More

    ಅಂಗವಿಕಲರನ್ನು ಮದುವೆಯಾದರೆ 2.5 ಲಕ್ಷ ರೂಪಾಯಿ ಪ್ರೋತ್ಸಾಹ ಧನ!

    ಭುವನೇಶ್ವರ: ಅಂಗವಿಕಲರು ಮದುವೆಯಿಂದ ಹಿಂದುಳಿಯುವುದನ್ನು ಸರಿಪಡಿಸಬೇಕೆನ್ನುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ಅಂಗವಿಕಲರನ್ನು ಮದುವೆಯಾಗುವವರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಇದೀಗ ಪ್ರೋತ್ಸಾಹ ಧನದ ಮೊತ್ತವನ್ನು 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.

    ಈ ಕುರಿತಾಗಿ ಸಾಮಾಜಿಕ ಭದ್ರತೆ ಮತ್ತು ವಿಕಲಚೇತನರ ಸಬಲೀಕರಣ (ಎಸ್‌ಎಸ್‌ಇಪಿಡಿ) ವಿಭಾಗದ ಆಯುಕ್ತ-ಕಮ್-ಕಾರ್ಯದರ್ಶಿ ಭಾಸ್ಕರ್ ಶರ್ಮಾ ಪ್ರಕಟಣೆ ಹೊರಡಿಸಿದ್ದಾರೆ. ಈವರೆಗೆ ಅಂಗವಿಕಲರನ್ನು ಮದುವೆಯಾಗುವವರಿಗೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇನ್ನು ಮುಂದೆ ಅದನ್ನು 2.5 ಲಕ್ಷ ರೂಪಾಯಿಗೆ ಏರಿಸಲಾಗುವುದು. ಮಾನದಂಡಗಳಲ್ಲಿ ಒಳಪಟ್ಟಿರುವ ಅಂಗವೈಕಲ್ಯ ಹೊಂದಿದ ವ್ಯಕ್ತಿಯನ್ನು ಯಾವುದೇ ರೀತಿ ವರದಕ್ಷಿಣೆ ಅಥವಾ ವಧು ದಕ್ಷಿಣೆ ತೆಗೆದುಕೊಳ್ಳದೆ ಮದುವೆಯಾದರೆ ಈ ಪ್ರೋತ್ಸಾಹ ಧನ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಮದುವೆಯಾಗುವ ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ತುಂಬಿರಬೇಕಾದದ್ದು ಕಡ್ಡಾಯ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಅತ್ತೆಯ ಸಮಾಧಾನಕ್ಕಾಗಿ ಸೊಸೆಯ ಹೆಣ ನೇಣಿಗೆ!

    ಕಾರ್ಟೂನ್​ನಲ್ಲಿ ಕಾಣಿಸಿಕೊಳ್ಳುವ ಮಹಿಳಾ ಪಾತ್ರಕ್ಕೂ ಹಿಜಾಬ್​ ಕಡ್ಡಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts