More

    ಕೋರ್ಟ್ ವಿಚಾರಣೆಗೆ ಬಂದಿದ್ದ ಕೈದಿ ಗುಪ್ತಾಂಗದಲ್ಲಿ ಮೊಬೈಲ್ ಪತ್ತೆ, ಪತ್ತೆಯಾಗಿದ್ದು ಹೇಗೆ..?

    ಬೆಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ಕೈದಿ, ಗುಪ್ತಾಂಗದಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಜೈಲು ಪ್ರವೇಶಕ್ಕೆ ಮುಂದಾದಾಗ ಭದ್ರತಾ ಸಿಬ್ಬಂದಿಗೆ ಸೆರೆಸಿಕ್ಕಿದ್ದಾನೆ.

    ಕೈದಿ ಸೈಯದ್ ಶಬಾಜ್ ಸೆರೆ ಸಿಕ್ಕವ. ಅಪರಾಧ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸೆರೆಯಾಗಿದ್ದಾನೆ. ಅ.12ರಂದು ಸಿಎಆರ್ ಅಧಿಕಾರಿಗಳು, ವಿಚಾರಣಾಧೀನ ಕೈದಿ ಸೈಯದ್ ಶಬಾಜ್‌ನ್ನು ನಗರದ ಎ್ಟಿಎಸ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ವಿಚಾರಣೆ ಮುಗಿದ ಮೇಲೆ ಅಧಿಕಾರಿಗಳು, ವಾಪಸ್ ಜೈಲಿಗೆ ಕರೆ ತಂದಿದ್ದರು. ವಿಚಾರಣಾಧಿನ ಕೈದಿ ಸೈಯದ್ ಶಬಾಜ್‌ನ್ನು ಒಳಗೆ ಬಿಟ್ಟುಕೊಳ್ಳುವ ಮೊದಲು ತಪಾಸಣೆ ನಡೆಸಿದಾಗ ಆತನ ಗುಪ್ತಾಂಗನದಲ್ಲಿ 1 ಮೊಬೈಲ್ ಪತ್ತೆಯಾಗಿದೆ. ಕೇಂದ್ರ ಕಾರಗೃಹದ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸೈಯದ್ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಗೆ ಜೈಲು ಅಧಿಕಾರಿಗಳು ದೂರು ಸಲ್ಲಿಸಿದ್ದರು.

    ಇದರ ಮೇರೆಗೆ ಕೈದಿ ಸೈಯದ್ ವಿರುದ್ಧ ಎ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನ್ಯಾಯಾಲಯಕ್ಕೆ ಬಂದ ಸಮಯದಲ್ಲಿ ಆತನ ಸಹಚರರು ಅಥವಾ ಸಂಬಂಧಿಕರು ಮೊಬೈಲ್ ಕೊಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಅವರು ಯಾರೆಂದು ಪತ್ತೆ ಹಚ್ಚಲು ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts