More

    ಹಾಲಿನ ದರ 2-3 ರೂ. ಹೆಚ್ಚಳಕ್ಕೆ ಕೆಎಂಎಫ್ ಚಿಂತನೆ

    ಬೆಂಗಳೂರು: ಹಾಲಿನ ದರ ಹೆಚ್ಚಳಕ್ಕೆ ಕರ್ನಾಟಕ ಹಾಲು ಮಹಾಮಂಡಲ ಸಿದ್ಧತೆ ನಡೆಸಿದ್ದು, ಜ. 17ರಂದು ನಡೆಯುವ ಮಂಡಳಿ ಸಭೆಯಲ್ಲಿ ಅಂತಿಮ ತೀರ್ವನವಾಗಲಿದೆ. ಲೀಟರ್ ಹಾಲಿಗೆ 2 ರಿಂದ 3 ರೂ. ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

    ಮಂಡಳಿ ಸಭೆಗೂ ಮುನ್ನ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ‘ವಿಜಯವಾಣಿ’ಗೆ ತಿಳಿಸಿದರು. ರಾಜ್ಯದಲ್ಲಿ ದೊಡ್ಲ, ಜೆರ್ಸಿ, ಹೆರಿಟೇಜ್, ತಿರುಮಲ, ವಲ್ಲಭ ಹಾಗೂ ಆರೋಗ್ಯ ಹಾಲಿನ ದರ ನಮಗಿಂತ ಹೆಚ್ಚಿದೆ. ಅಮುಲ್ ಸಹ ಇತ್ತೀಚೆಗೆ ಲೀಟರ್ ಹಾಲಿನ ದರವನ್ನು 44 ರೂ.ಗಳಿಗೆ ಏರಿಸಿದೆ. ನಂದಿನಿ ಮಾತ್ರ ಕಡಿಮೆ ಇದೆ ಎಂದು ವಿವರಿಸಿದರು. ಎಲ್ಲ ಒಕ್ಕೂಟಗಳಿಂದ ದರ ಹೆಚ್ಚಳಕ್ಕೆ ಬೇಡಿಕೆ ಇದೆ. ಮಹಾಮಂಡಲದ ಸಭೆಗೆ ಮುನ್ನ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗುತ್ತದೆ. ಎಷ್ಟು ಹೆಚ್ಚಳ ಎಂಬುದನ್ನು ನಂತರವಷ್ಟೇ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

    ರೈತರಿಗೆ ನೆರವು: ದರ ಹೆಚ್ಚಳದಿಂದ ಬರುವ ಹಣವನ್ನು ಹೈನುಗಾರರ ಅಭ್ಯುದಯಕ್ಕೆ ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಕೆಲ ಒಕ್ಕೂಟಗಳಲ್ಲಿ ಹಸು ಹಾಗೂ ಎಮ್ಮೆಗಳಿಗೆ ವಿಮೆ ಇದೆ. ಆ ಸೌಲಭ್ಯವನ್ನು ಕೆಎಂಎಫ್​ನಿಂದಲೇ ಜಾರಿ ಮಾಡುವ ಉದ್ದೇಶವಿದೆ. ಹಾಲು ಕೊಡುವ ಜಾನುವಾರು ಸತ್ತರೆ ನೇರವಾಗಿ ರೈತರಿಗೆ ಹಣ ನೀಡುವುದು, ಮಾರಾಟಗಾರರ ಕಮೀಷನ್ ಹೆಚ್ಚಿಸುವ ಯೋಜನೆಯೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts