More

    ಲೈನ್​ಮನ್​ಗಳ ಕಾರ್ಯ ಶ್ಲಾಘನೀಯ

    ಗುತ್ತಲ: ದೇಶಕ್ಕೆ ರೈತರು, ಸೈನಿಕರ ಸೇವೆ ಪ್ರಮುಖ. ಅದೇ ರೀತಿ ಹೆಸ್ಕಾಂಗಳಲ್ಲಿ ವಿದ್ಯುತ್​ನ ಸಂಪರ್ಕ ಹಾಗೂ ದುರಸ್ತಿ ವೇಳೆ ಪ್ರಾಣದ ಹಂಗು ತೊರೆದು ಕಾರ್ಯ ಮಾಡುವ ಲೈನ್​ ಮನ್​ಗಳ ಕೆಲಸವೂ ಪ್ರಮುಖವಾಗಿದೆ ಎಂದು ಬಿಎಸ್​ಎಫ್ ಯೋಧ ಅಶೋಕ ಹಾವೇರಿ ಹೇಳಿದರು.

    ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಿಂದು ಜಾಗರಣ ವೇದಿಕೆ ಹಾಗೂ ಯುವಾ ಬ್ರಿಗೇಡ್​ನ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲೈನ್​ವುನ್​ಗಳ (ಶಕ್ತಿಮಾನ್) ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರವಾಹ ಹಾಗೂ ಅತಿವೃಷ್ಟಿ ಸಮಯದಲ್ಲಿ ಹಾಗೂ ಮಳೆ ನಿಂತ ನಂತರ ಲೈನ್​ವುನ್​ಗಳು ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ. ಇಂದು ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮಯ ಹಾಗೂ ಶ್ಲಾಘನೀಯ ಕಾರ್ಯ ಎಂದರು.

    ಬಂಜಾರ ಸಂಘದ ಜಿಲ್ಲಾಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ, ಅತಿವೃಷ್ಟಿಯಾದ ಸಂದರ್ಭದಲ್ಲಿ ಲೈನ್​ವುನ್​ಗಳ ಕಾರ್ಯ ಸವಾಲಿನಿಂದ ಕೂಡಿರುತ್ತದೆ. ಅಂಥ ವೇಳೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಕೃತಿ ಅಲ್ಲದ ಪ್ರೇಮಿಗಳ ದಿನಾಚರಣೆ ಬದಲು ಲೈನ್​ವುನ್​ಗಳನ್ನು ಗೌರವಿಸುತ್ತಿರುವುದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ದಸಾರ ಉತ್ಸವ ಸಮಿತಿ ಅಧ್ಯಕ್ಷ ಚನ್ನಪ್ಪ ಕಲಾಲ, ಹೆಸ್ಕಾಂ ಸಹಾಯಕ ಂಜಿನಿಯರ್ ಕಿರಣಕುಮಾರ ಯಾದವ, ಕಿರಿಯ ಇಂಜಿನಿಯರ್ ಶಿವಾಜಿ ಸಂಗಮ್ಮನವರ ಮಾತನಾಡಿದರು.

    ಗುತ್ತಲ ಹೆಸ್ಕಾಂನ 15 ಹಾಗೂ ನೀರಲಗಿ ವಿಭಾಗದ 5 ಲೈನ್​ವುನ್​ಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ರಮೇಶ ಚಾವಡಿ, ಪಪಂ ಸದಸ್ಯ ರಮೇಶ ಮಠದ, ಲಿಂಗೇಶ ಬೆನ್ನೂರ, ಪರಮೇಶ ಕುರವತ್ತಿಗೌಡರ, ಬಸಣ್ಣ ಕಂಬಳಿ, ಪರಶುರಾಮ ಸಂಗಮ್ಮನವರ, ಸೋಮಣ್ಣ ಕಾಳಶೆಟ್ಟಿ, ಯುವಾ ಬ್ರಿಗೇಡ್​ನ ಮೃತ್ಯುಂಜಯ ರಿತ್ತಿಮಠ, ಕುಮಾರ ಚಿಗರಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts