More

    ಭಾರತದಲ್ಲಿ ಸರಾಸರಿ ವೇತನ 50 ಸಾವಿರ ರೂ.!; ಜಾಗತಿಕ ಪಟ್ಟಿಯಲ್ಲಿ 65ನೇ ಸ್ಥಾನ

    ಮೇ ದಿನ ಎಂದೇ ಪ್ರಖ್ಯಾತವಾದ ಅಂತಾರಾಷ್ಟ್ರೀಯ ಕಾರ್ವಿುಕ ದಿನದಂದು ಬಿಡುಗಡೆಯಾದ ವರದಿಯೊಂದರ ಪ್ರಕಾರ ಭಾರತದಲ್ಲಿ ಉದ್ಯೋಗಿಗಳ ಮಾಸಿಕ ವೇತನ ಸರಾಸರಿ 50,000 ರೂಪಾಯಿ ಆಗಿದೆ. ಪ್ರಪಂಚದಲ್ಲಿ ಹೆಚ್ಚು ಸಂಬಳ ನೀಡುವ ದೇಶವೆಂದರೆ ಅಮೆರಿಕ ಎಂಬ ಸಾಮಾನ್ಯ ಭಾವನೆ ಹುಸಿ ಎಂಬುದನ್ನು ಈ ವರದಿ ದೃಢಪಡಿಸಿದೆ. ವಾಸ್ತವವಾಗಿ ಅಮೆರಿಕ ನಾಲ್ಕನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ವೇತನ ನೀಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 65ನೇ ಸ್ಥಾನ ಪಡೆದಿದೆ ಎಂದು ‘ದಿ ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್’ ವರದಿ ಹೇಳಿದೆ. 23 ದೇಶಗಳಲ್ಲಿ ಸರಾಸರಿ ಮಾಸಿಕ ಸಂಬಳ 1 ಲಕ್ಷ ರೂಪಾಯಿಗಿಂತ ಜಾಸ್ತಿಯಿದೆ.

    4 ಲಕ್ಷ ರೂ. ವೇತನ!

    ಜಗತ್ತಿನ 3 ದೇಶಗಳ ನಾಗರಿಕರು ತಿಂಗಳಿಗೆ ಸರಾಸರಿ 4 ಲಕ್ಷ ರೂಪಾಯಿ ವೇತನ ಪಡೆಯುವ ಅದೃಷ್ಟವಂತರಾಗಿದ್ದಾರೆ. ಸ್ವಿಜರ್ಲೆಂಡ್ (4,98,567 ರೂ.), ಲಕ್ಸೆಂಬರ್ಗ್ (4,10,156) ಮತ್ತು ಸಿಂಗಾಪುರ (4,08,030 ರೂ.) ಇವೇ ಆ ಮೂರು ರಾಷ್ಟ್ರಗಳು.

    ಪಾಕ್​ಗೆ 104ನೇ ಸ್ಥಾನ: ಅಧಿಕ ಸಂಬಳದಾರರ ಜಾಗತಿಕ ಪಟ್ಟಿಯಲ್ಲಿ ಚೀನಾ 44, ಪಾಕಿಸ್ತಾನ 104ನೇ ಪಟ್ಟಿಯಲ್ಲಿದೆ

    ಟಾಪ್​ದೇಶಗಳು

    • ಸ್ವಿಜರ್ಲೆಂಡ್
    • ಲಕ್ಸೆಂಬರ್ಗ್
    • ಸಿಂಗಾಪುರ
    • ಅಮೆರಿಕ
    • ಐಸ್​ಲ್ಯಾಂಡ್
    • ಕತಾರ್
    • ಡೆನ್ಮಾರ್ಕ್
    • ಯುಎಇ
    • ನೆದರ್ಲೆಂಡ್ಸ್
    • ಆಸ್ಟ್ರೇಲಿಯಾ

    ಭಾರತಕ್ಕಿಂತ ಕಡಿಮೆ

    ಭಾರತಕ್ಕಿಂತ ಕಮ್ಮಿ ಸರಾಸರಿ ಮಾಸಿಕ ಸಂಬಳ ಕೊಡುವ ವಿಚಾರದಲ್ಲಿ ಪಾಕಿಸ್ತಾನವೂ (11,858 ರೂ.) ಸೇರಿದೆ. ಟರ್ಕಿ, ಬ್ರೆಜಿಲ್, ಅರ್ಜೆಂಟೀನಾ, ಇಂಡೋನೇಷ್ಯಾ, ಕೊಲಂಬಿಯಾ, ಬಾಂಗ್ಲಾದೇಶ, ವೆನಿಜುವೆಲಾ, ನೈಜೀರಿಯಾ, ಈಜಿಪ್ಟ್ ಈ ದೇಶಗಳ ಸಾಲಿನಲ್ಲಿವೆ. ಡೆನ್ಮಾರ್ಕ್ (2,89,358 ರೂ.), ಯುಎಇ (2,86,087), ನೆದರ್ಲೆಂಡ್ಸ್ (2,85,756), ಆಸ್ಟ್ರೇಲಿಯಾ (2,77,332 ರೂ.) ಮತ್ತು ನಾರ್ವೆ (2,68,990 ರೂ.) ವೇತನದ ಅಗ್ರ 10 ಪಟ್ಟಿಯಲ್ಲಿರುವ ಇತರ ಐದು ದೇಶಗಳಾಗಿವೆ. ಜರ್ಮನಿ ನಾಗರಿಕರು ಸರಾಸರಿ 2,49,771 ರೂ. ಹಾಗೂ ಬ್ರಿಟನ್​ನವರು 2,39,139 ರೂಪಾಯಿ ವೇತನ ಗಳಿಸುತ್ತಾರೆ.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts