More

    ಸಾಹಿತ್ಯ, ಸಂಸ್ಕೃತಿಗೆ ಜಿಲ್ಲೆ ಕೊಡುಗೆ ಅಪಾರ

    ಗದಗ: ನಾಡಿನ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮೆ್ಮೕಳನ ಉದ್ಘಾಟಿಸಿ ಅವರು ಮಾತನಾಡಿದರು.

    ಜಿಲ್ಲೆ ಸಾಹಿತ್ಯಿಕವಾಗಿ ಕಂಗೊಳಿಸುತ್ತಿದೆ. ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕವಿ, ಸಾಹಿತಿಗಳ ಕೊಡುಗೆ ಮರೆಯಲಾಗದು. ಪಂ. ಪುಟ್ಟರಾಜ ಗವಾಯಿಗಳು, ಭಾರತರತ್ನ ಭೀಮಸೇನ್ ಜೋಶಿ, ಹುಯಿಲಗೋಳ ನಾರಾಯಣರಾವ್, ಜಿಲ್ಲೆಯ ಎಲ್ಲ

    ಕವಿ, ಸಾಹಿತಿಗಳು ಅಭಿನಂದನಾರ್ಹರು ಎಂದು ಹೇಳಿದರು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಸಾಹಿತ್ಯ ಭವನ ನಿಮಾಣಕ್ಕೆ ಒಟ್ಟಾರೆ 3.28 ಕೋಟಿ ರೂ. ಅನುದಾನ ನೀಡಿದ್ದರಿಂದ ಇಂತಹ ಭವನ ನಿರ್ಮಾಣ ವಾಗಲು ಸಾಧ್ಯವಾಯಿತು ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಜಿಲ್ಲೆಯು ಸಾಹಿತ್ಯಿಕ ಸಾಂಸ್ಕೃತಿಕ ನೆಲೆವೀಡಾಗಿದ್ದು, ಜಿಲ್ಲೆಯ ಲಕ್ಕುಂಡಿ ಸೇರಿ ಹಲವಾರು ಗ್ರಾಮಗಳಲ್ಲಿರುವ ಪುರಾತನ ದೇವಸ್ಥಾನಗಳ ಪುನಶ್ಚೇತನ ಕಾರ್ಯವಾಗಬೇಕಿದೆ. ಗದಗ- ಬೆಟಗೇರಿ ಅವಳಿ ನಗರದ ಉದ್ಯಾನಗಳಲ್ಲಿ ಈ ಹಿಂದೆ ನಡೆಯುತ್ತಿದ್ದ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಗಳು ಪುನರಾರಂಭವಾಗಬೇಕಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಆಂಗ್ಲ ಭಾಷೆ ಆರ್ಭಟದಿಂದ ಕನ್ನಡ ಭಾಷೆಯ ಅವನತಿ ಶುರುವಾಗಿರುವುದು ಕಳವಳದ ಸಂಗತಿ ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮೆ್ಮೕಳನಾಧ್ಯಕ್ಷರ ಮೆರವಣಿಗೆಯು ನಗರದ ಕಿತ್ತೂರ ಚನ್ನಮ್ಮ ವೃತ್ತದಿಂದ ಆರಂಭವಾಗಿ ಮಹಾವೀರ ವೃತ್ತ, ಟಿಪ್ಪು ಸುಲ್ತಾನ್ ವೃತ್ತದ ಮಾರ್ಗವಾಗಿ ಸಾಹಿತ್ಯ ಭವನ ತಲುಪಿತು. ಕಾರ್ಯಕ್ರಮದಲ್ಲಿ ಸಮೆ್ಮೕಳನಾಧ್ಯಕ್ಷ ರವೀಂದ್ರ ಕೊಪ್ಪರ, ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ತಾ.ಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಉಪಾಧ್ಯಕ್ಷೆ ಮಮತಾಜಬಿ ನದಾಫ್, ಜಿಪಂ ಸದಸ್ಯ ಪೂಜಾರ, ಜಿಲ್ಲಾಧಿಕಾರಿ ಸುಂದರೇಶ ಬಾಬು, ಎಸ್​ಪಿ ಯತೀಶ ಎನ್., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ, ವಿ.ಎಂ. ಹಿರೇಮಠ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಗ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಎಂ.ಡಿ. ಗೋಗೇರಿ ಮತ್ತಿತರರು ಇದ್ದರು.

    ರಾಜ್ಯದಲ್ಲಿ ಅನ್ಯಭಾಷೆಗಳ ಹಾವಳಿ ಅಧಿಕವಾಗಿದೆ. ನಾವೆಲ್ಲರೂ ಮಾತೃಭಾಷೆಯಾದ ಕನ್ನಡ ಕಲಿತು ಅಭಿಮಾನದಿಂದ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸೋಣ. ಅದರಲ್ಲೂ ಉತ್ತರ ಕರ್ನಾಟಕದ ಕನ್ನಡ ಭಾಷೆಗೆ ಅದರದ್ದೇ ಆದ ಗತ್ತು, ಗಮ್ಮತ್ತು ಇದೆ. ಆ ಸೊಗಡನ್ನು ಉಳಿಸಿ, ಜೀವನದ್ದುದ್ದಕ್ಕೂ ಬಳಸೋಣ.

    | ಸಿ.ಸಿ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts