More

    ಗ್ರಾಮಸ್ಥರ ಸಹಕಾರವೇ ಪ್ರೇರಕ ಶಕ್ತಿ

    ಗೊಳಸಂಗಿ: ಗ್ರಾಮೀಣ ಕ್ರೀಡೆಗಳು ಯಶಸ್ವಿಯಾಗಲು ಗ್ರಾಮಸ್ಥರ ಸಹಕಾರವೇ ಕಾರಣ ಎಂದು ಪಿಡಿಒ ಎಂ.ಬಿ.ಹಾವರಗಿ ಹೇಳಿದರು.

    ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ತಡರಾತ್ರಿ ನಡೆದ ಗ್ರಾಮೀಣ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಳಿಗ್ಗೆ ನಡೆದ ಕ್ರೀಡಾಕೂಟಕ್ಕೆ ಗ್ರಾಪಂ ಅಧ್ಯಕ್ಷೆ ಸುನಿತಾ ಪವಾರ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ರಾಜೇಸಾಬ ಹತ್ತರಕಿಹಾಳ, ಬಂದೇನವಾಜ ಡೋಲಚಿ, ಅಮೃತ ಯಾದವ, ಗಂಗಾರಾಮ ಪವಾರ, ಮಹಿಬೂಬ ಹತ್ತರಕಿಹಾಳ, ಸಂಗಪ್ಪ ಕೋಲಾರ, ಹಜರೇಸಾಬ ನಾಗರಾಳ, ಅಶೋಕ ಪರಮಗೊಂಡ, ಮಹಿಬೂಬ ಹತ್ತರಕಿಹಾಳ, ಸಂಗಯ್ಯಸ್ವಾಮಿ ತಳಸದಾರ, ಅಮರೇಶಗೌಡ ಪಾಟೀಲ, ಅಮೃತ ಯಾದವ ಮತ್ತಿತರರು ಇದ್ದರು.

    ಖೋಖೊ, ಕಬಡ್ಡಿ, ಕುಸ್ತಿ, ಬಂಡಿರೇಸ್, ಕೇರಂ, ಚದುರಂಗ ಸ್ಪರ್ಧೆಗೆ ಈಶ್ವರ ಜಾಧವ, ದಸ್ತಗೀರಸಾಬ ಸರ್ಕೂಲಿ, ಶ್ರೀಶೈಲ ಮಳ್ಳಿ, ಭಗತ್‌ಸಿಂಗ್ ಮತ್ತು ಖೇಲ್-ಎ ಟೀಂ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಅವಿರೋಧ ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts