More

    ಸಿಎಂ ಭೇಟಿ ಮಾಡಿದ ನಿಯೋಗ

    ಮಹಾಲಿಂಗಪುರ: ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದರೆ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವುದಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಾಗ್ದಾನ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆ ಆಧರಿಸಿ ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಸಂಜೆ ಬೆಂಗಳೂರಿನಲ್ಲಿ ಶುಕ್ರವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮನವಿ ಸಲ್ಲಿಸಿದರು.

    ಅಬಕಾರಿ- ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ 464 ದಿವಸಗಳ ನಿರಂತರ ತಾಲೂಕಿಗಾಗಿ ಹೋರಾಟ ನಡೆಸಿರುವ ಸ್ಥಳೀಯರ ಅಶೋತ್ತರ ನೆರೆವೇರಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿತು.

    ಇದನ್ನೂ ಓದಿ: ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಮನವಿ

    ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕೆಲವು ದಿನಗಳ ಕಾಲಾವಕಾಶ ಕೊಡಿ, ತಾಂತ್ರಿಕ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು ತಿಳಿಸುವುದಾಗಿ ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಸದಸ್ಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

    ನಿಯೋಗದಲ್ಲಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಪ್ರಧಾನ ಕಾರ್ಯದರ್ಶಿ ಧರೆಪ್ಪ ಸಾಂಗ್ಲಿಕರ, ಪ್ರಮುಖರಾದ ಯಲ್ಲನಗೌಡ ಪಾಟೀಲ, ಸಿದ್ದು ಕೊಣ್ಣೂರ, ರಂಗಣ್ಣಗೌಡ ಪಾಟೀಲ, ಮಹಾದೇವ ಮಾರಾಪೂರ, ನಿಂಗಪ್ಪ ಬಾಳಿಕಾಯಿ, ಶಿವಲಿಂಗ ಟಿರಕಿ, ಸಿದ್ದು ಶಿರೋಳ, ವೀರೇಶ ಆಸಂಗಿ, ಎಸ್.ಎಂ.ಪಾಟೀಲ, ಬಸವರಾಜ ಕೊಕಟನೂರ, ಚೇತನ ಕಲಾಲ, ಆನಂದ ಚಮಕೇರಿ, ಡಾ.ಕುಳ್ಳೊಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts