More

    ಹೋಂ ವರ್ಕ್​ ಮಾಡ್ತಾ ಮಾಡ್ತಾ ಮಲಗೇ ಬಿಟ್ಟ; ಎದ್ದೇಳುವಷ್ಟರಲ್ಲಿ ಕೆನ್ನೆ ಮೇಲೆ ಹಲ್ಲಿ ಮಾರ್ಕ್​!

    ತೈಪೆ: ಹೋ ವರ್ಕ್​ ಮಾಡುವಾಗ, ಕ್ಲಾಸ್​ನಲ್ಲಿ ಕುಳಿತಿರುವಾಗ ನಿದ್ದೆಗೆ ಜಾರಿರುವ ಅನುಭವ ಎಲ್ಲರಿಗೂ ಇರುತ್ತದೆ. ಅದಾದ ಮೇಲೆ ಟೀಚರ್​ ಅಥವಾ ಅಮ್ಮನ ಹತ್ತಿರ ಪೆಟ್ಟು ತಿಂದಿರುವ ನೆನಪೂ ಇದ್ದೇ ಇರುತ್ತದೆ. ಆದರೆ ಈ ಬಾಲಕನದ್ದು ವಿಚಿತ್ರ ಕಥೆ. ಹೋಂ ವರ್ಕ್​ ಮಾಡ್ತಾ ನಿದ್ದೆಗೆ ಜಾರಿದವನು ಎದ್ದೇಳುವಷ್ಟರಲ್ಲಿ ಕೆನ್ನೆಯ ಮೇಲೆ ಹಲ್ಲಿಯ ಮಾರ್ಕ್​ ಬಿದ್ದುಬಿಟ್ಟಿದೆ.

    ತೈವಾನ್​ ಬಾಲಕ ಮನೆಯಲ್ಲಿ ಕುಳಿತು ಶಿಕ್ಷಕರು ಕೊಟ್ಟಿದ್ದ ಹೋಂ ವರ್ಕ್​ ಮಾಡುತ್ತಿದ್ದನಂತೆ. ಹಾಗೆಯೇ ಆತ ನಿದ್ದೆಗೆ ಜಾರಿದ್ದಾನೆ. ನಿದ್ದೆ ಮಾಡಿದವನನ್ನು ತಾಯಿ ಬಂದು ಎಬ್ಬಿಸಿದಾಗ ಆಕೆಗೆ ಆಶ್ಚರ್ಯವಾಗಿದೆ. ಬಾಲಕ ನಿದ್ರೆಯ ಗುಂಗಲ್ಲಿ ಅಲ್ಲಿದ್ದ ಹಲ್ಲಿಯನ್ನೂ ಗಮನಿಸದೆ ಅದರ ಮೇಲೆ ಮುಖವಿಟ್ಟು ಮಲಗಿಬಿಟ್ಟಿದ್ದಾನೆ. ಎದ್ದಾಗ ಎಳೆ ಚರ್ಮದ ಅವನ ಕೆನ್ನೆಯ ಮೇಲೆ ಹಲ್ಲಿಯ ಮಾರ್ಕ್​ ಕಾಣಿಸಿಕೊಂಡಿದೆ.

    ಈ ವಿಚಾರವನ್ನು ಬಾಲಕನ ಕುಟುಂಬಸ್ಥರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ನಿದ್ರೆ ಎನ್ನುವುದು ಎಷ್ಟರ ಮಟ್ಟಿಗೆ ಎಳೆದುಕೊಂಡುಬಿಡುತ್ತದೆ ಎಂದು ನೆಟ್ಟಿಗರು ಚರ್ಚೆ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಶ್ರೀಲಂಕಾಕ್ಕೆ 362 ಕೋಟಿ ರೂಪಾಯಿ ಸಾಲ ಕೊಡಲು ಮುಂದಾದ ಪಾಕಿಸ್ತಾನ!

    ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆ್ಯಪ್​​ ಕಥೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts