕ್ಕೂ ಮತ್ತು ಫೋಟೋಗೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಯಾವುದೇ ಸಿಡಿಗುಂಡು ಅಥವಾ ಗಣಿ ಪ್ರದೇಶಕ್ಕೂ ಸಂಪರ್ಕವಿಲ್ಲ.

    ಇನ್ನು ಫೋಟೋ ಕುರಿತ ನಿಜವಾದ ಮಾಹಿತಿಯತ್ತ ಬಂದಾಗ ಇದನ್ನು 1958ರ ಅಲ್ಜೀರಿಯನ್ ಯುದ್ಧದ ಸಮಯದಲ್ಲಿ ಸರೆಹಿಡಿಯಲಾಗಿದೆ. ಫ್ರೆಂಚ್ ವಿದೇಶಿ ಸೇನೆ ಯೋಧರೊಬ್ಬರು ಕತ್ತೆಯನ್ನು ರಕ್ಷಿಸುತ್ತಿರುವ ದೃಶ್ಯ ಇದಾಗಿದೆ. ಕತ್ತೆಗೆ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದಾಗ ಅದನ್ನು ತನ್ನ ಹೆಗಲ ಮೇಲೆ ಯೋಧ ಹೊತ್ತು ನಡೆದ ಮನಕಲುಕುವ ದೃಶ್ಯವಿದು. ಯುದ್ಧದ ಬಳಿಕ ಮಾಸ್ಕಟ್​ ಘಟಕವು ಕತ್ತೆಯನ್ನು ದತ್ತು ಸ್ವೀಕಾರ ಮಾಡಿದ ಬಳಿಕ ಅದಕ್ಕೆ “ಬಾಂಬಿ” ಎಂದು ಹೆಸರಿಡಲಾಯಿತು.

    ಇದನ್ನೂ ಓದಿರಿ: ಬೆಂಗಳೂರಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ: ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆ್ಯಂಬುಲೆನ್ಸ್​ಗಳು!

    ದಶಕಗಳ ನಂತರ ಈ ಫೋಟೋವು ಇದೀಗ ಜನಪ್ರಿಯವಾಗಿದ್ದು, ಅದರ ವಾಸ್ತವಾಂಶವೇ ವಿರೂಪಗೊಂಡಿದೆ. ಇದನ್ನು 2020ರ ಏಪ್ರಿಲ್ 6ರಂದು ನಡೆದ ಕರೊನಾ ವೈರಸ್ ಬ್ರೀಫಿಂಗ್ ಸಮಯದಲ್ಲಿ ನ್ಯೂಜೆರ್ಸಿಯ ಗವರ್ನರ್ ಫಿಲ್ ಮರ್ಫಿ ಸಹ ಹಂಚಿಕೊಂಡಿದ್ದರು. ಸದ್ಯ ವೈರಲ್​ ಆಗುತ್ತಿರುವ ಫೋಟೋಗೂ ವಿಶ್ವಯುದ್ಧಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

    ಸಂದರ್ಶನ: ಮಸ್ಕಿಯಲ್ಲಿ ಅಭಿವೃದ್ಧಿಗೆ ಮತ, ಅನುಕಂಪಕ್ಕಲ್ಲ: ಬಿವೈ ವಿಜಯೇಂದ್ರ

    ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ: ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್​

    ಡಾ. ರಾಜ್ ಎಂಬ ಕಲಾ ಕಮಲ ರಾಜ ಹಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts