More

    ಮನರೇಗಾ ಯೋಜನೆ ಕಾಮಗಾರಿ ಕುಂಠಿತವಾದರಿಂದ ಗ್ರಾಮಕ್ಕೇ ಬರಲಿದೆ ಜಿಲ್ಲಾ ಪಂಚಾಯಿತಿ

    ತುಮಕೂರು : ಮನರೇಗಾ ಯೋಜನೆಯ ಕಾಮಗಾರಿ ಪ್ರಗತಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾ ಪಂಚಾಯಿತಿ ಗ್ರಾಮಗಳಿಗೆ ತೆರಳಿ ಕ್ರಿಯಾಯೋಜನೆ ತಯಾರಿಸುವ ಕೆಲಸಕ್ಕೆ ಮುಂದಾಗಿದೆ. ಅ.2 ರಿಂದ ಜಿಲ್ಲೆಯ ಗ್ರಾಪಂಗಳಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆಗಳನ್ನು ಇಟ್ಟಿದ್ದು, ಗ್ರಾಮಸ್ಥರು ತಮಗೆ ಅವಶ್ಯಕವಾದ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಅರ್ಜಿಯನ್ನು ಪೆಟ್ಟಿಗೆಯಲ್ಲಿ ಬರೆದು ಹಾಕುತ್ತಿದ್ದಾರೆ. ರೈತರು ಯೋಜನೆಯಡಿ ಸ್ವಂತ ಜಮೀನಿನಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬೇಡಿಕೆಯನ್ನು ಕಾಯಕಮಿತ್ರ ಮೊಬೈಲ್ ಅಪ್ಲಿಕೇಷನ್ ಹಾಗೂ ವೆಬ್ ಸೈಟ್ ಮೂಲಕವೂ ಸ್ವೀಕರಿಸಲಾಗುತ್ತಿದೆ.

    ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಶಿರಾ ಉಪಚುನಾವಣೆ ಚುನಾವಣಾ ಆಯೋಗ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿ, ವಾದರಿ ನೀತಿ ಸಂಹಿತೆ ಜಾರಿಗೊಳಿಸಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಕಾಮಗಾರಿ ಬೇಡಿಕೆ ಅರ್ಜಿಯನ್ನು ಅ.15ವರೆಗೆ ಗ್ರಾಪಂ ಬೇಡಿಕೆ ಪೆಟ್ಟಿಗೆಯ ಮೂಲಕ ಸಲ್ಲಿಸಬಹುದು.

    ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸುವ ಜಾಗೃತಿ ವಾಹನದಲ್ಲಿಯೂ ಕಾಮಗಾರಿ ಬೇಡಿಕೆ ಅರ್ಜಿ ಸ್ವೀಕರಿಸಲಾಗುವುದು. ಇದುವರೆಗೂ ಕಾಮಗಾರಿ ಬೇಡಿಕೆ ಅರ್ಜಿಗಳನ್ನು ಸಲ್ಲಿಸದ ಗ್ರಾಮಸ್ಥರು ಕೂಡಲೇ ಹತ್ತಿರದ ಗ್ರಾಪಂಗೆ ಹೋಗಿ ಅರ್ಜಿ ಸಲ್ಲಿಸಬಹುದು.
    ರೈತರ ಕ್ರಿಯಾಯೋಜನೆ ಕುರಿತಂತೆ ಗ್ರಾಮಗಳಲ್ಲಿ ಗ್ರಾಪಂ ವತಿಯಿಂದ ವ್ಯಾಪಕ ಪ್ರಚಾರ ವಾಡಿಸಲಾಗುತ್ತಿದೆ. ರೈತರು ಸ್ವಂತ ಜಮೀನುಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ವಿವರಗಳುಳ್ಳ ವಾಹಿತಿ ಪ್ರದರ್ಶನಕ್ಕಿಡಲಾಗಿದೆ.

    ಜಾಬ್‌ಕಾರ್ಡ್ ಹೊಂದಿರುವ ಪ್ರತಿ ಕುಟುಂಬವು ನರೇಗಾ ಯೋಜನೆಯಡಿ ಗರಿಷ್ಠ 2.50 ಲಕ್ಷ ರೂಪಾಯಿಗಳ ಕಾಮಗಾರಿ ಕೈಗೊಳ್ಳಲು ಅವಕಾಶವಿರುತ್ತದೆ, ರೈತರ ಕ್ರಿಯಾ ಯೋಜನೆಗೆ ತುಮಕೂರು ಜಿಲ್ಲೆಯಿಂದ ಕಳೆದ ಒಂದು ವಾರದಿಂದ 200ಕ್ಕೂ ಹೆಚ್ಚು ಕಾಮಗಾರಿ ಬೇಡಿಕೆ ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ.

    ಅರ್ಜಿ ಸಲ್ಲಿಸುವುದು ಹೇಗೆ?: ನರೇಗಾ ಯೋಜನೆಯಲ್ಲಿ ಉದ್ಯೋಗ ಬಯಸುವ ರೈತರು https:// www.mgnregakarnataka.com/yojane ವೆಬ್‌ಸೈಟ್ ಮೂಲಕ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದು. ಗ್ರಾಮಸ್ಥರು ಅಥವಾ ರೈತರು ವೆಬ್‌ಸೈಟ್‌ನಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಜಾಬ್‌ಕಾರ್ಡ್ ಸಂಖ್ಯೆ, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ, ಗ್ರಾಮ, ಫಲಾನುಭವಿ ವರ್ಗ, ತೋಟಗಾರಿಕೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆ, ಜಾನುವಾರು ಶೆಡ್, ಇತರ ಕಾಮಗಾರಿಗಳು, ಕಂದಾಯ ಗ್ರಾಮದ ಹೆಸರು, ಸರ್ವೇ ನಂಬರ್ ಆಯ್ಕೆ ವಾಡಿ ನಿಖರವಾದ ವಾಹಿತಿ ತುಂಬಿ ಅರ್ಜಿ ಸಲ್ಲಿಸುವ ಬಟನ್ ಒತ್ತುವ ಮೂಲಕ ರೈತರು ವೈಯಕ್ತಿಕ ಕಾಮಗಾರಿಯ ಬೇಡಿಕೆ ಅರ್ಜಿಯನ್ನು ಇದ್ದಲ್ಲಿಯೇ ಸಲ್ಲಿಸಬಹುದು.

    ತುಮಕೂರು ಜಿಲ್ಲೆಯ 10 ತಾಲೂಕುಗಳ 330 ಗ್ರಾಪಂ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಕುರಿತಂತೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಹಮ್ಮಿಕೊಂಡಿರುವ ರೈತರ ಕ್ರಿಯಾ ಯೋಜನೆಗೆ ಗ್ರಾಮಸ್ಥರು ಹಾಗೂ ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
    ಶುಭಾಕಲ್ಯಾಣ್ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts