More

    ಡಿಸೆಂಬರ್​ಗೆ ಮೆಡಿಕಲ್ ಕಾಲೇಜ್ ಕಟ್ಟಡ ಪೂರ್ಣ

    ಹಾವೇರಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಆ ಅವಧಿಯಲ್ಲಿ ಜನ ಕಲ್ಯಾಣ, ಅಭಿವೃದ್ಧಿ ಹಾಗೂ ವಿತ್ತೀಯ ಶಿಸ್ತನ್ನು ಸರಿದೂಗಿಸಿಕೊಂಡು ಸರ್ವರ ವಿಕಾಸದತ್ತ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾರ್ವಿುಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
    ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 75ನೇ ಸ್ವಾತಂತ್ರ್ಯೊತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯ ಘಟನಾವಳಿ ಸ್ಮರಿಸಿದರು.
    ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಬಜೆಟ್​ನಲ್ಲಿ ಘೊಷಿಸಿದಂತೆ ಶಿಗ್ಗಾಂವಿ ಜವಳಿ ಪಾರ್ಕ್ ನಿರ್ವಣಕ್ಕೆ 59.34 ಎಕರೆ ಪ್ರದೇಶದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ರಾಣೆಬೆನ್ನೂರನಲ್ಲಿ ನೂತನ ಜವಳಿ ಪಾರ್ಕ್​ಗೆ ಬಡಬಸಾಪುರ ಮತ್ತು ಮಾಳನಾಯಕನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ 18.24ಎಕರೆ ಜಮೀನು ಗುರುತಿಸಲಾಗಿದೆ. ಹಿರೇಕೆರೂರ ತಾಲೂಕಿನ ಚಿನ್ನಮುಳಗುಂದ ಗ್ರಾಮದಲ್ಲಿ ಮೆಕ್ಕೆಜೋಳ ಸಂಶೋಧನಾ ಕೇಂದ್ರಕ್ಕೆ ಸ್ಥಳ ಗುರುತಿಸಲಾಗಿದೆ. ಆಯುರ್ವೆದಿಕ್ ಮಹಾವಿದ್ಯಾಲಯ ಸ್ಥಾಪನೆಗೆ ಸವಣೂರ ಪಟ್ಟಣದ ತಾಪಂ ಕಚೇರಿ ಪಕ್ಕದಲ್ಲಿ್ಲ 5 ಎಕರೆ ಜಾಗ ಖರೀದಿಸಲಾಗಿದೆ. ಹಾವೇರಿ, ಬ್ಯಾಡಗಿ, ಹಾನಗಲ್ಲ ಹಾಗೂ ಶಿಗ್ಗಾಂವಿ ಪಟ್ಟಣದಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲು ಮಂಜೂರಾತಿ ದೊರೆತಿದೆ ಎಂದರು.
    ಜಿಲ್ಲೆಯಲ್ಲಿ 1.85 ಲಕ್ಷ ಕಾರ್ವಿುಕರು ಕಾರ್ವಿುಕ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದು, ಧನ ಸಹಾಯವಾಗಿ 22.80 ಕೋಟಿ ರೂ. ವೆಚ್ಚ ಮಾಡಲಾಗಿದೆ. 79,826 ಸುರಕ್ಷಾ ಕಿಟ್ ವಿತರಿಸಲಾಗಿದೆ ಎಂದರು.
    ಸನ್ಮಾನ: ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ವರ್ಗದ ವಿದ್ಯಾರ್ಥಿ ಬ್ಯಾಡಗಿ ತಾಲೂಕಿನ ಶ್ಯಾಡಂಬಿಯ ಶಶಿಕುಮಾರ ಕೆಂಪಣ್ಣ ಅವರಿಗೆ 1 ಲಕ್ಷ ರೂ. ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts