More

    ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಪೂಜಾ ವಸ್ತ್ರಾಕರ್​​​​ಗೆ ಪ್ರೇರಣೆ ಇವರೇ ಅಂತೆ..!

    ಬೆಂಗಳೂರು:  ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಪುರುಷರಿಗೆ ಸಮಾನವಾಗಿ ಆಡಬಲ್ಲ ಆಟಗಾರ್ತಿ ಎಂದರೆ ಅದು ಪೂಜಾ ವಸ್ತ್ರಾಕರ್ ಮಾತ್ರ. ತಂಡದಲ್ಲಿರುವ ಅತ್ಯುತ್ತಮ ಆಲ್‌ರೌಂಡರ್ ಪೈಕಿ ಇವರೂ ಒಬ್ಬರು. ಇಂದಿನ ಯಶೋಗಾಥೆ ಇವರ ಕುರಿತಾಗಿದೆ.

    ಪೂಜಾ ಮಧ್ಯಪ್ರದೇಶದ ಶಹದೋಲ್ ನಿವಾಸಿ. ಬಿಡುವಿನ ವೇಳೆ ಮಕ್ಕಳು ಕಾರ್ಟೂನ್ ವೀಕ್ಷಣೆ, ಪ್ರವಾಸ ಎಂದು ಹೋಗುತ್ತಿದ್ದರೆ, ಇವರು ಮಾತ್ರ ರಜಾ ದಿನಗಳಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ತೆರಳುತ್ತಿದ್ದರು. ಬಿಡುವಿನ ವೇಳೆಯಲ್ಲಿ ಮನೆಯ ಹಿತ್ತಲಿನಲ್ಲಿ ಗೋಡೆಗೆ ಚೆಂಡು ಎಸೆದು ಒಬ್ಬರೇ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಇವರ ಬ್ಯಾಟಿಂಗ್ ಶೈಲಿ ಹಾಗೂ ಕ್ರಿಕೆಟ್‌ನಲ್ಲಿ ಇದ್ದ ಬದ್ಧತೆಯನ್ನು ಗಮನಿಸಿದ್ದ ಮಧ್ಯಪ್ರದೇಶ ರಣಜಿ ತಂಡದ ತರಬೇತುದಾರ ಅಶುತೋಷ್ ಶ್ರೀವಾಸ್ತವ ಆಸಕ್ತಿ ವಹಿಸಿ ವೈಯಕ್ತಿಕವಾಗಿ ತರಬೇತಿ ನೀಡಿದರು.

    ಅರೆಕಾಲಿಕ ಬೌಲಿಂಗ್ ನಡೆಸುತ್ತಿದ್ದ ಪೂಜಾ ತಮ್ಮ ವೇಗದ ಎಸೆತದ ಕಾರಣದಿಂದ ಉತ್ತಮ ಆಲ್‌ರೌಂಡರ್ ಆಗಿ ಬದಲಾದರು. 2021ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಪೂಜಾ ಅದಕ್ಕೂ ಮೊದಲೇ ಏಕದಿನ ಹಾಗೂ ಟಿ20 ಕ್ಯಾಪ್ ಧರಿಸಿದ್ದರು. ಪ್ರಸಕ್ತ ವರ್ಷ ನಡೆದ ಏಷ್ಯನ್‌ಗೇಮ್ಸ್‌ನ ಮಹಿಳಾ ಟಿ20 ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯೆಯೂ ಹೌದು. ಡಬ್ಲ್ಯುಪಿಎಲ್‌ನಲ್ಲಿ ಪೂಜಾ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಆಸೀಸ್‌ನ ವೇಗಿ ಗ್ಲೆನ್ ಮೆಕ್‌ಗ್ರಾಥ್ ಹಾಗೂ ಭಾರತದ ಮಹಿಳಾ ವೇಗಿ ಜೂಲನ್ ಗೋಸ್ವಾಮಿ ಇವರಿಗೆ ಪ್ರೇರಣೆ.

    ಮ್ಯೂನಿಚ್‌ನಲ್ಲಿ ಭಾರಿ ಹಿಮಪಾತ: 300 ಕ್ಕೂ ಹೆಚ್ಚು ವಿಮಾನಗಳು, ಅನೇಕ ರೈಲುಗಳು ರದ್ದು, ಫೋಟೋಗಳಲ್ಲಿ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts