ಜೈಲು ಶಿಕ್ಷೆ ಆದೇಶ ಪ್ರಕಟಿಸಿದ್ದರಿಂದ ಬೇಸರಗೊಂಡ ಅಪರಾಧಿ 4ನೇ ಮಹಡಿಯಿಂದ ಜಿಗಿದರೂ ಬಚಾವಾದ!

Man
Published on

ಹುಬ್ಬಳ್ಳಿ: ಅಬಕಾರಿ ಇಲಾಖೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಾಧೀಶರು 1 ವರ್ಷ ಜೈಲು ಶಿಕ್ಷೆ ಆದೇಶ ಪ್ರಕಟಿಸಿದ್ದರಿಂದ ಬೇಸರಗೊಂಡ ಅಪರಾಧಿ ತಿಪ್ಪಯ್ಯ ಕೊರವರ ಕೋರ್ಟ್​ನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿ, ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಬುಧವಾರ ಸಂಜೆ ಶಿಕ್ಷೆ ಪ್ರಕಟವಾದ ಮೇಲೆ ಕೋರ್ಟ್ ಹಾಲ್​ನಿಂದ ಹೊರಗೆ ಬಂದ ಅಪರಾಧಿ, ಪೊಲೀಸರಿಂದ ತಪ್ಪಿಸಿಕೊಂಡು ನಾಲ್ಕನೇ ಮಹಡಿ ಯಿಂದ ಜಿಗಿದುಬಿಟ್ಟ. ಆದರೆ, ಕೋರ್ಟ್ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಟ್ಟಿದ್ದ ನೆಟ್​ನಲ್ಲಿ ಆತ ಸಿಲುಕಿಕೊಂಡ. ಎಚ್ಚೆತ್ತುಕೊಂಡ ಪೊಲೀಸರು ಬಲೆಯನ್ನು ಕತ್ತರಿಸಿ ಆತನನ್ನು ರಕ್ಷಿಸಿ ಕಾರಾಗೃಹಕ್ಕೆ ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net