More

    ಮೋದಿ ಪ್ರಧಾನಿ ಆದ ಬಳಿಕ ದೇಶದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೆ

    ಚಿತ್ರದುರ್ಗ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಶಾಸಕ ಜಿ. ಎಚ್.ತಿಪ್ಪಾರೆಡ್ಡಿ ಹೇಳಿದರು.
    ಜಿಲ್ಲಾ ಕಸಾಪ ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ಲಿಂಗಪ್ಪ ಅವರ ನರೇಂದ್ರ ಮೋದಿ ಅವರ ಬದುಕಿನ ಮಾಯ ಯಾನ ಹಾಗೂ ಅರಿವಿನ ಬುತ್ತಿ ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ಧಾಂತ ಗಳ ಬಗ್ಗೆ ಮಾತನಾಡುವ ಕೆಲವರು ನಿಜ ಸಂಗತಿಗಳನ್ನು ತಿರುಚುವ ಕೆಲಸ ಮಾಡುತ್ತಾರೆ. ಆದರೆ ವಾಸ್ತವ ನೆಲೆಗಟ್ಟಿನಲ್ಲಿ ಮಾತನಾಡುವ ಲಿಂ ಗಪ್ಪ ಅವರು ಉತ್ತಮ ಕೃತಿಗಳನ್ನು ರಚಿಸಿದ್ದಾರೆ.

    ಆರ್‌ಎಸ್‌ಎಸ್‌ನ ಮೋದಿ ಅವರು ಶಾಸಕರಾಗದೆ ಗುಜರಾತ್ ಮುಖ್ಯಮಂತ್ರಿ,ಲೋಕಸಭಾ ಸದಸ್ಯರಾಗದೆ ಪ್ರಧಾನಿ ಆದವರು. ಸ್ವಾ ತಂತ್ರ್ಯಕ್ಕಾಗಿ ಕಟ್ಟಿದ್ದ ಕಾಂಗ್ರೆಸ್ಸನ್ನು ನಂತರದಲ್ಲಿ ವಿಸರ್ಜಿಸುವಂತೆ ಹಿರಿಯರು ಹೇಳಿದ್ದರು. ಆದರೆ ನೆಹರು ಸ್ವಾರ್ಥಕ್ಕಾಗಿ ರಾಜಕೀಯವನ್ನಾಗಿ ಕಾಂಗ್ರೆಸ್ಸನ್ನು ಬಳಸಿಕೊಂಡರೆಂದು ಟೀಕಿಸಿದ ಶಾಸಕರು,ಮೋದಿ ಅವರ ಹಲವು ದಿಟ್ಟ ನಿರ್ಧಾರಗಳನ್ನು ವಿವರಿಸಿದರು. ಮೋದಿ ಒಬ್ಬ ಅಪ್ರತಿಮ ದೇಶ ಭಕ್ತರೆಂದು ಹೊರದೇಶದವರೂ ಹೊಗಳುತ್ತಿದ್ದಾರೆ ಎಂದರು.

    ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಬಸವರಾಜ್ ಅರಿವಿನ ಬುತ್ತಿ ಪುಸ್ತಕ ಕುರಿತು ಮಾತನಾಡಿ,ಲಿಂಗಪ್ಪ 25 ಕೃತಿಗಳನ್ನು ಬರೆದಿದ್ದಾರೆ. ಸಾ ಮಾಜಿಕ,ಶೈಕ್ಷಣಿಕ,ಆರ್ಥಿಕ,ಧಾರ್ಮಿಕ ವಿಷಯಗಳೊಂದಿಗೆ ರಾಜಕೀಯ ವಿಚಾರಗಳು ಇವರ ಬರಹಗಳಲ್ಲಿವೆ. 120 ಪುಟಗಳ ಅರ್ಥ ಪೂರ್ಣ ಕೃತಿ ಇದಾಗಿದೆ ಎಂದರು.

    ಜಾನಪದ ವಿದ್ವಾಂಸ ಡಾ.ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ,ಪ್ರೊ.ಟಿ.ವಿ.ಸುರೇಶ್‌ಗುಪ್ತ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಲೇಶಯ್ಯ,ಬಾ ಪೂಜಿ ವಿದ್ಯಾಸಂಸ್ಥೆ ಕಾರ‌್ಯದರ್ಶಿ ಕೆ.ಎಂ.ವೀರೇಶ್,ನಿವೃತ್ತ ಉಪನ್ಯಾಸಕ ಪರಮೇಶ್ವರಪ್ಪ ವೇದಿಕೆಯಲ್ಲಿದ್ದರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts