More

    ಭೂಪಸಂದ್ರ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

    ಶಿರಾ: ನಮ್ಮ ಶಾಲೆಯ ಜಮೀನು 2 ಎಕರೆ ಇದೆ, ಅದನ್ನು ನಮ್ಮ ಶಾಲೆಗೆ ಬಿಡಿಸಿಕೊಡಿ ಎಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ವಿನೋದ್ ಗಮನ ಸೆಳೆದರೆ, ಶೌಚಗೃಹ ಕೊಚ್ಚೆಗುಂಡಿಗಳಿಂದ ತುಂಬಿ ಕೊಂಡಿದೆ, ಯಾವಾಗ ಸ್ವಚ್ಛಗೊಳಿಸುತ್ತೀರಿ ಎಂದು ಜಿಎಚ್‌ಪಿಎಸ್ ಭೂಪಸಂದ್ರ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಹರಿಣಿ ಪ್ರಶ್ನಿಸಿದರು.

    ಇವು ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿ ಭೂಪಸಂದ್ರ ಗ್ರಾಮ ಪಂಚಾಯಿತಿ ವತಿಯಿಂದ ಅಯೋಜಿಸಿದ್ದ ಬುಧವಾರ ‘ಓದುವ ಬೆಳಕು’ ಕಾರ್ಯಕ್ರಮ ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಮಕ್ಕಳಿಂದ ಕೇಳಿಬಂದ ಪ್ರಶ್ನೆಗಳು, ಅಹವಾಲುಗಳು. ಶಾಲೆಯ ಮುಂದೆ ಚರಂಡಿ ನೀರು ಹರಿಯುತ್ತಿದೆ, ಮಕ್ಕಳು ಶಾಲೆಗೆ ಬರುವಾಗ ಮತ್ತು ಹೋಗುವಾಗ ಅದನ್ನು ತುಳಿದುಕೊಂಡೇ ಬರುಬೇಕು, ಶಾಲೆಯ ಸುತ್ತಮುತ್ತ ಸೊಳ್ಳೆಗಳು ಸಹ ಜಾಸ್ತಿಯಾಗಿದೆ, ಸ್ವಚ್ಛಗೊಳಿಸುವಂತೆ ಮಕ್ಕಳ ಪರವಾಗಿ ಮರುಳಪ್ಪನಹಳ್ಳಿ ಶಾಲೆಯ ಶಿಕ್ಷಕರು ಮನವಿ ಮಾಡಿದರು.

    ಮಕ್ಕಳ ಎಲ್ಲ ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ಇಂದು ಸಭೆಯಲ್ಲಿ ಬಂದಿರುವ ಎಲ್ಲ ಸಮಸ್ಯೆಗಳನ್ನು ಮುಂದಿನ ವರ್ಷದ ಮಕ್ಕಳ ಗ್ರಾಮಸಭೆಯೊಳಗೆ ಪರಿಹರಿಸುವುದಾಗಿ ಭರವಸೆ ನೀಡಿದರು. ಭೂಪಸಂದ್ರ ಗ್ರಾಪಂ ವಾರ್ಗದರ್ಶಕ ಅಧಿಕಾರಿ ನಾಗರಾಜು, ‘ಓದುವ ಬೆಳಕು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಟಕ ಆಪ್ತ
    ಸವಾಲೋಚಕಿ ಲತಾ ಚೈಲ್ಡ್ ಪೋರ್ನೋಗ್ರಫಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಪೋಸ್ಟರ್ ಆನಾವರಣಗೊಳಿಸಿದರು.
    ಸದಸ್ಯ ರಾಧಮ್ಮ, ಅನನ್ಯ ಯುವಜನ ಸಂದ ಅಧ್ಯಕ್ಷ ಕೆಂಪರಾಜು, ಅರಿವು ಯುವಜನ ಸಂದ ಸದಸ್ಯ ಭೂತರಾಜು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts