More

    ಪಕ್ಷಕ್ಕೆ ನೆಲೆಯಿಲ್ಲ ಎಂದು ಅನುದಾನವನ್ನೂ ನೀಡುತ್ತಿಲ್ಲ; ಬಿಜೆಪಿ ವಿರುದ್ಧ ಮಾಜಿ ಶಾಸಕ ಬಾಲಕೃಷ್ಣ ಆರೋಪ

    ಮಾಗಡಿ: ಉಸ್ತುವಾರಿ ಸಚಿವರು ಏನೇ ಕಸರತ್ತು ನಡೆಸಿದರೂ ಜಿಲ್ಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಠೇವಣಿ ಕೂಡ ಸಿಗಲ್ಲ ಎಂದು ವಾಜಿ ಶಾಸಕ ಎಚ್.ಸಿ. ಬಾಲಕಷ್ಣ ಹೇಳಿದರು.

    ತಾಲೂಕಿನ ಚಿಕ್ಕಮುದಿಗೆರೆ ಗ್ರಾಮದಲ್ಲಿ ಗುರುವಾರ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ರಸ್ತೆಗಳ ಅಭಿವೃದ್ಧಿಗಾಗಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ 100 ಕೋಟಿ ರೂ. ಹಾಗೂ ಜೆಡಿಎಸ್, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ 20 ಕೋಟಿ ರೂ. ನೀಡಿದೆ. ಜಿಲ್ಲೆಯಲ್ಲಿ ಬಿಜೆಪಿ ನೆಲೆಯಿಲ್ಲ ಎಂದು ಅನುದಾನವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.

    ‘ಹೇಮಾವತಿ’ ಬರಲ್ಲ ಎಂದಿದ್ದ ಎಚ್‌ಡಿಕೆ: ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ಹೇಮಾವತಿ ಬರುವುದಿಲ್ಲ ಎಂದರು. ಆದರೆ ಸಿದ್ದರಾಮಯ್ಯ, ಡಿ.ಕೆ. ಶಿವಕುವಾರ್, ಡಿ.ಕೆ.ಸುರೇಶ್ ಅವರು ಹೇವಾವತಿ ಯೋಜನೆಗೆ ಚಾಲನೆ ನೀಡಿದರು. ಈ ಕೆಲಸವನ್ನು ಎಚ್‌ಡಿಕೆ ಅವರೇ ಮಾಡಬಹುದಿತ್ತು. ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದೆ. ಅಭಿವೃದ್ಧಿ ಮಾಡಿ ಮತ ಕೇಳುವವರು ನಾವು. ಜಾತಿ ವ್ಯಾಮೋಹ, ಪುಣ್ಯಕ್ಷೇತ್ರ ಯಾತ್ರೆ, ಮೂಗುತಿ, ಸ್ಯಾರಿ, ಕುಕ್ಕರ್‌ಗೆ ಮರುಳಾಗಬೇಡಿ ಎಂದು ಬಾಲಕೃಷ್ಣ ಹೇಳಿದರು.

    ನಿರೀಕ್ಷಿಸಿದಷ್ಟು ಸ್ಥಾನ ಗೆಲ್ಲಲ್ಲ: ಜೆಡಿಎಸ್ 124 ಗೆಲ್ಲುವುದಿಲ್ಲ 30 ಸ್ಥಾನ ಗೆಲ್ಲಬಹುದು. ವೈಎಸ್‌ವಿ ದತ್ತ, ಶಿವಲಿಂಗೇಗೌಡ, ಗುಬ್ಬಿ ವಾಸು, ಎ.ಟಿ. ರಾಮಸ್ವಾಮಿ ಎಲ್ಲರೂ ಪಕ್ಷ ಬಿಟ್ಟಿದ್ದಾರೆ. ಇದರಿಂದ ಜೆಡಿಎಸ್ ಹೆಚ್ಚು ಗೆಲ್ಲಲು ಸಾಧ್ಯವಿಲ್ಲ. ಇವರುಗಳು ಅಸೆಂಬ್ಲಿಯಲ್ಲಿ ವಾತನಾಡಿ ಸರ್ಕಾರದ ತಪ್ಪು ನಡೆಯನ್ನು ಪ್ರಶ್ನಿಸುತ್ತಿದ್ದರು. 2, 3 ಬಾರಿ ಗೆದ್ದವರು ಇವರು. ಈಗ ಇವರನ್ನು ಸೋಲಿಸಲು ಮುಂದಾಗಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.

    ಎಚ್‌ಡಿಕೆ ಅವರು ಅಂದು ಬಿಜೆಪಿಗೆ ಅಧಿಕಾರ ನೀಡಿದ್ದರೆ ಇಂದು ರಾಜ್ಯದಲ್ಲಿ ಅವರದ್ದೇ ಸರ್ಕಾರ ಇರುತ್ತಿತ್ತು. ಅಧಿಕಾರ ಹಸ್ತಾಂತರಿಸದ ಕಾರಣ ಜನತೆ ತಕ್ಕಪಾಠ ಕಲಿಸಿದರು. ಮಂಜುನಾಥ್ ಮೇಲೆ ದೇವೇಗೌಡ, ಕುಮಾರಸ್ವಾಮಿ ಅವರಿಗೆ ಅಭಿಮಾನವೇನಿಲ್ಲ. ಮಾಗಡಿ ಕ್ಷೇತ್ರದಲ್ಲಿ ವಿಧಿಯಲ್ಲದೆ ಅವರನ್ನು ಇಟ್ಟುಕೊಂಡಿದ್ದಾರೆ ಅಷ್ಟೆ ಎಂದು ಬಾಲಕೃಷ್ಣ ಕುಟುಕಿದರು.

    ಮುಂದಿನ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಾಲಕೃಷ್ಣ, ಸರ್ಕಾರ ಸರ್ಕಾರ ಅಧಿಕಾರ ಸ್ವೀಕರಿಸಿದ ಕೂಡಲೇ ಈಗಾಗಲೇ ಘೋಷಿಸಿರುವಂತೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್, ಗಹಿಣಿಗೆ ಮಾಸಿಕ 2 ಸಾವಿರ ರೂ, 10 ಕೆ.ಜಿ.ಅಕ್ಕಿ ನೀಡಲಾಗುವುದು ಎಂದು ಭರವಸೆ ನೀಡಿದರು. ಹಾಗೂ ಕೈಗಾರಿಕಾ ಪ್ರದೇಶ ನಿರ್ಮಾಣ ಯೋಜನೆಯನ್ನು ಶಾಸಕರು ಕೈಬಿಟ್ಟಿರುವುದಕ್ಕೆ ರೈತರ ಪರವಾಗಿ ಧನ್ಯವಾದ ತಿಳಿಸುವುದಾಗಿ ಹೇಳಿದರು.

    ಜಿಪಂ ವಾಜಿ ಅಧ್ಯಕ್ಷ ಎಂ.ಕೆ. ಧನಂಜಯ, ಶ್ರೀನಿವಾಸ್ ಮೂರ್ತಿ, ಐಯ್ಯಂಡಹಳ್ಳಿ ಕಷ್ಣ, ಶಿವಕುವಾರ್, ರವೀಶ್, ಶಿವರಾಜು, ಕುವಾರ್ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts