More

    ಲಾಕ್​ಡೌನ್​ನಲ್ಲಿ ಶೂಟ್​ ಆದ ಮೊದಲ ಚಿತ್ರದ ಟ್ರೇಲರ್​ ಬಿಡುಗಡೆ …

    ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಚಿತ್ರರಂಗದವರೆಲ್ಲಾ ತಮ್ಮ ಮನೆಯವರ ಜತೆಗೆ ಕಾಲ ಕಳೆದರೆ, ನಿರ್ದೇಶಕ ವೆಂಕಟ್​ ಭಾರದ್ವಾಜ್​ ಮಾತ್ರ ಮನೆಯಲ್ಲೇ ಇದ್ದು, ‘ದಿ ಪೈಂಟರ್’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.

    ಇದನ್ನೂ ಓದಿ: ದಿಶಾ ಸತ್ತ ಆ ರಾತ್ರಿ ನಿಜಕ್ಕೂ ನಡೆದಿದ್ದೇನು? ಕ್ಲೋಸ್​ ಫ್ರೆಂಡ್​ ಬಿಚ್ಚಿಟ್ಟ ಸ್ಪೋಟಕ ಮಾಹಿತಿ ಇದು!

    ಹೀಗೆ, ಲಾಕ್​ಡೌನ್​ನಲ್ಲಿ ತಯಾರಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ದಿ ಪೇಂಟರ್​’ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಶುಕ್ರವಾರ ಸಂಜೆ ‘ರೋರಿಂಗ್ ಸ್ಟಾರ್​’ ಮುರಳಿ ಅವರು ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬ್​ನ ಲಹರಿ ಚಾನಲ್​ನಲ್ಲಿ ಈ ಟ್ರೇಲರ್​ ಬಿಡುಗಡೆಯಾಗಿದೆ.

    ‘ದಿ ಪೈಂಟರ್’ ಚಿತ್ರವು, ಆಗಸ್ಟ್ 14ರಂದು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ಆಲ್​ಟೈಮ್ ಥಿಯೇಟರ್) ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಶ್ರೇಯಸ್​ ಇಟಿ ಆಪ್​ ಡೌನ್​ಲೋಡ್​ ಮಾಡಿಕೊಂಡು, 50 ರೂ ಕೊಟ್ಟು ನೋಡಬಹುದು, ಬರುವ ಕಲೆಕ್ಷನ್ ನಲ್ಲಿ ಶೇಕಡಾ ೨೦% ರಷ್ಟು ಕನ್ನಡ ಚಿತ್ರ ಕಾರ್ಮಿಕರಿಗೆ ಕೊಡುವುದಾಗಿ ‘ದಿ ಪೈಂಟರ್’ ತಂಡ ಮೊದಲೇ ಘೋಷಿಸಿದೆ.

    ದಿ ಪೈಂಟರ್’ ಲಾಕ್‌ಡೌನ್ ಪರಿಸ್ಥಿತಿಗೆ ತಕ್ಕಂತೆ ಒಂದು ಚಾಲೆಂಜಿಂಗ್ ಕಥೆಯಂತೆ. ಈ ಸಂದರ್ಭವನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಬಳಸುತ್ತಾರೆ ಮತ್ತು ಕೆಲವರು ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, 90 ನಿಮಿಷದ ಅವಧಿಯದ್ದಾಗಿರುತ್ತದಂತೆ.

    ಇದನ್ನೂ ಓದಿ: ಮತ್ತೊಂದು ಹಾರರ್​ ಚಿತ್ರದೊಂದಿಗೆ ಬಂದ ಲೋಹಿತ್​ … ಪುಷ್ಕರ್​ ಫಿಲಂಸ್​ ನಿರ್ಮಾಣ

    ಐವರು ಛಾಯಾಗ್ರಾಹಕರು, 17 ಕಲಾವಿದರು ಮತ್ತು ತಂತ್ರಜ್ಞರನ್ನಿಟ್ಟುಕೊಂಡು, ಬೆಂಗಳೂರು, ಕನಕಪುರ, ಹೆಬ್ಬಾಳ ಮತ್ತು ತುಮಕೂರಿನಲ್ಲಿ ಎಲ್ಲರೂ ತಾವು ಇರುವ ಜಾಗಗಳಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲಾಗಿದೆ.

    ರಾಜಕೀಯಕ್ಕೆ ಬಲಿಪಶುಗಳಾಗಬೇಡಿ … ಅಭಿಮಾನಿಗಳಿಗೆ ರಮ್ಯಾ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts