More

    ಮಾತೃಭಾಷೆ ಅನ್ನದ ಭಾಷೆಯಾಗಬೇಕು

    ವಾಗಡಿ: ಮೂರು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಪ್ರೊ. ಎಚ್.ವಿ.ನಂಜುಂಡಯ್ಯ ಅವರ ಸ್ಮಾರಕವನ್ನು ನಿರ್ವಾಣ ವಾಡಬೇಕು ಎನ್ನುವುದೂ ಸೇರಿ ಪ್ರಮುಖ ನಿರ್ಣಯಗಳ ಅಂಗೀಕಾರದೊಂದಿಗೆ ತಾಲೂಕಿನ ತಿಪ್ಪಸಂದ್ರ ಗ್ರಾಮದ ಮಾರುತಿ ಮೈದಾನದಲ್ಲಿ 2 ದಿನ ನಡೆದ ರಾಮನಗರ ಜಿಲ್ಲಾಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ತೆರೆಬಿತ್ತು.

    ರಾಜ್ಯದ ಅಂಗ್ಲ ವಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯ, ಎಲ್ಲ ಹಂತದ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದು, ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು, ಬ್ಯಾಂಕ್, ರೈಲ್ವೆ ಇಲಾಖೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೂ ಬರೆಯಲು ಅವಕಾಶ ವಾಡಿಕೊಡುವ ಮೂಲಕ ವಾತಭಾಷೆಯು ಅನ್ನದ ಭಾಷೆಯಾಗಬೇಕು ಎನ್ನುವುದು ಸಮ್ಮೆಳನ ಕೈಗೊಂಡ ಇತರ ಪ್ರಮುಖ ನಿರ್ಣಯಗಳಾಗಿವೆ.
    ಹಿಂದಿ ಮೇಲೆ ಹಿಡಿತ ಸಾಧಿಸಬೇಕಿದೆ

    ಸಮಾರೋಪದಲ್ಲಿ ಮಾತನಾಡಿದ ಕನ್ನಡ ಅಭಿವದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಕೇವಲ 600 ವರ್ಷಗಳ ಇತಿಹಾಸ ಹೊಂದಿರುವ ಹಿಂದಿ ಭಾಷೆ ಮೇಲೆ ಕನ್ನಡಿಗರು ಹಿಡಿತ ಸಾಧಿಸಬೇಕಿದೆ. ತ್ರಿಭಾಷಾ ಸೂತ್ರ ವಾಡಿರುವುದರಿಂದ ಕನ್ನಡ ಭಾಷೆಗೆ ಹೊಡೆತ ಬಿದ್ದಿದೆ. ನೆರೆ ರಾಜ್ಯಗಳಲ್ಲಿ ದ್ವಿಭಾಷಾ ಸೂತ್ರವಿದ್ದು ಅವರ ವಾತಭಾಷೆಗೆ ಆದ್ಯತೆ ನೀಡಲಾಗಿದೆ. ಯುವ ಪೀಳಿಗೆಯಲ್ಲಿ ಕನ್ನಡದ ಮೇಲಿನ ಅಭಿಮಾನ, ಬಳಕೆಯಲ್ಲಿ ಕೊರತೆ ಇದೆ. ಕನ್ನಡ ಸಾಹಿತ್ಯ, ಅಭಿರುಚಿಯನ್ನು ಅವರಲ್ಲಿ ಬಿತ್ತಬೇಕಿದೆ. ನೆರೆ ರಾಜ್ಯಗಳಲ್ಲಿ ವೈದ್ಯರು ತಮ್ಮ ವಾತಭಾಷೆಯಲ್ಲಿಯೆ ಔಷಧದ ಚೀಟಿ ನೀಡುತ್ತಾರೆ.

    ಆದರೆ ನಮ್ಮ ರಾಜ್ಯದಲ್ಲಿ ಒಬ್ಬ ವೈದ್ಯ ಸಹ ಕನ್ನಡದಲ್ಲಿ ಔಷಧ ಚೀಟಿಗಳನ್ನು ನೀಡದಿರುವುದು ಬೇಸರದ ಸಂಗತಿ ಎಂದರು. ಬೆಂಗಳೂರಿನಲ್ಲಿ 141 ಭಾಷೆ ವಾತನಾಡುವ ಜನರಿದ್ದಾರೆ. ಕನ್ನಡದ ಭಾಷೆ ಉಳಿವಿಗೆ ಜಾಗತರಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಿಲ್ಲೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ತಾಲೂಕಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಆಗುತ್ತಿರುವುದು ಬೆಳವಣಿಗೆಗೆ ಪೂರಕವಾಗಿದೆ, ನಾಡಪ್ರಭು ಕೆಂಪೇಗೌಡರು ಜನಿಸಿದ ವಾಗಡಿಯ ಕೆಂಪಾಪುರ ಗ್ರಾಮದ ಕೆಂಪೇಗೌಡರ ಐಕ್ಯಸ್ಥಳ ಇಷ್ಟು ವರ್ಷವಾದರೂ ಸ್ಮಾರಕವಾಗಿ ಅಭಿವದ್ಧಿ ಕಾಣದಿರುವುದು, ಹೇವಾವತಿ ಯೋಜನೆ ಅನುಷ್ಠಾನಗೊಳ್ಳದಿರುವುದಕ್ಕೆ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲದಿರುವುದು ಕಾರಣವಾಗಿದೆ. ಇನ್ನಾದರೂ ಸರ್ಕಾರ ಇತಿಹಾಸಕಾರರ ಸ್ಮಾರಕಗಳನ್ನು ಅಭಿವದ್ದಿಪಡಿಸುವತ್ತ ಯೋಜನೆಗಳನ್ನು ರೂಪಿಸಬೇಕು ಎಂದರು.

    ಭಾಷಾ ಬೆಳವಣಿಗೆಯ ರಾಯಭಾರಿಗಳಾಗಿ:ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ ವಾತನಾಡಿ, ಸಮ್ಮೇಳನಗಳು ಜನಪರ ಕಾರ್ಯಕ್ರಮಗಳಾಗಬೇಕು. ಭಾಷಾ ಬೆಳವಣಿಗೆಗೆ ಪ್ರತಿಯೊಬ್ಬರೂ ರಾಯಭಾರಿಗಳಾಗಬೇಕು. ಕನ್ನಡ ಶಾಲೆ ಮುಚ್ಚದಂತೆ ಹಕ್ಕೊತ್ತಾಯ ಅನುಷ್ಠಾನವಾಗಬೇಕು. ಕನ್ನಡ ಭವನ ನಿರ್ವಾಣಕ್ಕೆ ಎಸ್ಸೆಸ್ಸೆನ್ ಮತ್ತು ಡೇರಿಗಳಿಂದ ಆರ್ಥಿಕ ನೆರವು ನೀಡಲಾಗುವುದು. ಶಾಸೀಯ ಸ್ಥಾನವಾನ ಸಿಕ್ಕಿರುವ ಕನ್ನಡ ಭಾಷೆಗೆ ಧಕ್ಕೆಯಾಗದಂತೆ ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.

    ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ: ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ವಾತನಾಡಿ, ಬೇರೆ ಜಿಲ್ಲೆಗಳಲ್ಲಿ ಕನ್ನಡ ಭವನ, ಭಾಷೆಗೆ ರಾಜಕಾರಣಿ ಮತ್ತು ಅಧಿಕಾರಿಗಳು ಒತ್ತು ನೀಡುತ್ತಾರೆ. ಆದರೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕನ್ನಡ ನಲುಗುತ್ತಿದೆ. ಜಿಲ್ಲೆಯಲ್ಲಿ ಕನ್ನಡ ಭವನಕ್ಕೆ ನಿವೇಶನ ನೀಡಲು ರಾಜಕಾರಣಿಗಳು ಮನಸ್ಸು ಮಾಡದಿರುವುದು ಅವರ ಕನ್ನಡಾಭಿಮಾನಕ್ಕೆ ಹಿಡಿದ ಕನ್ನಡಿಯಂತಿದೆ. ಅನೇಕ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆಯಲ್ಲಿ ಕನ್ನಡ ಭವನ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

    ಮಾತೃಭಾಷೆ ಅನ್ನದ ಭಾಷೆಯಾಗಬೇಕು
    ವಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದ ವಾರುತಿ ಮೈದಾನದಲ್ಲಿ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಾರೋಪ ಸವಾರಂಭದಲ್ಲಿ ವಾಜಿ ಸಚಿವ ಎಚ್.ಎಂ.ರೇವಣ್ಣ ವಾತನಾಡಿದರು.

    ಆಂಗ್ಲ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು: ಸಮ್ಮೇಳನಾಧ್ಯಕ್ಷ ಡಾ. ಸಿ. ನಂಜುಂಡಯ್ಯ ವಾತನಾಡಿ, ಅಂಗ್ಲ ವಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು. ಬ್ಯಾಂಕ್, ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಭಾಷೆ ಪ್ರಶ್ನೆಪತ್ರಿಕೆ ನೀಡಲು ಮುಂದಾಗಬೇಕು, ಜಿಲ್ಲೆ ಮತ್ತು ತಾಲೂಕಿನಲ್ಲಿ ಕನ್ನಡ ಭವನಕ್ಕೆ ನಿವೇಶನ ನೀಡಿ ಭವನ ನಿರ್ವಾಣಕ್ಕೆ ಒತ್ತು ನೀಡಿ ಅಲ್ಲಿಯೇ ಗ್ರಂಥಾಲಯ ಮತ್ತು ಪುಸ್ತಕ ಮಳಿಗೆಗಳನ್ನು ತೆರೆಯಬೇಕು ಎಂದರಲ್ಲದೆ, ಎಚ್.ವಿ. ನಂಜುಂಡಯ್ಯ ಅವರ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

    ಬಸಪ್ಪಶಾಸಿ ಅಧ್ಯಯನ ಕೇಂದ್ರಕ್ಕೆ ಆಗ್ರಹ: ವಾಯು ಸೇನೆ ನಿವತ್ತ ಅಧಿಕಾರಿ ಶಿವಲಿಂಗಯ್ಯ ವಾತನಾಡಿ, ವಿಶ್ವವಾನ್ಯ ಕವಿ ನಾರಸಂದ್ರ ಗ್ರಾಮದ ಬಸಪ್ಪ ಶಾಸ್ತ್ರಿ ಅವರು ಅಭಿನವ ಕಾಳಿದಾಸ ಎಂಬ ಗ್ರಂಥ ವಿಶ್ವ ಖ್ಯಾತಿ ಪಡೆದಿದೆ. ಅವರ ಬಗ್ಗೆ ಅಧ್ಯಯನ ಕೇಂದ್ರ ಸ್ಥಾಪಿಸಿ ಸ್ಮಾರಕ ರಚಿಸಿ ಅವರು ರಚಿಸಿರುವ ಗ್ರಂಥಗಳನ್ನು ಕ್ರೋಡೀಕರಿಸಿ ಯುವಪಿಳಿಗೆಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅದೇರೀತಿ ಕೆಂಪೇಗೌಡ ಸೇರಿ ಇತಿಹಾಸಕಾರರ ಅಧ್ಯಯನ ಕೇಂದ್ರ ತೆರೆಯಬೇಕು ಎಂದರು.
    ಕಸಾಪ ತಾಲೂಕು ಅಧ್ಯಕ್ಷ ಪದ್ಮನಾಭ ವಾತನಾಡಿ, ಹಳೆಯ ಸಾಹಿತ್ಯದ ಪುಸ್ತಕಗಳನ್ನು ಮತ್ತೆ ಮುದ್ರಿಸಬೇಕು. ಯುವ ಪೀಳಿಗೆಗೆ ಇತಿಹಾಸಕಾರರ ಸಾಹಿತ್ಯವನ್ನು ತಲುಪಿಸುವ ಕೆಲಸ ಕಸಾಪ ವಾಡಲಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದರು.

    ಬಸವಲಿಂಗಪ್ಪ ಅವರನ್ನು ಸ್ಮರಿಸಿದ ರೇವಣ್ಣ: ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ, ಕನ್ನಡ ಭಾಷೆಯನ್ನು ಬೂಸಾ ಎಂದು ಕರೆದ ಧೀಮಂತ ರಾಜಕಾರಣಿ ಬಸವ ಲಿಂಗಪ್ಪ ಅವರ ವಿರುದ್ಧ ನಡೆದ ಬೂಸಾ ಚಳವಳಿ ಹೋರಾಟದ ಅಧ್ಯಕ್ಷನಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ದುಃಖದ ಸಂಗತಿ ಎಂದು ಕ್ಷಮೆ ಯಾಚಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ಕನ್ನಡದ ಉಳಿವಿಗಾಗಿ ಅನೇಕ ಚಳವಳಿಗಳನ್ನು ವಾಡಿದ್ದೇನೆ. ವರಕವಿ ದ.ರಾ. ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಕಾಲೇಜಿಗೆ ಕರೆಸಿ ಸನ್ಮಾನಿಸಿದ ಹೆಮ್ಮೆ ಇದೆ. ತಾಲೂಕಿನಲ್ಲಿ ಕನ್ನಡ ಭಾಷೆಗೆ ಒತ್ತು ನೀಡಿ ಬೆಳೆಸಿದ್ದೇನೆ. ಕನ್ನಡ ಭವನಕ್ಕೆ ನಿವೇಶನ ಮತ್ತು ಕಟ್ಟಡ ನಿರ್ವಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ರಾಜಕಾರಣದಲ್ಲಿ ಪ್ರಥಮವಾಗಿ ದಿ. ಡಿ.ದೇವರಾಜ ಅರಸು, ವೀರಪ್ಪ ಮೊಯಿಲಿ ಹಾಗೂ ಸಿದ್ದರಾಮಯ್ಯ ಅವರು ಕನ್ನಡ ಭಾಷೆ ಬೆಳವಣಿಗೆಗೆ ಒತ್ತು ನೀಡಿದ್ದಾರೆ. ಕನ್ನಡದಲ್ಲೇ ಹಸ್ತಾಕ್ಷರ ಬರೆದಂತಹ ಮುಖ್ಯಮಂತ್ರಿಗಳಲ್ಲಿ ಇವರು ಮೊದಲಿಗರು ಎಂದು ಎಚ್.ಎಂ. ರೇವಣ್ಣ ಹೇಳಿದರು.

    ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ಬಿಎಂಟಿಸಿ ನಿರ್ದೇಶಕ ಕೆ.ಪಿ. ಬಂಗೇಶ್, ತಾಪಂ ವಾಜಿ ಅಧ್ಯಕ್ಷ ಶಿವರಾಜು, ವಾಜಿ ಸದಸ್ಯ ಸುವಾ ರಮೇಶ್, ಟಿ.ಜಿ. ವೆಂಕಟೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ, ನಿರ್ದೇಶಕ ಶಿವಪ್ರಸಾದ್, ಚಂದ್ರಣ್ಣ, ಕಷ್ಣಯ್ಯ, ಎಂ.ಸಿ. ಗೋವಿಂದರಾಜು, ಡಿ.ಜಿ. ಗಂಗಾಧರ್, ನಾರಾಯಣ್, ಅಶೋಕ್, ರಾಜುಗೌಡ, ಮುಂತಾದವರು ಇದ್ದರು.

    The mother tongue should be the language of rice

    ವಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಮದ ವಾರುತಿ ಮೈದಾನದಲ್ಲಿ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಾರೋಪ ಸವಾರಂಭದಲ್ಲಿ ವಾಜಿ ಸಚಿವ ಎಚ್.ಎಂ.ರೇವಣ್ಣ ವಾತನಾಡಿದರು.

    ಕವಿಗೋಷ್ಠಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts