More

    ಏಕದಿನ ವಿಶ್ವಕಪ್ ಫೈನಲ್ ಪಿಚ್‌ಗೆ ರೇಟಿಂಗ್ ನೀಡಿದ ಐಸಿಸಿ: ವಾಂಖೆಡೆ ಅತ್ತುತ್ತಮ ಎಂದ ಮ್ಯಾಚ್ ರೆಫ್ರಿ

    ನವದೆಹಲಿ: ಏಕದಿನ ವಿಶ್ವಕಪ್ ಟೂರ್ನಿಯ ೈನಲ್ ಪಂದ್ಯಕ್ಕೆ ಬಳಸಲಾಗಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸೇರಿ ಇತರ ಮೂರು ಕ್ರೀಡಾಂಗಣಗಳ ಪಿಚ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಾಧಾರಣ ರೇಟಿಂಗ್ ನೀಡಿದೆ.

    ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ ೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿತು. ಈ ಪಂದ್ಯಕ್ಕೆ ಬಳಸಿದ್ದ ಪಿಚ್ ಬಗ್ಗೆ ಕೆಲ ಕ್ರಿಕೆಟಿಗರು ಕಳವಳವ್ಯಕ್ತಪಡಿಸಿದ್ದರು. ಮ್ಯಾಚ್ ರೆಫ್ರಿ ಹಾಗೂ ಜಿಂಬಾಬ್ವೆ ಮಾಜಿ ಬ್ಯಾಟರ್ ಆಂಡಿ ಪೈಕ್ರಾಫ್ಟ್ೃ, ನರೇಂದ್ರ ಮೋದಿ ಕ್ರೀಡಾಂಗಣದ ಔಟ್‌ಫೀಲ್ಡ್ ಅನ್ನು ಉತ್ತಮ ಎಂದು ರೇಟಿಂಗ್ ನೀಡಿದ್ದಾರೆ.

    ದಕ್ಷಿಣ ಆಫ್ರಿಕಾ ಹಾಗೂ ಆಸೀಸ್ ನಡುವಿನ ಸೆಮಿೈನಲ್ ಪಂದ್ಯದ ಆತಿಥ್ಯವಹಿಸಿದ್ದ ಕೋಲ್ಕತದ ಈಡನ್ ಗಾರ್ಡನ್ಸ್ ಪಿಚ್‌ನ ಔಟ್‌ಫೀಲ್ಡ್‌ಗೆ ಐಸಿಸಿ ಮ್ಯಾಚ್ ರೆಫರಿ ಮತ್ತು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಉತ್ತಮ ರೇಟಿಂಗ್ ನೀಡಿದ್ದಾರೆ. ಲಖನೌ, ಚೆನ್ನೈನ ಚೆಪಾಕ್ ಅಂಗಣ ಐಸಿಸಿಯಿಂದ ಸಾಧಾರಣ ರೇಟಿಂಗ್ ಪಡೆದ ಇತರ ಪಿಚ್ ಆಗಿವೆ. ಆದರೆ, ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್‌ನಲ್ಲಿ ಬಳಸಲಾದ ವಾಂಖೆಡೆ ಸ್ಟೇಡಿಯಂ ಪಿಚ್‌ಗೆ ಅತ್ಯುತ್ತಮ ರೇಟಿಂಗ್ ಸಿಕ್ಕಿದೆ. ಆ ಪಂದ್ಯದ ಮುನ್ನ ಆತಿಥೇಯರು ಪಿಚ್ ಅನ್ನು ಬದಲಾಯಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಐಸಿಸಿಯ ನಿಯಮ ಪ್ರಕಾರ, ಪಿಚ್‌ಗೆ ಕ್ಯಾರಿ ಅಥವಾ ಬೌನ್ಸ್ ಅಥವಾ ಸಾಂದರ್ಭಿಕ ಸೀಮ್ ಚಲನೆಯ ಕೊರತೆಯಿದ್ದರೆ ಸರಾಸರಿ ಎಂದು ರೇಟಿಂಗ್ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts