More

    ಮಹಿಳಾ ವೈದ್ಯೆಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಮೂಲದ ವೈದ್ಯ..!

    ವಾಷಿಂಗ್ಟನ್​: ಭಾರತೀಯ ಮೂಲದ ವೈದ್ಯರೊಬ್ಬರು ಗುಂಡು ಹಾರಿಸಿ ಮಹಿಳಾ ವೈದ್ಯರೊಬ್ಬರನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

    ಘಟನೆಯು ಅಮೆರಿಕದ ಟೆಕ್ಸಾಸ್​ನಲ್ಲಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ. ಭಾರತೀಯ ಮೂಲದ ಶಿಶುವೈದ್ಯ ಭರತ್​ ಕುಮಾರ್​ ನಾರುಮಂಚಿ (43) ಅವರು ಇತ್ತೀಚೆಗಷ್ಟೇ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿದ್ದರ. ಅಲ್ಲದೆ, ಹೆಚ್ಚಿನ ದಿನ ಬದುಕುವುದಿಲ್ಲ ಎಂದು ಹೇಳಿದ್ದರು. ಅಂದಿನಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು.

    ಇದನ್ನೂ ಓದಿರಿ: ಮೈಸೂರಿನಲ್ಲಿ ವೈದ್ಯ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ಆ ಮನೆಗೆ ದುಷ್ಕರ್ಮಿ ಬಂದಿದ್ದಾದರೂ ಏಕೆ?

    ಭರತ್​ರನ್ನು ಅವರು ಕೆಲಸ ಮಾಡುವ ಆಸ್ಟಿನ್​ನಲ್ಲಿರುವ ಚಿಲ್ಡ್ರನ್​ ಮೆಡಿಕಲ್​ ಗ್ರೂಪ್​ ಹಾಸ್ಪಿಟಲ್​ನಲ್ಲಿ ದಾಖಲಿಸಲಾಗಿತ್ತು. ಮಂಗಳವಾರ ಸಂಜೆ 4.30ರ ಸುಮಾರಿಗೆ ಭರತ್​ ಬಳಿ ಗನ್​ ಇರುವುದು ಆಸ್ಪತ್ರೆಯಲ್ಲಿ ಗೊತ್ತಾಗಿದೆ. ಅಲ್ಲದೆ, ಅವರೊಂದಿಗೆ ಕೆಲಸ ಮಾಡುವ ಕ್ಯಾಥರಿನ್ ಲಿಂಡ್ಲಿ ಡಾಟ್ಸನ್​ ವೈದ್ಯೆ ಸೇರಿದಂತೆ ಇತರರನ್ನು ಗುರಿಯಾಗಿಸಿಕೊಂಡು ಭರತ್​ ಬೆದರಿಕೆ ಹಾಕಿದ್ದಾರೆ.

    ಇದರಿಂದ ಆಸ್ಪತ್ರೆಯಲ್ಲಿ ಸುಮಾರು 6 ಗಂಟೆಗಳ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿ ಭಯಭೀತಗೊಂಡ ಜನರು ಅಲ್ಲಿಂದ ಕಾಲ್ಕಿತ್ತಿದ್ದರೆ. ಆದರೆ, ಕ್ಯಾಥರಿನ್​ ಮೇಲೆ ಭರತ್​ ಗುಂಡು ಹಾರಿಸಿ ಕೊಂದಿದ್ದಾರೆ. ಇದಾದ ಬಳಿಕ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಕೊಲೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. (ಏಜೆನ್ಸೀಸ್​)

    ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

    ಅಂಚೆ ಕಚೇರಿಯಲ್ಲೂ ನಿಮ್ಮ ಹಣ ಸೇಫಲ್ಲ! ಬಡವರ ಹಣ ದೋಚುತ್ತಾರೆ ಖತರ್ನಾಕ್ ಅಧಿಕಾರಿಗಳು…

    ‘ನನ್ ಬಿಟ್ಟು ಅದೇಗೆ ಕರೊನಾ ಲಸಿಕೆ ತೆಗೆದುಕೊಂಡ್ರಿ?’ ಪದ್ಮಶ್ರೀ ಪುರಸ್ಕೃತ ಡಾಕ್ಟರ್​ಗೆ ಹೆಂಡತಿಯಿಂದ ಕ್ಲಾಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts