More

    ಕುಂಬಾರಿಕೆ ಕಲೆಗಿದೆ ಐತಿಹಾಸಿಕ ಹಿನ್ನಲೆ

    ಶಿಗ್ಗಾಂವಿ: ಪುರಾತನ ಕಾಲದ ಕುಂಬಾರಿಕೆ ಕಲೆ ಆರಾಧನೆ, ಆಚರಣೆ ಹಿನ್ನೆಲೆಯಲ್ಲಿ ಬಂದಿರುವಂತಹದು. ಮಣ್ಣು ಇಡೀ ಜೀವ ಸಂಕುಲಕ್ಕೆ ಬೇಕಾಗಿದೆ. ನಮ್ಮ ಜನಪದರು ಅದನ್ನು ಕೃಷಿಯಿಂದ ಹಿಡಿದು ಎಲ್ಲ ರೀತಿಯಿಂದ ಬಳಸಿಕೊಂಡಿದ್ದಾರೆ. ಇದಕ್ಕೆ ಕುಂಬಾರಿಕೆಯೂ ಒಂದು ಉದಾಹರಣೆಯಾಗಿದೆ ಎಂದು ಜಾನಪದ ವಿವಿ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ ಹೇಳಿದರು.

    ತಾಲೂಕಿನ ಗೋಟಗೋಡಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಜನಪದ ಕಲಾ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಕುಂಬಾರಿಕೆ ಕಲಾ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಕಲಾ ಶಿಕ್ಷಕ ಡಾ. ಮಲ್ಲೇಶ ಮಾತನಾಡಿ, ಕಲೆ ಎನ್ನುವುದು ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವ ಕೆಲಸ. ಅದನ್ನು ಪೋಷಿಸಿ ಬೆಳೆಸುವಂತಹ ಕೆಲಸ ಜಾನಪದ ವಿಶ್ವವಿದ್ಯಾಲಯ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

    ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ ಮಾತನಾಡಿ, ಕುಂಬಾರಿಕೆ ಇಂದು ನಿನ್ನೆಯದಲ್ಲ, ಪ್ರಾಚೀನವಾದದ್ದು. ಅದಕ್ಕೆ ತನ್ನದೇ ಆದ ವಿಶೇಷತೆ, ನೈಪುಣ್ಯ ಇದೆ. ಈ ವಿಶೇಷ ಕಲೆಯನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಬೇಕಾಗಿದೆ ಎಂದರು.

    ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ, ಹಿರಿಯ ಸಂಶೋಧನಾಧಿಕಾರಿ ಡಾ. ಪ್ರೇಮಕುಮಾರ, ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ, ಡಾ.ಆನಂದಪ್ಪ ಜೋಗಿ, ಜನಪದ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ, ಡಾ.ವಿಜಯಲಕ್ಷ್ಮೀ ಗೇಟಿಯವರ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts