More

    ಆಗಸ್ಟ್ ಅಂತ್ಯಕ್ಕೆ ಹೆಚ್ಚಲಿದೆ ಕರೊನಾ ಸೋಂಕಿತರ ಸಂಖ್ಯೆ; ಸಚಿವ ಡಾ.ಸುಧಾಕರ್

    ಬಳ್ಳಾರಿ: ರಾಜ್ಯದಲ್ಲಿ ಇನ್ ಫ್ಲ್ಯೂಯೆಂಜಾ ಮಾದರಿಯ ರೋಗದಿಂದ ಬಳಲುತ್ತಿರುವವರಲ್ಲೇ ಕರೊನಾ ಸೋಂಕು ತಗಲುತ್ತಿದೆ. ಹಾಗಾಗಿ ಇನ್ ಫ್ಲ್ಯೂಯೆಂಜಾ ಮಾದರಿಯ ಲಕ್ಷಣಗಳು ಇರುವವರನ್ನು ಪ್ರತ್ಯೇಕಿಸಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

    ಇದನ್ನೂ ಓದಿರಿ ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

    ನಗರದ ವಿಮ್ಸ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ ಫ್ಲ್ಯೂಯೆಂಜಾ ಮಾದರಿಯ ಸೋಂಕಿನಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರನ್ನು ಮೊದಲಿಗೆ ಪತ್ತೆಹಚ್ಚಿ ಪರೀಕ್ಷೆ ನಡೆಸಲಾಗುವುದು. ಮಳೆಗಾಲ‌ ಬಂದಿರುವುದರಿಂದ ಹವಾಮಾನ ಬದಲಾವಣೆಯಾಗಿ ಕೆಮ್ಮು, ನೆಗಡಿ, ಜ್ವರ ಬಂದವರು ಫೀವರ್ ಕ್ಲಿನಿಕ್​ಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇದನ್ನೂ ಓದಿರಿ ಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!

    ರಾಜ್ಯದಲ್ಲಿ 3 ಸಾವಿರಕ್ಕೂ‌ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಶೇ.97 ಜನರಿಗೆ ರೋಗ ಲಕ್ಷಣಗಳಿಲ್ಲ. ಆಗಸ್ಟ್ ಕೊನೆಯ ವಾರಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಲಿವೆ‌ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅದಕ್ಕೆ ತಕ್ಕ‌ ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಚಿವ ಡಾ. ಸುಧಾಕರ್​ ತಿಳಿಸಿದರು.

    ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್, ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ್ ಉಪಸ್ಥಿತರಿದ್ದರು.

    ಇದನ್ನೂ ಓದಿರಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts