More

    ಮತ್ತೆ ಏರಿಕೆಯಾಯಿತು ಪೆಟ್ರೋಲ್ ದರ: ನಿತ್ಯ ಪರಿಷ್ಕರಣೆ ನಿಯಮ ಮರುಜಾರಿ

    ನವದೆಹಲಿ: ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಸುಮಾರು ಮೂರು ತಿಂಗಳ ಬಳಿಕ ದರ ನಿತ್ಯ ಪರಿಷ್ಕರಣೆಯ ನಿಯಮ ಮರುಚಾಲನೆಗೊಂಡಿದೆ. ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ ಅಬಕಾರಿ ಸುಂಕದಲ್ಲಿ ಭಾರಿ ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ ಬೀಳತ್ತಾ? ಇಲ್ಲಿದೆ ಉತ್ತರ

    ಭಾನುವಾರವಷ್ಟೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ 60 ಪೈಸೆ ಏರಿಕೆ ಆಗಿತ್ತು.
    ಕಳೆದ ಮಾರ್ಚ್ ಮಾರ್ಚ್ 14ರಂದು ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿಯಾಗಿ ₹ 3 ಸುಂಕ ವಿಧಿಸಿತ್ತು. ಇದಾದ ಎರಡು ದಿನಗಳ ಬಳಿಕ ಅಂದರೆ ಮಾರ್ಚ್ 16ರಂದು ತೈಲ ಬೆಲೆ ಪರಿಷ್ಕರಣೆ ಆಗಿತ್ತು. ನಂತರ ಕರೊನಾ ಸೋಂಕಿನ ಕಾರಣ ಬಹುತೇಕ ದೇಶಗಳು ಲಾಕ್‌ಡೌನ್ ೋಷಿಸಿದವು.

    ಇದರಿಂದ ವಾಹನ ಬಳಕೆ ನಿಂತುಹೋಗಿ ತೈಲ ಬೇಡಿಕೆ ತಗ್ಗಿತು. ತತ್ಪರಿಣಾಮ ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದರ ತೀವ್ರ ಕುಸಿತವಾಯಿತು. ಭಾರತದಲ್ಲಿ ಇದರ ಇದರ ಲಾಭವನ್ನು ಗ್ರಾಹಕರಿಗೆ ದಾಟಿಸದ ತೈಲ ಕಂಪನಿಗಳು, ತೆರಿಗೆ ಹೆಚ್ಚಳದಿಂದ ಉಂಟಾದ ದರ ವ್ಯತ್ಯಾಸವನ್ನು ಹೊಂದಾಣಿಕೆ ಮಾಡಿದ್ದವು. ಇದನ್ನೂ ಓದಿ: ರಾಜ್ಯಸಭೆ ಟಿಕೆಟ್: ಬಿಜೆಪಿಯಲ್ಲಿ ಪಕ್ಷ ನಿಷ್ಠೆಗೇ ಮಣೆ, ಭಿನ್ನಮತ ಕಡೆಗಣನೆ

    ಈ ಮಧ್ಯೆ ಏಪ್ರಿಲ್ 1ರಿಂದ ಇಂಧನ ತೈಲವನ್ನು ಪರಿಸರಸ್ನೇಹಿಯಾದ ಬಿಎಸ್-6 (ಯುರೋ 6) ದರ್ಜೆಗೆ ಏರಿಸಲಾಯಿತು. ಇದರಿಂದ ಗ್ರಾಹಕರ ಮೇಲೆ ಪ್ರತಿ ಲೀಟರ್‌ಗೆ ₹ 1 ಹೆಚ್ಚುವರಿ ಹೊರೆ ಬಿತ್ತು. ಆದರೆ, ಈ ಹೊರೆಯನ್ನು ಗ್ರಾಹಕರಿಗೆ ತೈಲ ಕಂಪನಿಗಳು ದಾಟಿಸಲಿಲ್ಲ. ಈಗ ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ನಿರ್ಬಂಧ ಸಡಿಲ ಮಾಡಿರುವ ಕಾರಣ ತೈಲಕ್ಕೆ ಬೇಡಿಕೆ ಹೆಚ್ಚಿದೆ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದರ ಕೂಡ ಏರಿಕೆಯಾಗಿದೆ. ಇದನ್ನೂ ಓದಿ: ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲವೆಂದು ಕೈಮುಗಿದ ಸಚಿವ ಸಿ.ಸಿ.ಪಾಟೀಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts