More

    ಹೊಳೆ ಮೀನಿನ ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ…!

    ಅಂಕೋಲಾ: ಆಳ ಸಮುದ್ರ ಮೀನುಗಾರಿಕೆ ನಿಷೇಧ ಇರುವುದರಿಂದ ಕೇವಲ ಸಾಂಪ್ರದಾಯಿಕ ಮೀನುಗಾರಿಕೆ ಮಾತ್ರ ಈಗ ನಡೆಯುತ್ತಿದೆ. ಇದರಿಂದ ಸ್ವಾಭಾವಿಕವಾಗಿಯೇ ಮೀನುಗಳಿಗೆ ಹೆಚ್ಚಿನ ದರ ಬಂದಿದೆ.

    ಇದರಿಂದಾಗಿ ಮತ್ಸ್ಯಪ್ರಿಯರು ಹೆಚ್ಚಿನ ಹಣ ನೀಡಿ ಮೀನನ್ನು ಖರೀದಿಸುತ್ತಿದ್ದಾರೆ. ಮಳೆಗಾದಲ್ಲಿ ಅದರಲ್ಲೂ ವಿಶೇಷವಾಗಿ ಅಪರೂಪದ ತಳಿಯ ಮೀನುಗಳು ಮಾತ್ರ ಕಾಣಲು ಸಾಧ್ಯ.

    ಕೆಂಸ, ಕುರುಡಿ, ಬೈಗೆ, ಸೆಟ್ಲಿ ಹೀಗೆ ವಿವಿಧ ಪ್ರಬೇಧದ ಮೀನುಗಳು ಬಲೆಗೆ ಸಿಗುತ್ತಿದೆ. ಮೀನಿನ ಕೊರತೆಯಿರುವುದರಿಂದಾಗಿ ಅತಿ ಹೆಚ್ಚು ಹಣಕ್ಕೆ ಮಾರಾಟವಾಗುತ್ತಿದೆ. 5 ಕೆಂಸ ಮೀನಿಗೆ 300 ರಿಂದ 500 ರೂ.ಗಳವರೆಗೆ ಇದ್ದು, ಇತರೇ ಮೀನಿಗೂ ಬಹುಬೆಲೆಯಿದೆ. ಹೀಗಾಗಿ ನದಿಯಂಚಿನ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ.

    ನದಿಯಂಚಿನಲ್ಲಿಯೂ ಕೂಡ ಮೀನುಗಳು ಅಪರೂಪವಾಗಿದ್ದು, ಸುಮಾರು 4 ರಿಂದ 5 ತಾಸು ಮೀನುಗಾರಿಕೆ ನಡೆಸಿದರೆ ಸ್ವಲ್ಪ ಮೀನು ಹಿಡಿಯಲು ಸಾಧ್ಯವಾಗುತ್ತದೆ. ಕೆಲವೊಂದು ವೇಳೆ ಒಂದೆರಡು ಮೀನಿಗೆ ಸೀಮಿತವಾಗುವಂತಾಗಿದೆ.

    ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಈ ಹಿಂದಿಗಿಂತ ಈಗ ಮೀನಿನ ಕೊರತೆ ಕಂಡುಬರುತ್ತಿದೆ. ಬೇಡಿಕೆಯಿದ್ದರೂ ಮೀನು ಸಾಕಷ್ಟು ಸಿಗದಿದ್ದರಿಂದಾಗಿ ಇದ್ದ ಮೀನಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತೇವೆ. ಹೆಚ್ಚು ಮೀನು ಸಿಕ್ಕರೆ ದರ ಸ್ವಲ್ಪ ಕಡಿಮೆ ಮಾಡುತ್ತೇವೆ. ದರ ಎಷ್ಟೇ ಆದರೂ ಮೀನು ಬೇಗ ಖರೀದಿಯಾಗುತ್ತದೆ.
    | ಪುಷ್ಪಾ ಹರಿಕಂತ್ರ ಮೀನುಗಾರ ಮಹಿಳೆ

    ಮಳೆಗಾಲದಲ್ಲಿ ಆಳ ಮೀನುಗಾರಿಕೆ ನಿಷೇಧ ಇರುವುದರಿಂದ ಸಾಂಪ್ರದಾಯಿಕ ಮೀನುಗಾರರಿಂದಲೇ ಮೀನನ್ನು ಖರೀದಿಸಬೇಕಾಗಿದೆ. ಕರಾವಳಿ ಭಾಗದವರಿಗೆ ಮೀನಿಲ್ಲದೆ ಊಟ ಸೇರುವುದಿಲ್ಲ. ಹೀಗಾಗಿ ನಾವು ಎಷ್ಟೇ ಹಣವಾದರೂ ಖರೀದಿಸುತ್ತೇವೆ.
    ಹಮ್ಮಣ್ಣ ನಾಯಕ ಮತ್ಸ್ಯಪ್ರಿಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts