More

    ಅರಬ್​ ರಾಷ್ಟ್ರದಿಂದ ಬಂದ ಹಡಗಿನ ಕಂಟೈನರ್​​ನಲ್ಲಿ ಸಿಕ್ತು ಕೋಟ್ಯಾಂತರ ಬೆಲೆಯ ಹೆರಾಯಿನ್​!: ಅಧಿಕಾರಿಗಳು ಪತ್ತೆ ಹಚ್ಚಿದ್ದು ಹೀಗೆ

    ಅಹಮದಾಬಾದ್​: ಗುಜರಾತ್​​ನ ಕಚ್​ ಜಿಲ್ಲೆಯಲ್ಲಿರುವ ಮುಂದ್ರಾ ಬಂದರಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಾಣಿಕೆಯನ್ನು ಪತ್ತೆ ಹಚ್ಚಿರುವ ಗುಜರಾತ್​ ಭಯೋತ್ಪಾದಕ ನಿಗ್ರಹ ಪಡೆ ಭಾರೀ ಜಾಲವೊಂದನ್ನು ಬೇಧಿಸಿದ್ದಾರೆ.

    ಹಡಗಿನ ಕಂಟೈನರ್​ನಲ್ಲಿದ್ದ 75.3 ಕೆಜಿ ಹೆರಾಯಿನ್​ ವಶಪಡಿಸಿಕೊಳ್ಳಲಾಗಿದ್ದು, ಇದರ ಬೆಲೆ ಬರೋಬ್ಬರಿ 376.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹಡಗು ಅರಬ್​ ರಾಷ್ಟ್ರದಿಂದ ಬಂದಿದ್ದು, ಪಂಜಾಬ್​​ಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಡಿಜಿಪಿ ಆಶೀಶ್​ ಭಾಟಿಯಾ ತಿಳಿಸಿದ್ದಾರೆ.

    ಇದರಲ್ಲಿ ಪಶ್ವಿಮ ಬಂಗಾಳದ ಏಜೆಂಟ್​ಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಶೀಘ್ರದಲ್ಲೇ ಎಲ್ಲರನ್ನು ಬಂಧಿಸಲಾಗುವುದು ಎಂದಿದ್ದಾರೆ. ಅಲ್ಲದೇ ಮಹಾರಾಷ್ಟ್ರ ಹವಾ ಶೆವಾ ಬಂದರು, ಚೆನ್ನೈ ಬಂದರುಗಳಲ್ಲೂ ಸಹ ಇಂತಹ ಮಾದಕ ದ್ರವ್ಯಗಳ ಕಳ್ಳ ಸಾಗಣಿಕೆಗಳನ್ನು ಹಲವು ಬಾರಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

    ಇನ್ನು ಮಂಗಳವಾರ ಬಂದರಿಗೆ ಬಂದಿಳಿದ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆ ಹಚ್ಚಿದ್ದು ಮಾತ್ರ ರೋಚಕವಾಗಿತ್ತು, ಹೆರಾಯಿನ್​ ಅನ್ನು ಪೈಪ್​ಗಳಲ್ಲಿ ತುಂಬಿ ಬಟ್ಟೆಗಳಿಂದ ಸಂಪೂರ್ಣ ಸುತ್ತಲಾಗಿತ್ತು. ನೋಡಿದವರಿಗೆ ಸ್ವಲ್ಪವೂ ಅನುಮಾನ ಬಾರದ ರೀತಿಯಲ್ಲಿ ಬಟ್ಟೆ ಸುರುಳಿಯಾಕಾರದಲ್ಲಿ ಸುತ್ತಲಾಗಿತ್ತು. ಅನುಮಾನಗೊಂಡು ಇವುಗಳನ್ನು ತೆರೆದ ನೋಡಿದ ಅಧಿಕಾರಿಗಳೇ ಶಾಕ್​ ಆಗಿದ್ದು ನಂತರ ಪರೀಕ್ಷಿಸಿದಾಗ ಇದು ಮಾದಕ ದ್ರವ್ಯವೆಂದು ದೃಢವಾಯಿತು ಎಂದು ಭಾಟಿಯಾ ಕಾರ್ಯಾಚರಣೆಯನ್ನು ವಿವರಿಸಿದ್ದಾರೆ. (ಏಜೆನ್ಸೀಸ್​)

    ಎಲ್ಐಸಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್​​ನಲ್ಲಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ದ ಸ್ಥಳೀಯರು!

    ಮುಖ್ಯಮಂತ್ರಿಗೆ ಕಳಪೆ ಟೀ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts