More

    ಸೊಲಬಕ್ಕನವರಿಂದ ದೇಶವೇ ಮೆಚ್ಚುವ ಕೆಲಸ

    ಶಿಗ್ಗಾಂವಿ: ಹುಬ್ಬಳ್ಳಿ: ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆಗೈದಿರುವ ತಾಲೂಕು ಹುಲಸೋಗಿ ಗ್ರಾಮದ ದಿ. ಡಾ. ಟಿ.ಬಿ. ಸೊಲಬಕ್ಕನವರ ಅವರಿಗೆ ಮರಣೋತ್ತರವಾಗಿ ಪುಣೆಯ ಸೂರ್ಯದತ್ತ ಗ್ರೂಪ್ ಆಫ್ ಇನ್​ಸ್ಟಿಟ್ಯೂಟ್​ನಿಂದ ರಾಷ್ಟ್ರ ಪ್ರಶಸ್ತಿಯನ್ನು ಭಾನುವಾರ ಪುಣೆಯಲ್ಲಿ ಪ್ರದಾನ ಮಾಡಲಾಯಿತು.

    ಪುಣೆಯಲ್ಲಿ ಭಾನುವಾರ ಆಯೋಜಿಸಿದ್ದ ಸೂರ್ಯದತ್ತ ಗ್ರೂಪ್ ಆಫ್ ಇನ್​ಸ್ಟಿಟ್ಯೂಟ್​ನ 23ನೇ ಸಂಸ್ಥಾಪನೆ ದಿನ ಹಾಗೂ 19ನೇ ವರ್ಷದ ರಾಷ್ಟ್ರೀಯ ಪ್ರಶಸ್ತಿಗಳ ವಿತರಣೆ ಸಮಾರಂಭದಲ್ಲಿ ದಿ. ಡಾ.ಟಿ.ಬಿ. ಸೊಲಬಕ್ಕನವರ ಪರವಾಗಿ ಅವರ ಮಗ ರಾಜ್​ಹರ್ಷ ಸೊಲಬಕ್ಕನವರ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತಸಿಂಗ್ ಕೊಶ್ಯಾರಿಯಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

    ‘ದೇಶದಲ್ಲಿ ಪ್ರತಿಭಾವಂತರು, ಸಾಧಕರಿಗೆ ಕೊರತೆ ಇಲ್ಲ. ಅವರನ್ನು ಗುರುತಿಸಿ, ಗೌರವಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಿದೆ. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ದೇಶವೇ ಮೆಚ್ಚುವಂಥ ಕೆಲಸ ಮಾಡಿದ ದಿ. ಟಿ.ಬಿ. ಸೊಲಬಕ್ಕನವರ ಅವರ ಪರಿಚಯವನ್ನು ಯುವ ಪೀಳಿಗೆಗೆ ಮಾಡಿಸಬೇಕು. ಕೊಲ್ಲಾಪುರದ ಕನೇರಿಮಠ ಹಾಗೂ ಪುಣೆಯ ಸೋಮೇಶ್ವರವಾಡಿ ಪಾಶಣದಲ್ಲಿ (ಗ್ರಾಮ ಸಂಸ್ಕೃತಿ) ಟಿ.ಬಿ. ಸೊಲಬಕ್ಕನವರ ಮತ್ತು ತಂಡ ನಿರ್ವಿುಸಿರುವ ಉದ್ಯಾನಗಳು ಅವರ ಕಲಾ ಶ್ರೀಮಂತಿಕೆಯ ಪ್ರತ್ಯಕ್ಷ ಪರಿಚಯ ನೀಡುತ್ತದೆ. ಇವು ಮಹಾರಾಷ್ಟ್ರದ ಕಲೆ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಹೊಸ ಮೆರುಗು ನೀಡಿವೆ’ ಎಂದು ಕೊಶ್ಯಾರಿಯಾ ಹೇಳಿದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜ್​ಹರ್ಷ ಮಾತನಾಡಿದರು. ವಿವಿಧ ರಾಜ್ಯಗಳ 16 ಸಾಧಕರಿಗೆ ರಾಜ್ಯಪಾಲರು ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಿದರು. ನಳಂದ ವಿವಿಯ ಕುಲಪತಿ ವಿಜಯ ಭಾಟ್ಕರ್, ಅಹಿಂಸ ವಿಶ್ವ ಭಾರತಿ ಸ್ಥಾಪಕ ಅಧ್ಯಕ್ಷ ಡಾ. ಲೋಕೇಶ ಮುನಿ, ಭಜನ ಮಾಂತ್ರಿಕ ಅನೂಪ ಜಲೋಟ, ಬಾಲಿವುಡ್ ನಟರಾದ ರಾಜಾ ಮುರಾದ್, ರಾಜ್ಕಿರಣ್, ಅಜಿಂಕ್ಯ ದೇವ, ಸೂರ್ಯದತ್ತ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಸಂಜಯ್ ಬಿ. ಕೊರ್ಡಿಯಾ, ಉಪಾಧ್ಯಕ್ಷೆ ಸುಷ್ಮಾ ಎಸ್. ಕೊರ್ಡಿಯಾ ಹಾಗೂ ಕಾರ್ಯನಿರ್ವಾಹಕ ಅಭಿವೃದ್ಧಿ ಅಧಿಕಾರಿ ಸಿದ್ದಾಂತ ಎಸ್. ಕೊರ್ಡಿಯಾ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts