More

    ಲಂಡನ್​ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್​

    ತುಮಕೂರು/ಬೆಂಗಳೂರು: ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 4ನೇ ಪುಣ್ಯ ಸಂಸ್ಮರಣೋತ್ಸವ (ಜ.21) ಹಿನ್ನೆಲೆಯಲ್ಲಿ ಲಂಡನ್​ನ ಲ್ಯಾಂಬೆತ್​​ ನಗರದ ಬಸವೇಶ್ವರ ಫೌಂಡೇಶನ್, ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು, ಅವರ ಆತ್ಮಕ್ಕಾಗಿ ಪ್ರಾರ್ಥಿಸಿದೆ.

    ಲಂಡನ್​ನ ಬಸವೇಶ್ವರ ಪ್ರತಿಮೆ ನಿರ್ಮಾಣ ಯೋಜನೆಗೆ ಶ್ರೀಗಳು ನೀಡಿದ ಬೆಂಬಲ ಮತ್ತು ಆಶೀರ್ವಾದಕ್ಕೆ ನಾವು ಋಣಿಯಾಗಿದ್ದೇವೆ. ಇದೇ ಸಂದರ್ಭದಲ್ಲಿ ಲಂಡನ್​ನಲ್ಲಿರುವ ಬಸವೇಶ್ವರ ಪ್ರತಿಮೆಗೂ ಮತ್ತು ಶಿವಕುಮಾರ್ ಸ್ವಾಮೀಜಿ ಅವರಿಗೂ ಇರುವ ಐತಿಹಾಸಿಕ ಸಂಬಂಧದ ಬಗ್ಗೆ ಕರ್ನಾಟಕದ ಜನತೆಗೆ ತಿಳಿಸಲು ಬಯಸುತ್ತೇವೆ ಎಂದು ಬಸವೇಶ್ವರ ಫೌಂಡೇಶನ್​ ಹೇಳಿದೆ.

    ಲಂಡನ್​ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್​

    12ನೇ ಶತಮಾನದ ಭಾರತೀಯ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಬಸವೇಶ್ವರರ ಪ್ರತಿಮೆಯನ್ನು ಲಂಡನ್‌ನ ಥೇಮ್ಸ್ ನದಿಯ ದಂಡೆಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಸ್ಥಾಪಿಸಲಾಯಿತು. ಅವರು ಅಂದು ಆಶೀರ್ವದಿಸಿ, ಅಡಿಪಾಯ ಹಾಕಿದ ಕಲ್ಲು ಇಂದಿಗೂ ಪ್ರತಿಮೆಯ ಕೆಳಗೆ ಶಾಶ್ವತವಾಗಿ ಹುದುಗಿದೆ.

    ಬಸವೇಶ್ವರ ಪ್ರತಿಮೆಯ ಶಿಲಾನ್ಯಾಸವನ್ನು 2013ರ ಫೆ. 17ರಂದು ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ನೆರವೇರಿಸಿದರು. ಅಲ್ಲದೆ, 2018ರ ನ. 20 ರಂದು ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಬಸವೇಶ್ವರ ಪ್ರತಿಮೆ ಮತ್ತು ಅದರ ಸುತ್ತಮುತ್ತಲಿನ ಬಸವೇಶ್ವರರ ಮೌಲ್ಯಗಳ ಮತ್ತು ಬೋಧನೆಗಳ ಪ್ರಚಾರಕ್ಕಾಗಿ ಅನುದಾನ ನೀಡುವಂತೆ ಮನವಿ ಮಾಡಿದ್ದರು.

    ಲಂಡನ್​ನ ಬಸವೇಶ್ವರ ಪ್ರತಿಮೆಗೆ ಶಿವಕುಮಾರ ಶ್ರೀಗಳ ಬೆಂಬಲ, ಆಶೀರ್ವಾದ ನೆನೆದ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್​

    ಶ್ರೀಗಳ ಆಶೀರ್ವಾದದೊಂದಿಗೆ ನಿರ್ಮಾಣವಾದ ಬಸವೇಶ್ವರರ ಪ್ರತಿಮೆಯನ್ನು 2015ರ ನ.14 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಥೇಮ್ಸ್ ನದಿಯ ದಡದಲ್ಲಿ ಅನಾವರಣಗೊಳಿಸಿದರು. ಈ ಪ್ರತಿಮೆ ಬ್ರಿಟಿಷ್ ಸರ್ಕಾರದಿಂದ ಅನುಮೋದಿಸಲ್ಪಟ್ಟ ಭಾರತೀಯ ತತ್ವಜ್ಞಾನಿಗಳ ಮೊದಲ ಪ್ರತಿಮೆಯಾಗಿದೆ ಮತ್ತು ಬ್ರಿಟಿಷ್ ನೆಲದಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆಗಳಲ್ಲಿ ಒಂದಾಗಿದೆ ಬಸವೇಶ್ವರ ಫೌಂಡೇಶನ್​ ತಿಳಿಸಿದೆ.

    ಶಿವಕುಮಾರ ಸ್ವಾಮೀಜಿ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಬಸವೇಶ್ವರ ಫೌಂಡೇಶನ್​ ಈ ನೆನಪಿನ ಬುತ್ತಿಯನ್ನು ಬಿಚ್ಚಿಡುವ ಮೂಲಕ ಮತ್ತೊಮ್ಮೆ ಶ್ರೀಗಳನ್ನು ನೆನಪಿಸಿ, ಲಂಡನ್​ನಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ಅವರು ನೀಡಿದ ಬೆಂಬಲ ಹಾಗೂ ವಹಿಸಿದ ವಿಶೇಷ ಕಾಳಜಿಯ ಬಗ್ಗೆ ಕನ್ನಡಿಗರಿಗೆ ತಿಳಿಸುವ ಮೂಲಕ ಗೌರವ ಸಲ್ಲಿಸಿದೆ.

    ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ: ಪುಣ್ಯ ಸಂಸ್ಮರಣೋತ್ಸವಕ್ಕೆ ಹರಿದುಬಂದ ಭಕ್ತಸಾಗರ

    ಗಣತಂತ್ರ ಪರೇಡ್ ನೌಕಾತಂಡಕ್ಕೆ ಕನ್ನಡತಿ ಸಾರಥ್ಯ; 144 ಸದಸ್ಯರ ತಂಡಕ್ಕೆ ದಿಶಾ ನೇತೃತ್ವ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ

    ಶಾಂತಿಭಂಗಕ್ಕೆ ಕಿಲ್ಲರ್​ ಸ್ಕ್ವಾಡ್: ಭಯೋತ್ಪಾದನೆ, ಕೋಮುದ್ವೇಷ, ಅಶಾಂತಿ ಸೃಷ್ಟಿಗೆ ಪಿಎಫ್​ಐ ಸಂಚು; ಎನ್​ಐಎ ತಂಡದ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts