More

  ಸಿದ್ಧಗಂಗಾ ಸ್ವಾಮೀಜಿ ಐದನೇ ವರ್ಷದ ಪುಣ್ಯಸ್ಮರಣೆ

  ಕುಶಾಲನಗರ: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಐದನೇ ವರ್ಷದ ಪುಣ್ಯಸ್ಮರಣೆ ಭಾನುವಾರ ಕುಶಾಲನಗರದ ಸೋಮೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು.

  ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಮತ್ತು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕುಶಾಲನಗರದ ಕಾಯಕ ಯೋಗಿಗಳಾದ ಪೌರ ಕಾರ್ಮಿಕರ ಸಮ್ಮುಖದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಸಾಮಾಜಿಕ ಹೋರಾಟಗಾರ ವಿ.ಪಿ. ಶಶಿಧರ್ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.

  ನಂತರ ಮಾತನಾಡಿದ ವಿ.ಪಿ.ಶಶಿಧರ್ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಏನೆಲ್ಲ ಸಾರ್ಥಕ ಸೇವೆ ಮಾಡಬಹುದೋ ಅದಕ್ಕಿಂತ ಮಿಗಿಲಾದ ಸೇವೆ ಮಾಡಿ ಜಗತ್ತು ಕಂಡ ಶ್ರೇಷ್ಠ ಸಂತರಾದರು. ಅವರು ಬದುಕಿದ್ದಾಗ ನಾವು ಬದುಕಿದ್ದೆವು ಎಂಬುದು ಸೌಭಾಗ್ಯ ಎಂದರು.

  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅವರನ್ನು ಸನ್ಮಾನಿಸಲಾಯಿತು. ಕುಶಾಲನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪಟ್ಟಾಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಗಣೇಶ್, ಉಪನ್ಯಾಸಕ ಗುರುಸ್ವಾಮಿ, ಟಿ.ಬಿ.ಮಂಜುನಾಥ, ಶಶಿಕುಮಾರ್, ಸಿದ್ದಗಂಗಾ ಭಕ್ತ ಮಂಡಳಿಯ ಕೆ.ಎಸ್ ಮೂರ್ತಿ, ಉಮೇಶ್, ಗಿರೀಶ್, ವೇದಾವತಿ, ನಟರಾಜು ಇದ್ದರು. ಪೂಜಾ ಕಾರ್ಯದ ಬಳಿಕ ಪೌರಕಾರ್ಮಿಕರಿಗೆ ದಾಸೋಹ ಹಮ್ಮಿಕೊಳ್ಳಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts