More

    ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಸರ್ಕಾರ ಪತನ

    ಕೋಲಾರ: ಮುಂದಿನ ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರವು ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್​.ಪಾಟೀಲ್​ ನಡಹಳ್ಳಿ ಹೇಳಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನತೆ ಕೇಳದಿದ್ದರೂ ಗ್ಯಾರಂಟಿಗಳನ್ನು ಕೊಟ್ಟಿರುವ ಕಾಂಗ್ರೆಸ್​ ಈಗ ಸರ್ಕಾರ ನಿರ್ವಹಣೆ ಮಾಡಲು ಪರಿತಪಿಸುತ್ತಿದೆ. ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು.
    2014ರ ಮುಂಚೆ ದೇಶವು ಕಾಂಗ್ರೆಸ್​ ಆಡಳಿತದಿಂದ ರೋಸಿ ಹೋಗಿತ್ತು. ಅದನ್ನು ಅರಿತ ಜನತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಅಂದಿನಿಂದ ಇಂದಿನವರೆಗೂ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಕಾಣಲಾಗಿದೆ. ಜನತೆಯು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಪೂರಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
    ಕಾಂಗ್ರೆಸ್​ ಸರ್ಕಾರಕ್ಕೆ ರೈತರ, ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲ. ಅವರು ಅಧಿಕಾರ ನಡೆಸಿದ ಅವಧಿಯಲ್ಲಿ 2ಜಿ, ಕಾಮನ್​ವೆಲ್ತ್​ ಹೀಗೆ ಅನೇಕ ಹಗರಣಗಳೆ ನಡೆದು ಹೋದವು. ಆದರೆ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿಗೆ ಇಡೀ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಮತ್ತೊಮ್ಮೆಮೋದಿಯವರನ್ನು ಪ್ರಧಾನಿಯಾಗಿ ಮಾಡಲು ಬಿಜೆಪಿ ಸಾಧನೆಗಳ ಬಗ್ಗೆ ಜನರಿಗೆ ಅರಿವು ಹಾಗೂ ಕಾಂಗ್ರೆಸ್​ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸಲಾಗುವುದು. ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಹಣ ಮಂಜೂರು ಮಾಡಿ ಅಧಿವೇಶನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
    ಕೃಷಿಕಾಯ್ದೆ ರದ್ದಿನಿಂದ ಉತ್ಪನ್ನಗಳಿಗೆ ಬೆಲೆ ಇಲ್ಲ:
    ರೈತರ ಸಬಲೀಕರಣಕ್ಕಾಗಿ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ರಾಜ್ಯ ಸರ್ಕಾರವು ರದ್ದುಗೊಳಿಸಿತು. ಇದರಿಂದಾಗಿ ರೈತರ ಉತ್ಪಾದನೆಗಳಿಗೆ ಬೆಲೆ ಸಿಗುತ್ತಿಲ್ಲ. ಇಂತಹ ರೈತ ವಿರೋಧಿ ಸರ್ಕಾರವನ್ನು ಬೆಂಬಲಿಸಿರುವ ಜನತೆಯೆ ಈಗ ಪಶ್ಚಾತಾಪಪಡುತ್ತಿದ್ದಾರೆ. ಇದರಿಂದಾಗಿ ಬಹಳ ದಿನಗಳ ಕಾಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಎ.ಎಸ್​.ಪಾಟೀಲ್​ ನಡಹಳ್ಳಿ ಅಭಿಪ್ರಾಯಪಟ್ಟರು. ಕೇಂದ್ರ ಪುರಸತ ಯೋಜನೆಗಳಿಂದ ರಾಜ್ಯದಲ್ಲಿ 90 ಸಾವಿರ ಕೋಟಿ ರೂ. ಅನುದಾನ ಸಿಕ್ಕಿದೆ. 10 ವರ್ಷದಲ್ಲಿ ತೆರಿಗೆ ಪಾಲು 81 ಸಾವಿರ ಕೋಟಿ ರೂ. ಸಿಕ್ಕಿದ್ದು, ಇದ್ಯಾವುದು ಸರ್ಕಾರದ ಗಮನಕ್ಕೆ ಇಲ್ಲವೆ? ಇಲ್ಲಿಂದ ದೆಹಲಿಗೆ ಹೋಗಿ ಕೇಂದ್ರದ ವಿರುದ್ಧ ಹೋರಾಟ ನಡೆಸುವ ಅವಶ್ಯಕತೆಯೆನಿತ್ತು ಎಂದು ಪ್ರಶ್ನಿಸಿದರು.

    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್​ ಸರ್ಕಾರವು ರಾಜ್ಯದಲ್ಲಿ ವಾರಂಟಿಯಿಲ್ಲದ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್​ ನಾಯಕರು ಜೇಬಿನಲ್ಲಿ ಕತ್ತರಿ ಇಟ್ಟುಕೊಂಡು ಬಿಜೆಪಿ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್​ ಸರ್ಕಾರ ರಾಮನ ೋಟೊ ಹಾಕಲು ಬಿಡುತ್ತಿಲ್ಲ, ಕೇಂದ್ರದ ಅಭಿವೃದ್ಧಿ ಕೆಲಸಗಳಿಗೆ ಮೋದಿ ೋಟೊ ಹಾಕಲು ಅನುಮತಿ ನೀಡುತ್ತಿಲ್ಲ. ಇಂತಹ ಸರ್ಕಾರಕ್ಕೆ ಜನರೆೇ ಬುದ್ಧಿ ಕಲಿಸುವ ದಿನಗಳು ಸಮೀಪಿಸುತ್ತಿವೆ ಎಂದರು.
    ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾಧ್ಯಕ್ಷ ಡಾ.ಕೆ.ಎಸ್​.ವೇಣುಗೋಪಾಲ್​, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ತಿಮ್ಮರಾಯಪ್ಪ, ರೋಣೂರು ಚಂದ್ರಶೇಖರ್​, ಕೆಂಬೋಡಿ ನಾರಾಯಣಸ್ವಾಮಿ, ವಿ.ಶಿವಣ್ಣ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts