More

    ದಕ್ಷಿಣ ಕೊರಿಯಾ ಎದುರು ಡ್ರಾ ಸಾಧಿಸಿದ ಭಾರತ: ಸೆಮಿಫೈನಲ್ ಸ್ಥಾನ ಬಹುತೇಕ ಖಚಿತ

    ಹಾಂಗ್‌ರೆೌ: ಆರಂಭಿಕ ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಹಾಕಿ ತಂಡ 1-1ರಿಂದ ದಕ್ಷಿಣ ಕೊರಿಯಾ ಎದುರು ಡ್ರಾ ಸಾಧಿಸಿದೆ. ಇದರೊಂದಿಗ ಸವಿತಾ ಪೂನಿಯಾ ಪಡೆ ಏಷ್ಯಾಡ್‌ನಲ್ಲಿ ಅಜೇಯವಾಗಿ ಉಳಿದಿದ್ದು, ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ ಸೆಮಿೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.
    ಭಾನುವಾರ ನಡೆದ ಪಂದ್ಯದಲ್ಲಿ ಕೊರಿಯಾ ಪರ ಚೊ ಹೈಜಿನ್ (12ನೇ ನಿಮಿಷ) ಗೋಲುಗಳಿಸಿ ಮುನ್ನಡೆ ಒದಗಿಸಿದರು. ಮೊದಲಾರ್ಧದಲ್ಲಿ ಭಾರತ 0-1 ಹಿನ್ನಡೆ ಕಂಡಿತು. ಮೂರನೇ ಕ್ವಾರ್ಟರ್‌ವರೆಗೂ ದೊರೆತ ಹಲವು ಪೆನಾಲ್ಟಿ ಅವಕಾಶಗಳನ್ನು ಕೈಚೆಲ್ಲಿದ ಭಾರತ ಸಮಬಲ ಸಾಧಿಸುವಲ್ಲಿ ವಿಲವಾಯಿತು. ಅಂತಿಮವಾಗಿ ಭಾರತದ ಪರ ನವನೀತ್ ಕೌರ್ (44ನೇ ನಿಮಿಷ) ಗೋಲು ಬಾರಿಸಿ ಸಮಬಲ ತಂದರು. 57ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಲವಾದ ಭಾರತ ಗೆಲುವಿನ ಅವಕಾಶ ಕಳೆದುಕೊಂಡಿತು.
    ವಿಶ್ವ ರ‌್ಯಾಂಕಿಂಗ್‌ನಲ್ಲಿ ಭಾರತ ಆರನೇ ಸ್ಥಾನದಲ್ಲಿದ್ದು, ಕೊರಿಯಾ 12ನೇ ಸ್ಥಾನದಲ್ಲಿದೆ. ಭಾರತ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮಂಗಳವಾರ ಹಾಂಕಾಂಗ್ ಸವಾಲು ಎದುರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts