More

    ಲೋಕಸಭೆ ಚುನಾವಣೆಯ ಪ್ರಚಾರ ಕಣ ರೆಡಿ

    ಶಿವಮೊಗ್ಗ: ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭಕ್ಕೆ ಇನ್ನೂ 18 ದಿನಗಳಿವೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಬಿಜೆಪಿಯ ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ನಡುವೆ ನೇರ ಸ್ಪರ್ಧೆಯಂತಿದ್ದ ಕಣಕ್ಕೆ ಈಶ್ವರಪ್ಪ ಇಳಿದಿರುವುದರಿಂದ ಪ್ರಚಾರ ರಂಗೇರುವುದು ನಿಶ್ಚಿತವಾಗಿದೆ.

    ಕೆಲ ತಿಂಗಳ ಹಿಂದಷ್ಟೇ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ಲೋಕಸಭಾ ಕ್ಷೇತ್ರದ ಬಹುತೇಕ ಗ್ರಾಪಂಗಳಿಗೆ ಭೇಟಿ ನೀಡಿದ್ದ ಬಿ.ವೈ.ರಾಘವೇಂದ್ರ, ಕಳೆದ ಎರಡ್ಮೂರು ದಿನಗಳಿಂದ ವಿವಿಧ ಮಠಾಧೀಶರನ್ನು ಭೇಟಿಯಾಗುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದಾರೆ.
    ಇನ್ನು ಒಂದೆರಡು ದಿನಗಳಲ್ಲಿ ಬಿವೈಆರ್ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರಚಾರ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಈಗಾಗಲೇ ಹಲವು ತಂಡಗಳನ್ನು ರಚನೆ ಮಾಡಲಾಗಿದ್ದು, ವಿವಿಧ ಮೋರ್ಚಾಗಳು ಕೂಡ ಪ್ರಚಾರದಲ್ಲಿ ಸಕ್ರಿಯವಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಕಳೆದ ವಾರವಷ್ಟೇ ಚುನಾವಣಾ ಪ್ರಚಾರಕ್ಕೆ ಶಿವಮೊಗ್ಗದಲ್ಲಿ ನಾಂದಿ ಹಾಡಿದ್ದಾರೆ.
    ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಹಲವು ಸ್ಟಾರ್ ಪ್ರಚಾರಕರು ಆಗಮಿಸಲಿದ್ದಾರೆ. ಇದರಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಇರಲಿದ್ದಾರೆ. ರಾಜ್ಯ ಬಿಜೆಪಿಯಿಂದ ಇನ್ನಷ್ಟೇ ಈ ಬಗ್ಗೆ ಜಿಲ್ಲಾ ಘಟಕಕ್ಕೆ ಸಂಪೂರ್ಣ ಮಾಹಿತಿ ರವಾನೆಯಾಗಬೇಕಿದೆ.
    ಈ ಬಾರಿ ಬಿಜೆಪಿ ದೊಡ್ಡ ಸಮಾವೇಶಗಳನ್ನು ಹೆಚ್ಚು ಆಯೋಜಿಸುವ ಬದಲು ಈ ಹಿಂದೆ ನಡೆಸಿದ ಚಾಯ್ ಪೇ ಚರ್ಚಾ ಮಾದರಿಯ ಮೊಹಲ್ಲಾ ಸಭೆಗಳನ್ನು ನಡೆಸಲು ತೀರ್ಮಾನಿಸಿದೆ. ಗ್ರಾಮಗಳಲ್ಲಿ, ಗ್ರಾಪಂ ಹಂತಗಳಲ್ಲಿ, ಪಟ್ಟಣ ಹಾಗೂ ನಗರದ ವಾರ್ಡ್‌ಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಸಭೆ ನಡೆಸಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲಾಗುತ್ತದೆ ಎಂದು ಬಿಜೆಪಿ ಪ್ರಮುಖರೊಬ್ಬರು ತಿಳಿಸಿದ್ದಾರೆ.
    ವಿವಿಧ ವರ್ಗಗಳ ಜತೆ ಮೀಟಿಂಗ್: ಸಮಾಜದ ವಿವಿಧ ವಲಯಗಳ ಜನರೊಂದಿಗೆ ಸಭೆ ನಡೆಸಿ ಸರ್ಕಾರದ ಸಾಧನೆಯನ್ನು ವಿವರಿಸುವುದು ಬಿಜೆಪಿ ಈವರೆಗೆ ನಡೆಸಿಕೊಂಡಿರುವ ಪ್ರಚಾರ ತಂತ್ರದ ಒಂದು ಭಾಗ. ಕೆಲ ದಿನಗಳ ಹಿಂದೆಯೇ ಮೀನಾಕ್ಷಿ ಲೇಖಿ ಅವರು ಶಿವಮೊಗ್ಗದಲ್ಲಿ ಪ್ರಬುದ್ಧರ ಸಭೆಯೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಕಡೇ ಕ್ಷಣದಲ್ಲಿ ಅವರ ಕರ್ನಾಟಕ ಪ್ರವಾಸ ರದ್ದಾದ ಕಾರಣ ಸಭೆ ನಡೆಯಲಿಲ್ಲ. ಇನ್ನೊಂದು ವಾರದಲ್ಲಿ ವಿವಿಧ ವರ್ಗ ಹಾಗೂ ಮೋರ್ಚಾಗಳ ಸಭೆಯನ್ನು ನಡೆಸಲು ಬಿಜೆಪಿ ತೀರ್ಮಾನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts