More

    ಉತ್ತರ ಕರ್ನಾಟಕದ ಅತ್ಯುತ್ತಮ ಐವಿಎಫ್ ಸೆಂಟರ್; ಸಂತಾನಹೀನರ ಆಶಾಕಿರಣ ಸರ್ವೋದಯ ಆಸ್ಪತ್ರೆ..

    ಧಾರವಾಡ: ಸಂತಾನಹೀನತೆ ಶಾಪ ಎಂಬಂತೆ ಸಮಾಜ ನಡೆದುಕೊಳ್ಳುತ್ತದೆ. ತಮ್ಮ ತಪ್ಪಿಲ್ಲದಿದ್ದರೂ ಮುಜುಗರ, ಕೀಳರಿಮೆಗೆ ಒಳಗಾಗುವ ಸಂದಿಗ್ಧತೆಯಲ್ಲಿ ಅದೆಷ್ಟೋ ಜನ ಸಿಲುಕುತ್ತಾರೆ. ಅದಕ್ಕಾಗಿಯೇ ಇರುವ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದರೆ ಸಂತಾನ ಲ ಸಾಧ್ಯ ಎನ್ನುವುದನ್ನು ವಿಜ್ಞಾನ ಕ್ಷೇತ್ರ ಸಾಬೀತುಪಡಿಸಿದೆ. ಇಲ್ಲಿನ ಗಿರಿನಗರದಲ್ಲಿರುವ ಸರ್ವೋದಯ ಆಸ್ಪತ್ರೆ, ಸಂತಾನಹೀನತೆ ಚಿಕಿತ್ಸೆ (ಐವಿಎಫ್) ಹಾಗೂ ಸಂಶೋಧನಾ ಕೇಂದ್ರ, ಸಂತಾನಹೀನರ ಆಶಾಕಿರಣವಾಗಿ ಹೊರಹೊಮ್ಮಿದೆ.

    ಡಾ. ಗೀತಾ ಭರತ್ (ಉತ್ತೂರ) ಅವರ ಕನಸಿನ ಕೂಸು ಸರ್ವೋದಯ ಮಹಿಳಾ ಆಸ್ಪತ್ರೆ. ಇಲ್ಲಿನ ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಬಳಿಯ ಗಿರಿನಗರದಲ್ಲಿ ತಲೆಎತ್ತಿರುವ ಅತ್ಯಾಧುನಿಕ ಹಾಗೂ ವಿಶ್ವದರ್ಜೆಯ ಸುಸಜ್ಜಿತ ಆಸ್ಪತ್ರೆ ಇದಾಗಿದೆ. ಒಂದೂವರೆ ವರ್ಷದಿಂದ ಐವಿಎಫ್ ಹಾಗೂ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಸಮಗ್ರತೆ, ಗುಣಮಟ್ಟದ ಸೇವೆ, ವೈಯಕ್ತಿಕ ಘನತೆಗೆ ಗೌರವ, ಮಾನವೀಯ ಸ್ಪರ್ಶ, ಸಹಾನುಭೂತಿ, ಕಾರ್ಯದಲ್ಲಿ ಬದ್ಧತೆ, ಸೇವೆಯಲ್ಲಿ ನೈತಿಕತೆ, ಉತ್ಕೃಷ್ಟತೆಗಾಗಿ ನಿರಂತರ ಪ್ರಯತ್ನದಂಥ ಮೌಲ್ಯಗಳನ್ನು ನಂಬಿದ್ದಾರೆ ಡಾ. ಗೀತಾ ಭರತ್ (ಉತ್ತೂರ) ಹಾಗೂ ಡಾ. ಗಾಯತ್ರಿ ಉದಗಟ್ಟಿ (ಉತ್ತೂರ).

    ಸಮಾಜದ ದೈಹಿಕ, ಮಾನಸಿಕ, ಶೈಕ್ಷಣಿಕ, ಕೌಟುಂಬಿಕ ಹಾಗೂ ನೈತಿಕ ಆರೋಗ್ಯ ಉಳಿಸಿ- ಬೆಳೆಸುವ ಎಲ್ಲ ವಿಧಾಯಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅಳಿಲು ಸೇವೆ ಸಲ್ಲಿಸುವುದು ಡಾ. ಗೀತಾ ಭರತ್ (ಉತ್ತೂರ) ಹಾಗೂ ಡಾ. ಗಾಯತ್ರಿ ಎ. ಉದಗಟ್ಟಿ (ಉತ್ತೂರ) ಅವರ ಕನಸು. ಸಂತಾನಹೀನತೆಯಿಂದ ಕೊರಗುತ್ತಿರುವ ಪ್ರತಿಯೊಬ್ಬ ದಂಪತಿಗೆ ಅವರದೇ ಆನುವಂಶಿಕ ಮಗುವನ್ನು ನೀಡುವುದು ಇವರ ಗುರಿ.

    ಸರ್ವೋದಯ ಆಸ್ಪತ್ರೆಯೇ ಏಕೆ?

    ವಿಜ್ಞಾನ- ತಂತ್ರಜ್ಞಾನ ಬೆಳೆದಂತೆ ನಗರಗಳಲ್ಲಿ ಐವಿಎ್ ಸೆಂಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂಥ ಸಂದರ್ಭದಲ್ಲಿ ಸರ್ವೋದಯ ಆಸ್ಪತ್ರೆಯೇ ಏಕೆ? ಎಂಬ ಪ್ರಶ್ನೆ ಸಹಜ. ಇಲ್ಲಿನ ಅತ್ಯಾಧುನಿಕ ಸೌಲಭ್ಯಗಳು, ತಜ್ಞ ವೈದ್ಯರ ತಂಡ ಇದಕ್ಕೆ ಉತ್ತರವಾಗಿದೆ. ಆಸ್ಪತ್ರೆಯು ಆಧುನಿಕ ತಂತ್ರಜ್ಞಾನವುಳ್ಳ ಅಲ್ಟ್ರಾಮಾಡರ್ನ್ ಲ್ಯಾಬ್ ಹೊಂದಿದೆ. ನೈತಿಕ ಮತ್ತು ಪಾರದರ್ಶಕ ವೈದ್ಯಕೀಯ ಸೇವೆ ಇಲ್ಲಿ ಲಭ್ಯ. ಅತ್ಯುತ್ತಮ ಲಿತಾಂಶ, ಪೂರಕ ಆಯುಷ್ ಚಿಕಿತ್ಸೆ, ಬೇರೆ ಜಿಲ್ಲೆ- ರಾಜ್ಯಗಳಿಂದ ಬಂದವರಿಗೆ ಕೈಗೆಟುವ ದರದಲ್ಲಿ ವಸತಿ ಸೌಲಭ್ಯ, ಬಡ, ಮಧ್ಯಮ ಹಾಗೂ ಎಲ್ಲ ವರ್ಗಗಳ ಜನರಿಗೆ ಕೈಗೆಟುವ ದರದಲ್ಲಿ ಚಿಕಿತ್ಸೆ, ತಜ್ಞರಿಂದ ಯೋಗ ಮತ್ತು ಪ್ರಾಣಾಯಾಮ ಚಿಕಿತ್ಸೆ, ಆಪ್ತಸಮಾಲೋಚನೆ ಇಲ್ಲಿ ಲಭ್ಯ. ಸಮಗ್ರವಾದ ಪರಿಕಲ್ಪನೆಯಿಂದ ದಂಪತಿಗಳಿಗೆ ಒತ್ತಡರಹಿತ ಪರಿಸರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆರ್ಥಿಕವಾಗಿ ತೊಂದರೆಯಲ್ಲಿರುವ ದಂಪತಿಗಳಿಗೆ ಸುಲಭ ಕಂತುಗಳಲ್ಲಿ ಮರುಪಾವತಿಸಬಹುದಾದ ಬಡ್ಡಿರಹಿತ ಸಾಲ ಸೌಲಭ್ಯವೂ ಇಲ್ಲಿದೆ.

    ಉತ್ತರ ಕರ್ನಾಟಕದ ಅತ್ಯುತ್ತಮ ಐವಿಎಫ್ ಸೆಂಟರ್; ಸಂತಾನಹೀನರ ಆಶಾಕಿರಣ ಸರ್ವೋದಯ ಆಸ್ಪತ್ರೆ..
    ಧಾರವಾಡದ ಸವೋದಯ ಮಹಿಳಾ ಆಸ್ಪತ್ರೆ, ಸಂತಾನಹೀನತೆ ಚಿಕಿತ್ಸೆ (ಐವಿಎಫ್) ಹಾಗೂ ಸಂಶೋಧನಾ ಕೇಂದ್ರ.

    ಒಂದು ಸೂರು, ಚಿಕಿತ್ಸೆ ಹಲವಾರು

    ಸರ್ವೋದಯ ಆಸ್ಪತ್ರೆ ಕೇವಲ ಐವಿಎಫ್ ಸೆಂಟರ್ ಅಲ್ಲ, ಮಹಿಳೆಯರ ಜೀವನದ ಎಲ್ಲ ಹಂತಗಳಲ್ಲಿ (ಕಿಶೋರಾವಸ್ಥೆಯಿಂದ ಋತು ಬಂಧದವರೆಗೆ) ಅವರ ಆರೋಗ್ಯ, ಅವಶ್ಯಕತೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡಿ, ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಒಂದು ಅನನ್ಯ ಸೇವಾ ಸಂಸ್ಥೆಯಾಗಿ ಬೆಳೆಯುವುದು ‘ಸರ್ವೋದಯ’ದ ಕನಸು. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಚಿಕಿತ್ಸೆಗಳೂ ಇಲ್ಲಿ ಲಭ್ಯ. ಗರ್ಭಿಣಿಯರ ಆರೈಕೆ, ನೈಸರ್ಗಿಕ ಪ್ರಸವ ಕೇಂದ್ರ, ಸ್ತ್ರೀರೋಗ ತಪಾಸಣೆ ಮತ್ತು ಚಿಕಿತ್ಸೆ, ಉದರ ದರ್ಶಕ ಶಸ್ತ್ರಚಿಕಿತ್ಸೆಗಳು, ಸ್ತ್ರೀಯರಲ್ಲಿ ಮೂತ್ರ ರೋಗಗಳು, ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ, ದಂಪತಿಗಳಿಗೆ ಶಿಶು ಜನನದ ಹಾಗೂ ಗರ್ಭಿಣಿಯರಿಗೆ ಯೋಗ ತರಗತಿಗಳು, ಚಿಕ್ಕ ಮಕ್ಕಳ ಹಾಗೂ ನವಜಾತ ಶಿಶು ವಿಭಾಗ, ಕುಟುಂಬ ಕಲ್ಯಾಣ ಸೇವೆಗಳು, ಕಿಶೋರಿಯರ ಆರೋಗ್ಯ ಸಮಸ್ಯೆಗಳ ಪರಿಹಾರ, ಎಲ್ಲ ವಯಸ್ಸಿನ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಸಂತಾನಹೀನತೆ ಚಿಕಿತ್ಸೆ, ಮಹಿಳಾ ಒಪಿಡಿ ಸೇರಿದಂತೆ ಮಹಿಳೆಯರ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಇಲ್ಲಿನ ತಜ್ಞ ವೈದ್ಯರು ಸದಾ ಸಿದ್ಧರಾಗಿದ್ದಾರೆ.

    ಅತ್ಯಾಧುನಿಕ ಸವಾಲುಗಳು

    ದಂಪತಿಯ ತಪಾಸಣೆ ಮತ್ತು ಆಪ್ತ ಸಮಾಲೋಚನೆ, ಕೃತಕ ವೀರ್ಯಧಾರಣೆ (ಐಯುಐ) ಪ್ರನಾಳ ಶಿಶು ಚಿಕಿತ್ಸೆ (ಐವಿಎ್/ ಐಸಿಎಸ್‌ಐ), ಮುಂದುವರಿದ ಭ್ರೂಣ ಸಂಸ್ಕರಣ (ಬ್ಲಾಸ್ಟೊಸಿಸ್ಟ್ ಕಲ್ಚರ್), ಲೇಸರ್ ಅಸಿಸ್ಟೆಡ್ ಹ್ಯಾಚಿಂಗ್ (ಲೇಸರ್‌ನ ಸಹಾಯದಿಂದ ಭ್ರೂಣದ ಮೊಟ್ಟೆಯೊಡೆಯುವಿಕೆ), ಭ್ರೂಣ ಬಯಾಪ್ಸಿ, ಭ್ರೂಣದ ಪೂರ್ವಭಾವಿ ಆನುವಂಶಿಕ ಪರೀಕ್ಷೆ (ಪಿಜಿಡಿ/ ಪಿಜಿಟಿ) ಅಂಡಾಣು, ವೀರ್ಯಾಣು ಮತ್ತು ಭ್ರೂಣಗಳ ಶೀತಲೀಕರಣ ಮತ್ತು ಸಂಗ್ರಹ, ಅಂಡಾಣುದಾನ/ ಬಾಡಿಗೆ ತಾಯಿ ಸೇವೆಗಳು, ಉದರ ದರ್ಶಕ ಶಸ್ತ್ರಚಿಕಿತ್ಸೆಗಳು, ವಯಸ್ಸಾದ ಮಹಿಳೆಯರಲ್ಲಿ ಹಾಗೂ ಕ್ಯಾನ್ಸರ್ ರೋಗಿಗಳಲ್ಲಿ ಫಲವತ್ತತೆ ಸಂರಕ್ಷಣೆ ಹಾಗೂ ದತ್ತು ಪಡೆಯಲು ನೆರವು.

    ತಜ್ಞ ವೈದ್ಯ ಸಹೋದರಿಯರಿಂದ ಅತ್ಯುತ್ತಮ ಸೇವೆ

    ಉತ್ತರ ಕರ್ನಾಟಕದ ಅತ್ಯುತ್ತಮ ಐವಿಎಫ್ ಸೆಂಟರ್; ಸಂತಾನಹೀನರ ಆಶಾಕಿರಣ ಸರ್ವೋದಯ ಆಸ್ಪತ್ರೆ..ಸರ್ವೋದಯ ಮಹಿಳಾ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರದ ಸಂಸ್ಥಾಪಕರಾದ ಡಾ. ಗೀತಾ ಭರತ್ (ಉತ್ತೂರ) ಅವರು ಮೂಲತಃ ರನ್ನ ನಗರಿ ಮುಧೋಳದವರು. ಎಸ್ಸೆಸ್ಸೆಲ್ಸಿಯನ್ನು ಕನ್ನಡ ಮಾಧ್ಯಮದಲ್ಲಿ ಓದಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದವರು. ನಂತರ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯು ವಿಜ್ಞಾನ, ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್‌ನಲ್ಲಿ ಎಂಬಿಬಿಎಸ್ ಮತ್ತು ಎಂ.ಎಸ್. (ಪ್ರಸೂತಿ ಮತ್ತು ಸೀರೋಗ ಶಾಸ್ತ್ರ) ಸ್ನಾತಕೋತ್ತರ ಶಿಕ್ಷಣ ಪಡೆದರು. ಪ್ರತಿಷ್ಠಿತ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೈದ್ಯಕೀಯ ಸೇವೆ ಆರಂಭಿಸಿ, ನಾಲ್ಕೂವರೆ ವರ್ಷ ಕಾರ್ಯನಿರ್ವಹಿಸಿದ ಅನುಭವಿ. ೨೦೦೯- ೨೦೨೧ರವರೆಗಿನ ೧೨ ವರ್ಷಗಳ ಕಾಲ ಧಾರವಾಡದಲ್ಲಿ ಪ್ರಸೂತಿ, ಸ್ತ್ರೀರೋಗ ತಜ್ಞರಾಗಿ ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ. ರಾಜೀವಗಾಂಧಿ ವಿಶ್ವವಿದ್ಯಾಲಯದಿಂದ ಉದರದರ್ಶಕ ಶಸಚಿಕಿತ್ಸೆಯಲ್ಲಿ ಫೆಲೋಷಿಪ್ ಪಡೆದ ಹಿರಿಮೆ ಡಾ. ಗೀತಾ ಅವರದು. ಅಲ್ಲದೆ, ೨೦೦೮ರಲ್ಲಿ ಲಂಡನ್‌ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಆಬ್ಸ್ಟ್ರೇಟ್ರಿಸಿಯನ್ ಆ್ಯಂಡ್ ಗೈನಾಕಾಲಾಜಿಸ್ಟ್‌ನ ಸದಸ್ಯತ್ವ (MRCOG) ಪಡೆದರು. ಇತ್ತೀಚೆಗಷ್ಟೆ ೨೦೨೦ರಲ್ಲಿ ಮಹಿಳಾ ಅರೋಗ್ಯ ಕ್ಷೇತ್ರದಲ್ಲಿ ಅವರ ಅನುಭವ ಮತ್ತು ಕೊಡುಗೆಯನ್ನು ಪರಿಗಣಿಸಿ ಡಾ. ಗೀತಾ ಭರತ್ ಅವರಿಗೆ ರಾಯಲ್ ಕಾಲೇಜ್ ಫೆಲೋಶಿಪ್ (FRCOG) ನೀಡಿ ಗೌರವಿಸಿದೆ. ರಾಯಲ್ ಕಾಲೇಜಿನ ಸದಸ್ಯತ್ವ ಮತ್ತು ಫೇಲೋಶಿಪ್ ಪಡೆದ ಉತ್ತರ ಕರ್ನಾಟಕದ ಕೆಲವೇ ಸ್ತ್ರೀರೋಗ ತಜ್ಞರಲ್ಲಿ ಡಾ. ಗೀತಾ ಒಬ್ಬರು. ಇವರು ಕೇರಳ, ಸಿಂಗಪುರ ಮತ್ತು ಜರ್ಮನಿಯಲ್ಲಿ ಪ್ರನಾಳ ಶಿಶು ಚಿಕಿತ್ಸೆಯಲ್ಲಿ ತರಬೇತಿ ಪಡೆದಿದ್ದಾರೆ. ತಮ್ಮ ದಶಕದ ಅನುಭವವನ್ನು ಕ್ರೋಡೀಕರಿಸಿ ೨೦೧೪ರಲ್ಲಿ ಧಾರವಾಡದಲ್ಲಿ ಸರ್ವೋದಯ ಮಹಿಳಾ ಆಸ್ಪತ್ರೆ ಮತ್ತು ಸಂತಾನಹೀನತೆ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. ೨೦೧೯ರಲ್ಲಿ ಗಿರಿನಗರದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಅತ್ಯಾಧುನಿಕ, ವಿಶ್ವ ದರ್ಜೆಯ ಪ್ರನಾಳ ಶಿಶು ಚಿಕಿತ್ಸಾ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿದ್ದಾರೆ.

    ಡಾ. ಗೀತಾ ಉತ್ತೂರ ಸಹೋದರಿ ಡಾ. ಗಾಯತ್ರಿ ಎ. ಉದಗಟ್ಟಿ (ಉತ್ತೂರ) ಅವರು ವಿಜಯಪುರದ ಅಲ್ ಅಮೀನ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಚೆನ್ನೈನ ಚೆಟ್ಟಿನಾಡ ವಿಶ್ವವಿದ್ಯಾಲಯದಲ್ಲಿ ಭ್ರೂಣಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ್ದಾರೆ. ಬೆಂಗಳೂರಿನ ಗುಣಶೀಲ ಐವಿಎಫ್ ಸೆಂಟರ್‌ನಲ್ಲಿ ಸುದೀರ್ಘ ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೩೦ಕ್ಕೂ ಹೆಚ್ಚು ಭ್ರೂಣಶಾಸ್ತ್ರಜ್ಞರಿಗೆ ತರಬೇತಿ ನೀಡಿದ ಹಿರಿಮೆ ಡಾ. ಗಾಯತ್ರಿ ಅವರದು. ಭ್ರೂಣಶಾಸ್ತ್ರದಲ್ಲಿ ಅಪಾರ ಅನುಭವ ಹೊಂದಿದ್ದಲ್ಲದೆ, ಇತ್ತೀಚಿನ ಬೆಳವಣಿಗೆಗಳಾದ ಭ್ರೂಣಬಯಾಪ್ಸಿ, ಎಂಬ್ರಿಯೋಸ್ಕೋಪ್, ಪ್ರಿಇಂಪ್ಲಾಂಟೇಶನ್, ಜೆನೆಟಿಕ್ ಡಯಗ್ನೋಸಿಸ್‌ನಲ್ಲಿ (ಪಿಜಿಡಿ) ಪರಿಣತಿ ಪಡೆದಿದ್ದಾರೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಭ್ರೂಣಶಾಸ್ತ್ರಜ್ಞರ ಸಮ್ಮೇಳನಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ ಹಿರಿಮೆ ಡಾ. ಗಾಯತ್ರಿ ಅವರಿಗೆ ಸಲ್ಲುತ್ತದೆ. ಇವರು ಪ್ರಸ್ತುತ ಸರ್ವೋದಯ ಆಸ್ಪತ್ರೆ, ಸಂತಾನಹೀನತೆ ಚಿಕಿತ್ಸೆ (ಐವಿಎಫ್) ಹಾಗೂ ಸಂಶೋಧನಾ ಕೇಂದ್ರದ ಚೀಫ್ ಎಂಬ್ರಿಯೋಲಾಜಿಸ್ಟ್ ಹಾಗೂ ಲ್ಯಾಬ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಆಸ್ಪತ್ರೆ ಸಂಪರ್ಕ

    ಸರ್ವೋದಯ ಫರ್ಟಿಲಿಟಿ ಆ್ಯಂಡ್ ಐವಿಎಫ್ ಸೆಂಟರ್,
    ಪೊಲೀಸ್ ತರಬೇತಿ ಶಾಲೆ ಹತ್ತಿರ, ಕಲಘಟಗಿ ರಸ್ತೆ,
    ಗಿರಿನಗರ, ಧಾರವಾಡ.
    ಮೊ: 63613 51318, 99720 74131
    ಇ ಮೇಲ್: [email protected]
    ವೆಬ್‌ಸೈಟ್: http://www.sarvodaywomenhospital.com

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts