More

    ಕರೊನಾ ಎಫೆಕ್ಟ್​: ಮದ್ಯ ಖರೀದಿಗೆ ಹೆಚ್ಚು ಸ್ಥಳ ಇಲ್ಲದ ಮಳಿಗೆಗಳನ್ನು ಮುಚ್ಚಿ ಇಲ್ಲ ಬೇರೆಡೆ ಸ್ಥಳಾಂತರಿಸಿ ಎಂದ ಕೇರಳ ಹೈಕೋರ್ಟ್​

    ಕೊಚ್ಚಿ: ಗ್ರಾಹಕರು ಮದ್ಯ ಖರೀದಿಸಲು ಅಗತ್ಯ ಜಾಗ ಸೇರಿದಂತೆ ಇತರ ಮೂಲ ಸೌಲಭ್ಯ ಇಲ್ಲದ ಮದ್ಯದ ಅಂಗಡಿಗಳನ್ನು ಮುಚ್ಚಿ ಇಲ್ಲ ಬೇರೆ ಕಡೆ ಸ್ಥಳಾಂತರಿಸಿ ಎಂದು ಕೇರಳ ಹೈಕೋರ್ಟ್​ ರಾಜ್ಯ ಪಾನೀಯ ನಿಗಮಕ್ಕೆ ಸೂಚಿಸಿದೆ.

    ಕೇರಳದಲ್ಲಿರುವ ಮದ್ಯದ ಅಂಗಡಿಗಳಲ್ಲಿ ಮೂಲಸೌಲಭ್ಯ ಕೊರತೆ ಇದೆ. ಗ್ರಾಹಕರು ನಿಂತು ಮದ್ಯ ಖರೀದಿಸಲು ಸ್ಥಳ ಇಲ್ಲ. ಹೀಗಾಗಿ ಗ್ರಾಹಕರು ಮದ್ಯ ಖರೀದಿಸಲು ರಸ್ತೆಯಲ್ಲಿ ಸಾಲು ನಿಂತಿರುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

    ಅಲ್ಲದೆ ಈಗ ಕೇರಳದಲ್ಲಿ ಕರೊನಾ ವೈರಸ್​ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳ ಮುಂದೆ ಗ್ರಾಹಕರು ಸಾಲು ನಿಲ್ಲುವುದು ಅಪಾಯಕಾರಿ ಎಂದು ಕೋರ್ಟ್​ ಹೇಳಿದೆ.

    ಗ್ರಾಹಕರು ಮದ್ಯ ಖರೀದಿಗೆ ಸ್ಥಳ ಸೇರಿದಂತೆ ಇತರೆ ಸೌಲಭ್ಯ ಇಲ್ಲದ ಮದ್ಯದ ಅಂಗಡಿಗಳ ಪರವಾನಗಿ ರದ್ದು ಮಾಡುವ ಅಥವಾ ಸ್ಥಳಾಂತರ ಮಾಡುವ ಸಂಪೂರ್ಣ ಅಧಿಕಾರ ರಾಜ್ಯ ಪಾನೀಯ ನಿಗಮಕ್ಕೆ ಇದೆ. ಕೂಡಲೇ ನಿಗಮದ ಅಧಿಕಾರಿಗಳು ಸ್ಥಳ ಇಲ್ಲದ ಮದ್ಯದ ಅಂಗಡಿಗಳನ್ನು ಗುರುತಿಸಿ ಕ್ರಮ ಜರುಗಿಸಿ ಎಂದು ಸೂಚಿಸಿದೆ. (ಏಜೆನ್ಸೀಸ್​)

    ಇಂದು (ಮಾ.24) ರಾತ್ರಿ 12ಗಂಟೆಯಿಂದ ಇಡೀ ಭಾರತ ಲಾಕ್​ಡೌನ್​; ಕರೊನಾದಿಂದ ಪಾರಾಗಲು ಇದೊಂದೇ ಮಾರ್ಗವೆಂದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts