More

    ಕರೊನಾದಿಂದಾಗಿ ಸತ್ತ 200ಕ್ಕೂ ಅಧಿಕ ಜನರ ಶವ ಸಾಗಿಸಿದ್ದ ಆಂಬುಲೆನ್ಸ್ ಚಾಲಕನೇ ಕೋವಿಡ್​ಗೆ ಬಲಿ

    ನವದೆಹಲಿ: ಅವರು ಕರೊನಾದಿಂದಾಗಿ ಸತ್ತ 200ಕ್ಕೂಅಧಿಕ ಮಂದಿಯ ಶವಗಳನ್ನು ತನ್ನ ಆಂಬುಲೆನ್ಸ್​ನಲ್ಲಿ ಸಾಗಿಸಿದ್ದರು. ಆರು ತಿಂಗಳ ಕಾಲ ಮನೆಯಿಂದ ದೂರವಿದ್ದು ಕರೊನಾ ವಾರಿಯರ್​ ಆಗಿ ಶ್ರಮಿಸಿದ್ದರು. ದುರದೃಷ್ಟವಶಾತ್​ ಕೊನೆಗೆ ಕರೊನಾಗೇ ಬಲಿಯಾದರು!

    ಹೀಗೆ ಕರೊನಾಗೆ ಬಲಿಯಾದ ಆಂಬುಲೆನ್ಸ್​ ಚಾಲಕರ ಹೆಸರು ಆರಿಫ್​ ಖಾನ್​. ದೆಹಲಿಯ ಶಹೀದ್ ಭಗತ್ ಸಿಂಗ್​ ಸೇವಾ ದಳ ಎಂಬ ಎನ್​ಜಿಒಗೆ ಸೇರಿದ್ದ ಆಂಬುಲೆನ್ಸ್ ಚಲಾಯಿಸುತ್ತಿದ್ದ ಖಾನ್​, ಕಳೆದ ಆರು ತಿಂಗಳಿಂದ ತನ್ನ ಮನೆಯಿಂದ 28 ಕಿ.ಮೀ. ದೂರದಲ್ಲಿದ್ದ ಆಂಬುಲೆನ್ಸ್ ಪಾರ್ಕಿಂಗ್ ಲಾಟ್​ನಲ್ಲೇ ಬಹುತೇಕ ಕಾಲ ಕಳೆದಿದ್ದರು. ಹೀಗೆ 200ಕ್ಕೂ ಅಧಿಕ ಕೋವಿಡ್​ ರೋಗಿಗಳ ಶವಗಳನ್ನು ಸಾಗಿಸಿ, ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದ, ಖಾನ್​ ಅ. 3ರಂದು ಅನಾರೋಗ್ಯಕ್ಕೀಡಾಗಿದ್ದರು. ನಂತರ ಕರೊನಾ ಸೋಂಕು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ದೆಹಲಿಯ ಹಿಂದೂ ರಾವ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಖಾನ್​ ಒಬ್ಬರೇ ಮನೆಯ ಜೀವನಾಧಾರವಾಗಿದ್ದರು. ಬರುತ್ತಿದ್ದ 16 ಸಾವಿರ ರೂ. ಸಂಬಳದಲ್ಲಿ 9 ಸಾವಿರ ರೂ. ಮನೆ ಬಾಡಿಗೆಗೇ ಖರ್ಚಾಗುತ್ತಿತ್ತು ಎನ್ನಲಾಗಿದೆ.

    ಬಿಜೆಪಿ ಮಾಜಿ ಶಾಸಕ ಜಿತೇಂದ್ರ ಸಿಂಗ್​ ಶುಂಠಿ ಈ ಎನ್​ಜಿಒ ನಡೆಸುತ್ತಿದ್ದು, ಖಾನ್​ ನಿಧನದಿಂದ ಇತರ ಚಾಲಕರ ನೈತಿಕ ಸ್ಥೈರ್ಯ ಕುಸಿದಿದೆ ಎಂದಿದ್ದಾರೆ. ವಾರಸುದಾರರಿಲ್ಲದ ಶವಗಳನ್ನು ಹಲವು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡಿಕೊಂಡು ಬರುತ್ತಿರುವ ಈ ಎನ್​ಜಿಒ, ರಕ್ತದಾನ ಶಿಬಿರ ಜತೆಗೆ ಕೋವಿಡ್ ಸಮಯದಲ್ಲಿ ಕ್ವಾರಂಟೈನ್ ಕೆಲಸಗಾರರಿಗೆ ಲಂಗರ್ ಸೇವೆಯನ್ನು ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts