More

    ನನ್ನ ಜೀವನದ ಮೊದಲ ಬಿಜಿನೆಸ್​ ಕೋಳಿ ವ್ಯಾಪಾರ; ಈಗ ಮೊಟ್ಟೆ-ಕೋಳಿ ತಿನ್ನಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ಯಾವುದಾದರೂ ಸಭೆ-ಸಮಾರಂಭಗಳಲ್ಲಿ ರಾಜಕಾರಣಿಗಳ ಕುರಿತ ಆಸಕ್ತಿಕರ ಅಂಶಗಳು ಹಾಗೇ ಮಾತಿನ ನಡುವೆ ಹೊರಬಂದಿರುತ್ತವೆ. ಅಂಥದ್ದೇ ಒಂದು ಸಂಗತಿ ಇಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುವ ವೇಳೆ ಬಹಿರಂಗಗೊಂಡಿದೆ.

    ನಾನು ಜೀವನದಲ್ಲಿ ಮಾಡಿದ ಮೊದಲ ಬಿಜಿನೆಸ್​ ಕೋಳಿ ವ್ಯಾಪಾರ ಎಂದಿರುವ ಅವರು, ಇದೀಗ ಕೋಳಿ ಮಾತ್ರವಲ್ಲ ಮೊಟ್ಟೆಯನ್ನೂ ತಿನ್ನುತ್ತಿಲ್ಲ ಎಂಬ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಇಂದು ಕುಕ್ಕುಟ ಮಹಾ ಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ ಅವರು ಈ ವಿಷಯ ಹಂಚಿಕೊಂಡರು.

    ಪಿಯುಸಿ ಓದುವಾಗ ರಜೆಯಲ್ಲಿ ಇದೇ ಕ್ಯಾಂಪಸ್​ನಲ್ಲಿ 15 ದಿನ ಪೌಲ್ಟ್ರಿ ತರಬೇತಿ ಪಡೆದಿದ್ದೆ. ಸುಂಕದಕಟ್ಟೆ ಹೆಗ್ಗನಹಳ್ಳಿ ಬಳಿ ಇದ್ದ ನಮ್ಮ ಜಮೀನಿನಲ್ಲಿ ಕೋಳಿ ಫಾರಂ ಇಟ್ಟು ನಾನೇ ನಡೆಸುತ್ತಿದ್ದೆ. ಆದರೆ, ಮೇಲೆ ಲಾಸ್ ಆಯ್ತು ಬಿಟ್ಬಿಟ್ಟೆ ಎಂಬುದಾಗಿ ಅವರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

    ಆಮೇಲೆ ಅಪ್ಪ ಅಮ್ಮ ಊರಲ್ಲಿ ಷೆಡ್ ಹಾಕಿ ಫಾರಂ ಮಾಡಿದ್ದರೂ ಆಮೇಲೆ ನಾವು ಅಲ್ಲಿಗೆ ಹೋಗಿಲ್ಲ ಎಂದು ಶಿವಕುಮಾರ್, ತಮಗೂ ಕೋಳಿಗೂ ಸಂಬಂಧ ಇದೆ ಎಂಬುದನ್ನು ಹೇಳಿಕೊಂಡರು. ನನ್ನ ಜೀವನದ ಮೊದಲ ಬಿಜಿನೆಸ್​ ಕೋಳಿ ವ್ಯಾಪಾರ, ಬ್ಯಾಂಕ್​ನಲ್ಲಿ ಸಾಲ ಪಡೆದು ಮಾಡಿದ್ದೆ ಎಂಬುದನ್ನು ಸ್ಮರಿಸಿಕೊಂಡರು.

    ಇದನ್ನೂ ಓದಿ: ‘ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ’: ಪೋಸ್ಟರ್ ಹರಿಬಿಟ್ಟ ಬಿಜೆಪಿ

    ಕೋಳಿ ಸಾಕಣೆಯಲ್ಲೂ ಸಾಕಷ್ಟು ರಿಸ್ಕ್ ಇದೆ, ಶ್ರಮವೂ ಅಗತ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರ ಅವರು, ಗಿಡದಲ್ಲೂ ಮೊಟ್ಟೆ ಬೆಳೆಯುವಂಥ ಆವಿಷ್ಕಾರಗಳು ನಡೆದಿರುವುದನ್ನು ನನಗೆ ಇಂಟರ್​​ನೆಟ್​ನಲ್ಲಿ ಮಕ್ಕಳು ತೋರಿಸಿದ್ದಾರೆ. ಪ್ರಕೃತಿ ನಿಯಮದ ವಿರುದ್ಧ ಹೀಗೆ ಬೆಳೆಯುತ್ತಿರುವುದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ ಎಂದರು.

    ಸರ್ಕಾರದ ವತಿಯಿಂದ ಕುಕ್ಕುಟ ಮಹಾ ಮಂಡಳಿಗೆ ಬೇಕಾದ ಸಹಕಾರ ಕೊಡುತ್ತೇವೆ, ಕೋಳಿಸಾಕಣೆದಾರರಿಗೆ ನಮ್ಮ ಬೆಂಬಲ ಯಾವತ್ತೂ ಇರುತ್ತದೆ ಎಂದ ಶಿವಕುಮಾರ್, ಕೋಳಿ ಸಾಕಣೆ ಉದ್ಯಮಕ್ಕಾಗಿ ಪಶುವೈದ್ಯರನ್ನು ಬೆಂಬಲಿಸಬೇಕಾಗಿದೆ. ಖಾಸಗಿಯಿಂದಲೂ ಪಶುವೈದ್ಯಕೀಯ ಕಾಲೇಜುಗಳ ಸ್ಥಾಪನೆ ಆರಂಭಿಸುವ ಚಿಂತನೆ ಕುರಿತಂತೆ ಚರ್ಚೆ ಆಗುತ್ತಿದೆ ಎಂದರು.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಮಂಚದಡಿಯಲ್ಲಿ ಕೋಟಿಗಟ್ಟಲೆ ಹಣ!; ತಿರುಗುಬಾಣ ಆಗಲಿದೆಯೇ 40% ಕಮಿಷನ್ ಪ್ರಕರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts