More

    ವಿವಾದವೆಬ್ಬಿಸಿದ ನಾಗಬನ ಕಾಂಪೌಂಡ್!

    ಭಟ್ಕಳ: ಪಟ್ಟಣದ ರಾಜಾಂಗಣದ ಬಳಿ ಇರುವ ನಾಗಬನದ ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಉಭಯ ಕೋಮಿನ ನಡುವಿನ ವಿವಾದ ತಾರಕಕ್ಕೇ ರಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದೆ. ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ, ತಹಸೀಲ್ದಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

    ಏ. 13ರ ಯುಗಾದಿಯಂದು ಶಾಸಕ ಸುನೀಲ ನಾಯ್ಕ ನಾಗಬನದ ಕಾಂಪೌಂಡ್ ನಿರ್ವಣಕ್ಕಾಗಿ ಭೂಮಿಪೂಜೆ ಮಾಡಿದ್ದರು. ಅದರಂತೆ ಕಾರ್ವಿುಕರು ಶುಕ್ರವಾರ ಗೋಡೆ ನಿರ್ವಿುಸಲು ಪಾಯ ತೆಗೆಯುವಾಗ ಮುಸ್ಲಿಂ ಸಂಘಟನೆ ಸದಸ್ಯರು ಗುಂಪು ಕಟ್ಟಿಕೊಂಡು ಬಂದು ತಡೆಯೊಡ್ಡಿದ್ದಾರೆ. ನಿಮಗೆ ಇಲ್ಲಿ ಗೋಡೆ ಕಟ್ಟಲು ಹೇಳಿದವರು ಯಾರು? ಯಾರಿಂದ ಅನುಮತಿ ಪಡೆದಿದ್ದೀರಿ? ಮೊದಲು ದಾಖಲೆ ತೋರಿಸಿ, ಪುರಸಭೆಯ ಪರವಾನಗಿ ಪಡೆಯದೆ ಇದನ್ನು ಕಟ್ಟಲು ನಮ್ಮ ವಿರೋಧವಿದೆ ಎಂದು ಕಾಮಗಾರಿ ನಡೆಸಲು ಅಡ್ಡಿಪಡಿಸಿದ್ದಾರೆ. ಮಾತಿನ ಚಕಮಕಿ ನಡೆದು ಅಲ್ಲಿ ಹಿಂದು ಸಂಘಟನೆಯ ಸದಸ್ಯರು ಜಮಾಯಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯಶಸ್ವಿಯಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಶಾಂತಿ ಸೌಹಾರ್ದತೆ ಕಾಪಾಡಲು ಸ್ಥಳಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಪೊಲೀಸ್ ಪಡೆ ನಿಯೋಜಿಸಲಾಗಿದೆ.

    ಸ್ಥಳಕ್ಕೆ ದೌಡಾಯಿಸಿದ ಶಾಸಕ: ವಿಷಯ ಅರಿವಿಗೆ ಬರುತ್ತಿರುವಂತೆ ಶಾಸಕ ಸುನೀಲ ನಾಯ್ಕ ಸ್ಥಳಕ್ಕೆ ಆಗಮಿಸಿ, ಇದು ಸರ್ಕಾರಿ ಜಾಗವಾಗಿದ್ದು

    ಆರ್​ಟಿಸಿಯಲ್ಲಿ 3 ಗುಂಟೆ ಹನ್ನೆರಡು ಆಣೆ ಜಾಗವಿದೆ. ಇಲ್ಲಿನ ಸ್ಥಳವನ್ನು ಇನ್ನೊಂದು ಕೋಮಿನ ಜನರು ಅತಿಕ್ರಮಣ ಮಾಡಿಕೊಂಡಿದ್ದಾರೆ. ನಾಗಬನವಿದ್ದ ಸ್ಥಳ ಅಭಿವೃದ್ಧಿಪಡಿಸಲು ಸರ್ಕಾರ 7.5 ಲಕ್ಷ ರೂಪಾಯಿ ಮಂಜೂರಿ ಮಾಡಿದೆ. ಅದರಲ್ಲಿನ 2 ಲಕ್ಷ ರೂಪಾಯಿಯನ್ನು ಜಿಲ್ಲಾಧಿಕಾರಿ ಈಗಾಗಲೆ ಸಮಿತಿಯ ಖಾತೆಗೆ ಜಮಾ ಮಾಡಿದ್ದಾರೆ. ನಾಗಬನ ಅಭಿವೃದ್ಧಿಪಡಿಸಲು ಅಡ್ಡಿಪಡಿಸುವವರು ಯಾರು? ಇಂತಹ ವಿರೋಧಕ್ಕೆ ನಾವು ಅಂಜುವುದಿಲ್ಲ. ಪೊಲೀಸರೆ ನಮಗೆ ಭದ್ರತೆ ಕೊಡಿ, ನಾವು ಕಟ್ಟುತ್ತೇವೆ ಎಂದರು. ಇದಕ್ಕುತ್ತರಿಸಿದ ಡಿವೈಎಸ್ಪಿ ಬೆಳ್ಳಿಯಪ್ಪ ಈ ಕುರಿತು ಇನ್ನೊಂದು ಕೋಮಿನ ಮುಖಂಡರು ಎಸಿ ಕಚೇರಿಗೆ ತೆರಳಿದ್ದಾರೆ. ನೀವು ಕೂಡ ಅಲ್ಲಿಗೆ ಹೋಗಿ ಅಲ್ಲಿಂದಲೆ ಪ್ರೊಸಿಡಿಂಗ್ ಮಾಡಿಸಿ ಕೊಡಿ. ಕಾನೂನಿನ ಪ್ರಕಾರ ನಾವು ಭದ್ರತೆ ನೀಡುತ್ತೇವೆ ಎಂದರು.

    ಎಸಿ ಕಚೇರಿಗೆ ವಿವಾದ ಶಿಫ್ಟ್್ಟ..!

    ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ತಂಝೀಂ ಅಧ್ಯಕ್ಷ ಎಸ್.ಎಂ. ಫರ್ವೆಜ್, ಕಾರ್ಯದರ್ಶಿ ಅಬ್ದುಲ್ ರಕೀಬ್, ‘ನಾಗಬನದ ಜಾಗ ಮೊದಲಿನಿಂದಲೂ ವಿವಾದದಲ್ಲಿದೆ. ಇಲ್ಲಿ ನೀವು ಹೊಸದಾಗಿ ಕಾಂಪೌಂಡ್ ನಿರ್ವಿುಸಲು ಅವಕಾಶ ನೀಡುವುದಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುನೀಲ ನಾಯ್ಕ, ‘ಮಸೀದಿ ಹಾಗೂ ಅತಿಕ್ರಮಣ ಜಾಗಗಳಲ್ಲಿ ಮನೆ ನಿರ್ವಣಕ್ಕೆ ನಾವು ವಿರೋಧಿಸಿಲ್ಲ. ದೇವಸ್ಥಾನದ ಜೀಣೋದ್ಧಾರ ಕಾರ್ಯಗಳಿಗೆ ಏಕೆ ವಿರೋಧ ವ್ಯಕ್ತಪಡಿಸುತ್ತೀರಿ’ ಎಂದು ಪ್ರಶ್ನಿಸಿದರು. ತಹಸೀಲ್ದಾರ್ ರವಿಚಂದ್ರ ಮಾತನಾಡಿ, ‘ಸೂಸಗಡಿ ಸರ್ವೆ ನಂ. 524 ಬ ರಲ್ಲಿ 3.4 ಗುಂಟೆ ಜಾಗವನ್ನು ನಾಗಬನ ನಿರ್ವಣಕ್ಕಾಗಿ ಇಡಲಾಗಿದೆ. ಜಿಲ್ಲಾಧಿಕಾರಿ ಅವರು 2014-15ರಲ್ಲಿ ಕಟ್ಟಡ ನಿರ್ಮಾಣ ಮಾಡಲು ಅನುದಾನ ಮೀಸಲಿರಿಸಿದ್ದಾರೆ. ಕಾರಣಾಂತರಗಳಿಂದ ಅದನ್ನು ಈಗ ಪ್ರಾರಂಭಿಸಲಾಗುತ್ತಿದೆ’ ಎಂದರು. ಇನಾಯತ್ ಉಲ್ಲಾ ಶಾಬಂದ್ರಿ ಮಾತನಾಡಿ, ‘ಕಾಂಪೌಂಡ್ ನಿರ್ವಣಕ್ಕೆ ಪುರಸಭೆ ಪರವಾನಗಿ ತೆಗೆದುಕೊಳ್ಳಲಾಗಿದೆಯೇ?’ ಎಂದು ಪ್ರಶ್ನಿಸಿದರು. ಶಾಸಕರು ಮಾತನಾಡಿ, ‘ಪಟ್ಟಣದಲ್ಲಿ ನಿರ್ವಣವಾದ ಮಸೀದಿಗಳಿಗೆ ನೀವು ಪರವಾನಗಿ ತೆಗೆದುಕೊಂಡಿದ್ದೀರಾ ಇದ್ದರೆ ತೋರಿಸಿ’ ಎಂದರು. ಹೀಗೆ ಆರೋಪ-ಪ್ರತ್ಯಾರೋಪಗಳಲ್ಲೇ ಸಭೆ ಅಪೂರ್ಣಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts