More

    ಬರೆದಂತೆ ಬದುಕಿದ ಲೇಖಕಿ ಡಾ. ಅನುಪಮಾ

    ಅಣ್ಣಿಗೇರಿ: ಬರಹದಂತೆ ಬರಹಗಾರ ಬದುಕಬೇಕೆಂಬ ನಿಲುವು ತಾಳಿದವರು ಲೇಖಕಿ, ಹೋರಾಟಗಾರ್ತಿ ಎಚ್.ಎಸ್. ಅನುಪಮಾ ಎಂದು ಲಡಾಯಿ ಪ್ರಕಾಶನ ಮುಖ್ಯಸ್ಥ, ಸಾಹಿತಿ ಬಸವರಾಜ ಸೂಳಿಬಾವಿ ಅಭಿಪ್ರಾಯಪಟ್ಟರು.

    ಪಟ್ಟಣದ ನಿಂಗಮ್ಮ ಹೂಗಾರ ಕಾಲೇಜ್ ಆವರಣದಲ್ಲಿ ಇತ್ತೀಚೆಗೆ ರಾಜ್ಯಪ್ರಶಸ್ತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಪ್ರಾಚಾರ್ಯ ಎಸ್.ಎಸ್. ಹರ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಿನಲ್ಲಿ ನೀಡಲಾಗುವ ರಾಜ್ಯಮಟ್ಟದ ಈ ಪುರಸ್ಕಾರವನ್ನು ಈ ವರ್ಷ ಈಗಾಗಲೇ ಐವತ್ತು ಪುಸಕ್ತ ಬರೆದಿರುವ ಡಾ.ಎಚ್.ಎಸ್. ಅನುಪಮಾ ಅವರಿಗೆ ಕೊಡುತ್ತಿರುವುದು ಹೆಮ್ಮೆ ಹಾಗೂ ಸಂತಸದಾಯಕವಾಗಿದೆ ಎಂದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನುಪಮಾ ಅವರು, ಬರವಣಿಗೆ ಬರೀ ಅಕ್ಷರವಾಗಬಾರದು. ಬರಹವನ್ನು ಆಚರಣೆ ಪಟ್ಟಿಯಾಗಿ ನೋಡಬೇಕು. ಬರೆದಂತೆ ಬದುಕಲು ಸಾಧ್ಯವಾಗಬೇಕು. ಸದ್ಯದ ವ್ಯವಸ್ಥೆಯಲ್ಲಿ ಸತ್ಯದ ನಾಲಿಗೆ ಕತ್ತರಿಸಿ ಬೀದಿಯಲ್ಲಿ ಬಿಸಾಕುತ್ತಿರುವ ಸದ್ದು ಕೇಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಅನಿಷ್ಠ ಆಚರಣೆಗಳಿಂದ ಪಾರಾಗದೇ ದೇಶಕ್ಕೆ ಭವಿಷ್ಯವಿಲ್ಲ. ಮನುಷ್ಯ ಕುಲವೆಲ್ಲವೂ ಒಂದೇ ಎಂದು ಸಾರಿದ ಪಂಪನಂತೆ ಲಿಂ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಈ ಭಾಗದಲ್ಲಿ ಭಾವೈಕ್ಯದ ಬೀಜ ಬಿತ್ತಿ ಹೋಗಿದ್ದಾರೆ ಎಂದರು.

    ಅನ್ವರ ಹುಬ್ಬಳ್ಳಿ, ಸುಧಾ ಕೌಜಗೇರಿ, ಮಲ್ವಿಕಾರ್ಜುನ ಸುರಕೋಡ, ಡಾ. ಗೀತಾ ಹರ್ಲಾಪೂರ, ಅರ್ಜುನ ಕಲಾಲ, ಎಚ್.ಡಿ. ಡಬರಿ, ಕುಸುಮಾ ಉಳ್ಳಾಗಡ್ಡಿ, ವಿ.ಎಂ. ಹಿರೇಮಠ, ಹಾಲಪ್ಪ ತುರ್ಕಾಣಿ, ಶಿವಯೋಗಿ ಹುಬ್ಬಳ್ಳಿ, ಶಶಿಧರ ಹರ್ಲಾಪೂರ, ಷಣ್ಮುಖ ಗುರಿಕಾರ, ಭಗವಂತಪ್ಪ ಪುಟ್ಟಣ್ಣವರ, ಮೃತ್ಯುಂಜಯ ನವಲಗುಂದ, ವೀರೇಶ ಶಾನುಭೋಗರ, ಡಿ.ಬಿ. ಗವಾನಿ, ಶರೀಫ ಬಿಳಿಯಲಿ, ರಾಮಚಂದ್ರ ಹಂಸನೂರ, ಮುತ್ತು ಬಿಳಿಯಲಿ, ಪರಶುರಾಮ ಕಾಳೆ, ರವೀಂದ್ರ ಹೊನವಾಡ , ಎನ್.ಬಿ. ಬೀರಣ್ಣವರ , ಎ.ಆರ್. ಅಕ್ಕಿ , ಬಿ.ಆರ್. ದಿವಟರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts