More

    ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ

    ಕೋಲಾರ: ಕೋಲಾರ ಅಭಿವೃದ್ಧಿ ಸಂಬಂಧವಾಗಿ ಈಗಾಗಲೇ 140 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸುತ್ತಿದ್ದಾರೆ. ಸಂಸದ ಮುನಿಸ್ವಾಮಿ ಅವರಿಗೆ ಆರೋಪ ಮಾಡುವುದೇ ಅಭ್ಯಾಸ ಆಗಿದೆ. ರಾಜ್ಯದಲ್ಲಿ ಈಗ ಅಧಿಕಾರದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಅರಿತುಕೊಳ್ಳಲಿ ಎಂದು ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು.
    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಮರ್ಥರು ಇದ್ದಾರೆ. ಇನ್ನೊಬ್ಬರ ಸಲಹೆ ಸೂಚನೆ ಬೇಕಾಗಿಲ್ಲ ಎಂದರು.
    ಕಾಂಗ್ರೆಸ್ ಪಕ್ಷದೊಳಗಿನ ಗೊಂದಲಗಳಿಂದ ಸರ್ಕಾರ ಹಿಟ್ ವಿಕೆಟ್ ಆಗಲಿದೆ ಎಂಬ ಕುವಾರಸ್ವಾಮಿ ಹೇಳಿಕೆಗೆ, ಕುವಾರಸ್ವಾಮಿ ನಮ್ಮ ಲೀಡರ್ ಅಲ್ಲ; ಅವರ ಹೇಳಿಕೆಗೆ ನಾನ್ಯಾಕೆ ಪ್ರತಿಕ್ರಿಯಿಸಬೇಕು? ಅವರು ಬೆಳಗ್ಗೆ, ಮಧ್ಯಾಹ್ನ, ಸಂಜೆ ಕಾಂಗ್ರೆಸ್ ಬಗ್ಗೆಯೇ ವಾತನಾಡುತ್ತಿರುತ್ತಾರೆ ಎಂದು ಲೇವಡಿ ಮಾಡಿದರು.

    ಸಿಬಿಐ ತನಿಖೆಗೆ ಅನುಮತಿ ನೀಡಿ ಹಿಂದಿನ ಬಿಜೆಪಿ ಸರ್ಕಾರ ತಪ್ಪು ಮಾಡಿದೆ. ಸಿಬಿಐ ತನಿಖೆಗೆ ಸಂಬಂಧಿಸಿದ ವಿಚಾರದಲ್ಲಿ ನ್ಯಾಯಾಲಯ ಡಿ.ಕೆ.ಶಿವಕುವಾರ್ ನಿಲುವನ್ನು ಎತ್ತಿ ಹಿಡಿದಿದೆ. ನಮಗೆ ನ್ಯಾಯಾಲಯವೇ ದೇವರು. ಈ ಬಗ್ಗೆ ಯಾರೂ ಟೀಕೆ ವಾಡಬಾರದು ಎಂದರು.
    ನಿಗಮ ಮಂಡಳಿಗೆ ನೇಮಕ ವಿಚಾರ ಹೈಕವಾಂಡ್ ನಿರ್ಧಾರಕ್ಕೆ ಬಿಟ್ಟದ್ದು. ಈಗಾಗಲೇ ಪಟ್ಟಿ ಅವರಿಗೆ ಹೋಗಿದೆ. ಅಲ್ಲಿಂದ ಒಪ್ಪಿಗೆ ಪಡೆದು ಬರಬೇಕಷ್ಟೇ. ಅಸವಾಧಾನ ತಣಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ. ನಮ್ಮನ್ನು ಗೆಲ್ಲಿಸಿರುವ ಜನರಿಗೆ ತೊಂದರೆ, ಅನ್ಯಾಯ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಪ್ರತಿಕ್ರಿಯಿಸಿದರು.

    ಸಮುದಾಯಗಳ ಜನಜೀವನ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದು, ಸಾವಾಜಿಕವಾಗಿ, ಶೈಕ್ಷಣಿಕವಾಗಿ ದುರ್ಬಲವಾಗಿರುವವರನ್ನು ಮೇಲೆತ್ತುವ ಉದ್ದೇಶವನ್ನು ಜಾತಿ ಗಣತಿ ಹೊಂದಿದೆ. ಜಾತಿ ಜನಸಂಖ್ಯೆ ತಿಳಿದುಕೊಳ್ಳುವ ಉದ್ದೇಶ ಇಲ್ಲ. ಕಾಂತರಾಜ್ ವರದಿ ಇನ್ನೂ ಸಚಿವ ಸಂಪುಟದ ಮುಂದೆ ಬಂದಿಲ್ಲ ಎಂದರು.
    ಆಳಂದ ಶಾಸಕ ಬಿ.ಆರ್.ಪಾಟೀಲ ಹಾಗೂ ಸಿದ್ದರಾಮಯ್ಯ 1983ರಿಂದ ಗೆಳೆಯರು. ಇಬ್ಬರೂ ಕುಳಿತು ವಾತನಾಡಿದ್ದು, ಸಮಸ್ಯೆ ಬಗೆಹರಿದಿದೆ. ನಾನೂ ಜತೆಯಲ್ಲಿದ್ದೆ. ಸಚಿವ ಕಷ್ಣಬೈರೇಗೌಡರು ಹೇಳಿದ್ದರಲ್ಲಿ ಹಾಗೂ ಬಿ.ಆರ್.ಪಾಟೀಲ ಅರ್ಥವಾಡಿಕೊಂಡಿದ್ದರಲ್ಲಿ ಗೊಂದಲ ಉಂಟಾದ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದು ಸ್ಪಷ್ಟನೆ ನೀಡಿದರು.

    ಕೋಲಾರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ, ಟಿಕೆಟ್ ಆಕಾಂಕ್ಷಿಗಳ ಸಂಬಂಧ ಎರಡು ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತತ್ವದಲ್ಲಿ ಸಭೆ ನಡೆಯಲಿದೆ. ಒಬ್ಬೊಬ್ಬರ ಮನಸ್ಸಿನಲ್ಲಿ ಒಬ್ಬರ ಹೆಸರಿರುತ್ತದೆ. ಅದನ್ನು ಸಭೆಯಲ್ಲಿ ವ್ಯಕ್ತಪಡಿಸುತ್ತಾರೆ. ಕೆ.ಎಚ್.ಮುನಿಯಪ್ಪ ಕೂಡ ಆಕಾಂಕ್ಷಿಯಾಗಿರಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts