ತಾಯಿ ಜತೆಯಲ್ಲೇ ಹೆಣ್ಣು ಮಕ್ಕಳಿಬ್ಬರ ಸಾವು, ಆ ಕೆರೆ ಬಳಿ ಏನಾಯ್ತು ಎಂಬುದೇ ನಿಗೂಢ!

death
Published on

ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಬೀರನಹಳ್ಳಿ ಕೆರೆಯಲ್ಲಿ ಇಂದು(ಭಾನುವಾರ) ಬೆಳಗ್ಗೆ ಇದೇ ಗ್ರಾಮದ ಮಹಿಳೆ ಮತ್ತು ಇಬ್ಬರು ಪುತ್ರಿಯರ ಶವ ಪತ್ತೆಯಾಗಿದೆ.

ಬೀರನಹಳ್ಳಿಯ ನಿವಾಸಿ ನರಸಿಂಹಯ್ಯ ಅವರ ಪತ್ನಿ ಗೀತಾ(38), ಮಕ್ಕಳಾದ ಸವಿತಾ(19) ಮತ್ತು ಸೌಮ್ಯ (14) ಮೃತರು. ಪತ್ನಿ ಮತ್ತು ಮಕ್ಕಳ ಶವಗಳ ಮುಂದೆ ಕುಟುಂಬಸ್ಥರು ಮನಕಲುಕುವಂತಿತ್ತು. ಇದನ್ನೂ ಓದಿರಿ ಅಮಲು ಪದಾರ್ಥ‌ ಕೊಟ್ಟು ಲೈಂಗಿಕವಾಗಿ ಬಳಸಿಕೊಂಡ, ಗರ್ಭದಲ್ಲೇ ಭ್ರೂಣವನ್ನೂ ಕೊಲ್ಲಿಸಿದ! ಮುಂದೇನಾಯ್ತು?

ಬಟ್ಟೆ ತೊಳೆಯಲು ಮಕ್ಕಳೊಂದಿಗೆ ಕೆರೆಗೆ ಹೋಗಿದ್ದ ಗೀತಾ ಕಾಲು ಜಾರಿ ನೀರಿಗೆ ಬಿದ್ದಿದ್ದು, ತಾಯಿಯನ್ನು ರಕ್ಷಿಸಲು ಹೋದ ಇಬ್ಬರು ಮಕ್ಕಳೂ ಜಲಸಮಾಧಿ ಆಗಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಕರೊನಾ ಲಾಕ್​ಡೌನ್​ ವೇಳೆ ನರಸಿಂಹಯ್ಯ ಸಂಕಷ್ಟಕ್ಕೆ ಸಿಲುಕಿತ್ತು. ಸಾಲ ತೀರಿಸಲು ಆಗದೆ ತುಂಬಾ ಸಮಸ್ಯೆ ಉಂಟಾಗಿತ್ತು. ಈ ಸಂಬಂಧ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಬೇಸತ್ತ ಗೀತಾ ತನ್ನ ಇಬ್ಬರೂ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net