More

    ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಮರುದಿನವೇ ಮಹಿಳೆಗೆ ಕರೊನಾ ಪಾಸಿಟಿವ್..!

    ಆನೇಕಲ್: ಮನೆಯಲ್ಲೇ ಇದ್ದ 46 ವರ್ಷದ ಮಹಿಳೆಗೂ ಕರೊನಾ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದ 7 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

    ಚಿಂತಲ‌ ಮಡಿವಾಳದ ನಿವಾಸಿಯಾದ ಈ ಮಹಿಳೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಎರಡು ದಿನದ ಹಿಂದಷ್ಟೇ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಮರುದಿನ ಬಂದ ವರದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಇದನ್ನೂ ಓದಿರಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಇತ್ತೀಚಿಗೆ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದರು. ಇದಕ್ಕೂ ಮುನ್ನ ಎರಡು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಬುಧವಾರ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ಕೂಡ ಆಗಿದೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕರೊನಾ ಟೆಸ್ಟ್​ನಲ್ಲಿ ಮಹಿಳೆಗೆ ಪಾಸಿಟಿವ್​ ಬಂದಿದ್ದು, ಗುರುವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿರಿ ಆಗಸ್ಟ್ ಅಂತ್ಯಕ್ಕೆ ಹೆಚ್ಚಲಿದೆ ಕರೊನಾ ಸೋಂಕಿತರ ಸಂಖ್ಯೆ; ಸಚಿವ ಡಾ.ಸುಧಾಕರ್

    ಮಹಿಳೆಯ ಪತಿ, ಮಗ ಸೇರಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 7 ಜನರನ್ನು ಸದ್ಯ ಕ್ವಾರಂಟೈನ್​ ಮಾಡಲಾಗಿದೆ. ಮಹಿಳೆಯ ಪತಿ ಮಾತ್ರ ವ್ಯಾಪಾರಕ್ಕಾಗಿ ಹೊರ ಹೋಗಿ ಬಂದಿದ್ದಾರೆ. ಗುರುವಾರ ರಾತ್ರಿ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದಾಗ ಪತಿಗೂ ಗಂಟಲು ನೋವು ಎಂದು ಹೇಳಲಾಗಿತ್ತು. ಪತಿಯ ಸ್ವಾಬ್ ಟೆಸ್ಟ್ ಮಾಡಲಾಗಿದ್ದು ವರದಿ ಬರಬೇಕಿದೆ.

    ಮಹಿಳೆಯ ಮನೆ ಬಳಿ ತಹಸೀಲ್ದಾರ್ ಮಹಾದೇವಯ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಒಂದೇ ಮನೆಯಲ್ಲಿ ಈ ಮಹಿಳೆ ಬಾಡಿಗೆಗೆ ಇದ್ದಾರೆ. ಮಹಿಳೆ ವಾಸವಿದ್ದ ಅಕ್ಕಪಕ್ಕದ ಮನೆಗಳ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.

    ಇದನ್ನೂ ಓದಿರಿ ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts