More

    ಕಾಡಾನೆ ಆಯ್ತು ಈಗ ಚಿರತೆ ಹಾವಳಿ

    ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಹೋಬಳಿಯಲ್ಲಿ ಕಾಡಾನೆ ಹಾವಳಿ ಮಧ್ಯೆಯೇ ಗುಡ್ಡೇಕೇರಿ ಸಮೀಪದ ಹಸಿರುಮನೆ ದೋಣಿಹಕ್ಕಲು ಭಾಗದ ಜನವಸತಿ ಪ್ರದೇಶದಲ್ಲಿ ಚಿರತೆ ಹಾವಳಿ ಜೋರಾಗಿದ್ದು ಮೇಯಲು ಹೋದ ಜಾನುವಾರುಗಳು ಕಾಣೆಯಾಗುತ್ತಿವೆ.
    ಕಾಡಾನೆ, ಕಾಡುಕೋಣ, ಮಂಗಗಳ ಹಾವಳಿಯಿಂದ ಈಗಾಗಲೇ ತತ್ತರಿಸಿರುವ ಈ ಭಾಗದಲ್ಲಿ ಈಚಿನ ದಿನಗಳಲ್ಲಿ ಚಿರತೆ ಹಾವಳಿಯೂ ಹೆಚ್ಚುತ್ತಿರುವ ಬಗ್ಗೆ ಜನರಲ್ಲಿ ಭೀತಿ ಉಂಟಾಗಿದೆ. ಇತ್ತೀಚೆಗೆ ಹತ್ತಕ್ಕೂ ಹೆಚ್ಚು ದನಗಳು ಕಾಣೆಯಾಗಿವೆ.
    ಮೇಯಲು ಹೋದ ಜಾನುವಾರುಗಳು ಮನೆಗೆ ಹಿಂತಿರುಗುವ ಭರವಸೆಯೇ ಇಲ್ಲ. ಜನವಸತಿ ಪ್ರದೇಶಗಳಲ್ಲಿ ಚಿರತೆಗಳು ಸಂಚರಿಸುತ್ತಿದ್ದು ಕಾಣೆಯಾದ ಜಾನುವಾರುಗಳನ್ನು ಕಾಡು ಪ್ರದೇಶದಲ್ಲಿ ಹುಡುಕಲು ಹೋಗುವುದಕ್ಕೂ ಭಯವಾಗುತ್ತಿದೆ ಎಂದು ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂದರು.
    ದೋಣಿಹಕ್ಕಲು ಮಾರ್ಗದ ಸುಮಾರು 20 ಎಕರೆ ಪ್ರದೇಶದಲ್ಲಿ ಬೆತ್ತದ ಕಾಡನ್ನು ಬೆಳೆಸಿದ್ದು ಜಾನುವಾರುಗಳಿಗೆ ಮೇಯಲು ಜಾಗವೇ ಇಲ್ಲದಂತಾಗಿದೆ. ಚಿರತೆ ಹಾವಳಿಯಿಂದಾಗಿ ಹೊರಗೆ ಮೇಯಲು ಬಿಡುವ ಜಾನುವಾರುಗಳು ಮನೆಗೆ ಹಿಂದಿರುಗುವ ಭರವಸೆಯೇ ಇಲ್ಲದಂತಾಗಿದೆ ಎಂದು ತೀರ್ಥಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಹಸಿರುಮನೆ ಮಹಾಬಲೇಶ್ ಆತಂಕ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts